ಒಡಿಶಾದ ಕಟಕ್ ಸಮೀಪದ ನೆರ್ಗುಂಡಿ ನಿಲ್ದಾಣದ ಬಳಿ ಬೆಂಗಳೂರು-ಕಾಮಾಕ್ಯ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ 11 ಬೋಗಿಗಳು ಭಾನುವಾರ (ಮಾ.30) ಹಳಿತಪ್ಪಿವೆ.
ಬೆಳಿಗ್ಗೆ 11.54ರ ಸುಮಾರಿಗೆ ರೈಲು ಹಳಿತಪ್ಪಿದೆ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಅಧಿಕೃತ ಮೂಲಗಳು ತಿಳಿಸಿವೆ. ಖುರ್ದಾ ರೋಡ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ), ಇಸಿಒಆರ್‌ನ ಜನರಲ್ ಮ್ಯಾನೇಜರ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ರವಾನಿಸಲಾಗಿದೆ.
ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದರ ಕುರಿತು ರೈಲ್ವೆ ಅಧಿಕಾರಿಗಳು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಘಟನೆ ಹಿನ್ನೆಲೆ ಈ ಮಾರ್ಗವಾಗಿ ಸಂಚರಿಸಬೇಕಿದ್ದ ಹಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಇಸಿಒಆರ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳಿ ತಪ್ಪಿದ ರೈಲಿನಲ್ಲಿದ್ದ ಪ್ರಯಾಣಿಕರು ನಿಗದಿತ ಸ್ಥಳಗಳಿಗೆ ತಲುಪಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ನಂತರ ರೈಲಿನ ಪುನಃಸ್ಥಾಪನೆ ಕಾರ್ಯ ಪ್ರಾರಂಭಿಸಲಾಗುವುದು ಎಂದು ಇಸಿಒಆರ್ ಅಧಿಕಾರಿಗಳು ಹೇಳಿದ್ದಾರೆ.
ಡ್ರಗ್ಸ್ ವಿರುದ್ಧ ಸಮರಕ್ಕಿಳಿದ ‘ಫರೀಷಾ ಆಬಿದ್’: ಪಂಚಾಯತ್ ಅಧ್ಯಕ್ಷೆಯ ಬೆನ್ನಿಗೆ ನಿಂತ ಜನತೆ


