ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ನಗರದ ಹಲವು ಪ್ರದೇಶಗಳು ಮತ್ತೆ ಜಲಾವೃತಗೊಂಡಿದೆ. ಅಕ್ಟೋಬರ್ 17 ರವರೆಗೆ ಬೆಂಗಳೂರಿನಲ್ಲಿ 1,706 ಮಿಮೀ ಮಳೆಯಾಗಿದೆ ಎಂದು ವರದಿಗಳು ಹೇಳಿವೆ. ಇದು ರಾಜ್ಯದ ಅತ್ಯಂತ ಹೆಚ್ಚು ಮಳೆ ಸುರಿದ ವರ್ಷವೆಂದು ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 19ರ ಬುಧವಾರದಂದು ಬೆಂಗಳೂರಿನ ಸೀಗೇಹಳ್ಳಿಯಲ್ಲಿ 81.5 ಮಿಮೀ ಮಳೆಯಾಗಿದ್ದು, ದೊಡ್ಡಬನಹಳ್ಳಿಯಲ್ಲಿ 78 ಮಿಮೀ ಮಳೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅದೇ ದಿನ ದೊಡ್ಡನೆಕುಂದಿಯಲ್ಲಿ 67.5 ಮಿ.ಮೀ ಮಳೆಯಾಗಿದ್ದರೆ, ಮಹದೇವಪುರದಲ್ಲಿ (ಎಚ್‌ಎಎಲ್ ವಿಮಾನ ನಿಲ್ದಾಣ ವಲಯ) 66 ಮಿ.ಮೀ ಮಳೆಯಾಗಿದೆ.
Koramangala while returning from work today. Cannot be more grateful to people helping in this condition. 🙏#bengalururains pic.twitter.com/35mkP3IsSx
— Aishwarya (@aishwaryajayant) October 19, 2022
ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಶೇಷಾದ್ರಿಪುರಂ ಬಳಿ ಮೆಟ್ರೋ ತಡೆಗೋಡೆ ಕುಸಿದಿದ್ದು, ಹಲವು ವಾಹನಗಳು ಜಖಂಗೊಂಡಿದೆ. ನಗರದ ಹಲವೆಡೆ ನೀರು ನಿಂತಿದ್ದು, ಜನದಟ್ಟಣೆಯಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ: ಐದು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಭಾರೀ ಮಳೆ: ಹವಮಾನ ಇಲಾಖೆ ಮುನ್ಸೂಚನೆ
ನಗರದ ಶೇಷಾದ್ರಿಪುರಂ, ಫ್ರೀಡಂ ಪಾರ್ಕ್ ಮತ್ತು ಬಾಣಸವಾಡಿ ಬಳಿಯ ರೈಲ್ವೆ ಅಂಡರ್‌ಪಾಸ್‌ನಿಂದ ನೀರು ಹರಿಯುವ ಬಗ್ಗೆ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ದೂರುಗಳು ಬಂದಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
This is'nt a river,its my building's basement.#bbmp #bengalururains pic.twitter.com/NFU2wmr5o8
— Jeeshan Kohli (@JeeshanKohli) October 20, 2022
ಹೊರ ವರ್ತುಲ ರಸ್ತೆ, ಮಹದೇವಪುರ-ಮಾರತಹಳ್ಳಿ ನಡುವೆ, ಕೋರಮಂಗಲ, ಇಂದಿರಾನಗರ ಹಾಗೂ ಕೆಎಚ್ (ಡಬಲ್) ರಸ್ತೆ ಸೇರಿದಂತೆ ಇತರೆ ಪ್ರದೇಶಗಳು ಮಳೆಯಿಂದಾಗಿ ಜಲಾವೃತಗೊಂಡಿತ್ತು. ಮಳೆಯಿಂದಾಗಿ ನಗರದ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆಗೆ ಯೆಲ್ಲೋ ಅಲರ್ಟ್ ಘೋಷಣೆ: ಏನಿವು ಅಲರ್ಟ್‌ಗಳು?
ಗುರುವಾರ ಮತ್ತು ಶುಕ್ರವಾರ ಅಕ್ಟೋಬರ್ 20 ಮತ್ತು 21 ರಂದು ಕರಾವಳಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಗುಡುಗು ಸಹಿತ ಬಿರುಗಾಳಿ ಎಚ್ಚರಿಕೆ ನೀಡಲಾಗಿದೆ.
#BengaluruRain #BengaluruMetro #Bengaluru
Due to night rainfall, Namma Metro retaining wall collapses near Seshadripuram on Wednesday night. Water logging reported in many roads of the city bringing traffic to halt in many areas. @IndianExpress pic.twitter.com/Y4e2i89JxD— Kiran Parashar (@KiranParashar21) October 19, 2022
ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಅಕ್ಟೋಬರ್ 19 ರಂದು ಭಾರಿ ಮಳೆಯಾಗಿದೆ.
#Motorists trying to stop their bikes from getting washed away…scene in Shivajinagar
We will like to thank MLA @ArshadRizwan for giving such adventure opportunities to us in #NammaBengaluru#bangalorerains #BengaluruRain #bengaluru pic.twitter.com/TwuoKibbEq
— Kamran (@CitizenKamran) October 20, 2022
ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ ಸಾಧ್ಯತೆ, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಯಲ್ಲೊ ಅಲರ್ಟ್
ಅಕ್ಟೋಬರ್ 20 ರಂದು ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಮಂಡ್ಯ ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳಿಗೂ ಹಳದಿ ಎಚ್ಚರಿಕೆ (ಅತಿ ಭಾರೀ ಮಳೆ) ನೀಡಲಾಗಿದೆ.


