Homeಕರ್ನಾಟಕಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?

ಅಡಿಕೆ ಬೆಳೆಗಾರರನ್ನು ರಕ್ಷಿಸುವರೆ ಈ ಆರು ಜನ ಮಾನಗೇಡಿ ಸಂಸದರು?

- Advertisement -
- Advertisement -

ಅಡಿಕೆ ಬೆಳೆಯ ಮೇಲೆ ಅವಲಂಬಿತರಾಗಿ ಬದುಕು ಕಟ್ಟಿಕೊಂಡವರಿಗೆ ಕೇಂದ್ರ ಸರ್ಕಾರಗಳ ಎಡವಟ್ಟು ವಾಣಿಜ್ಯ ನೀತಿಗಳು ಲಾಗಾಯ್ತಿನಿಂದ ಒಂದಲ್ಲಾ ಒಂದು ಆತಂಕ ತಂದೊಡ್ಡುತ್ತಲೇ ಇವೆ. ದೇಶದ ಐದಾರು ರಾಜ್ಯದಲ್ಲಿ ಅಡಿಕೆ ಬೆಳೆಯಲಾಗುತ್ತಿದೆಯಾದರೂ ಕರ್ನಾಟಕದಲ್ಲೇ ಅತೀಹೆಚ್ಚು. ದೇಶದ ಶೇಕಡಾ 61 ರಷ್ಟು ಅಡಿಕೆಯನ್ನು ಕರ್ನಾಟಕವೊಂದೇ ಉತ್ಪಾದಿಸುತ್ತದೆ. ಕರ್ನಾಟಕದಲ್ಲಿ 2.61 ಲಕ್ಷ ಹೆಕ್ಟೇರ್ ಅಡಿಕೆ ಕೃಷಿ ಪ್ರದೇಶವಿದೆ. ಅಡಿಕೆ ವಹಿವಾಟು ಲಕ್ಷಾಂತರ ಕುಟುಂಬಕ್ಕೆ ಆಧಾರ. ಆದರೆ ಅಡಿಕೆ ಬೆಲೆಯಂತೆಯೇ ಅದರ ಬೆಳೆಗಾರರ ಬದುಕೂ ಅಸ್ಥಿರ.

ಚೀನಾ, ಮಯನ್ಮಾರ್, ಇಂಡೋನೇಷ್ಯಾ ಮುಂತಾದ ವಿದೇಶಗಳಲ್ಲಿ ಕಳಪೆ ಅಡಿಕೆಯ ಆಮದಿಗೆ ಯಾವಾಗ ಅವಕಾಶ ಕೊಡಲಾಯಿತೋ ಆಗ ಸ್ಥಳೀಯ ಅಡಿಕೆ ಕೃಷಿಕರು ತತ್ತರಿಸಿಹೋದರು! ಹೊರಗಿನ ಕೆಟ್ಟ ಅಡಿಕೆ ಜತೆ ಇಲ್ಲಿಯ ಉತ್ಕೃಷ್ಟ ಗುಣಮಟ್ಟದ ಅಡಿಕೆ ಸೇರಿಸಿ ಮಧ್ಯವರ್ತಿಗಳು ದೊಡ್ಡ ಫಾಯ್ದೆ ಬಾಚಿದರು. ಈ ಗೋಲ್‌ಮಾಲ್‌ನಿಂದ ಭಾರತದ ಅದರಲ್ಲೂ ಕರ್ನಾಟಕದ ಅಡಿಕೆ ತೋಟಿಗರ ಬದುಕು ಬರ್ಬಾದ್ ಆಗಿಹೋಯಿತು. ಈ ಅನಾಹುತದ ಅರಿವಾದಾಗ ಅಂದಿನ ಯುಪಿಎ ಸರ್ಕಾರ ಆಮದು ಸುಂಕ ಹೆಚ್ಚಿಸಿತು. ಆಗ ಹೊರಗಿನ ಅಡಕೆ ಬರುವುದು ಕಮ್ಮಿಯಾಗಿ ನಮ್ಮ ರೈತರಿಗೆ ಹೆಚ್ಚು ಧಾರಣೆ ಸಿಕ್ಕಿತು.

ನಂತರ ಗುಜರಾತ್ ಮೂಲದ ಗುಟ್ಕಾ ಮಾಫಿಯಾ ಅಡಿಕೆಗೆ ಗಂಟು ಬಿದ್ದು ರೈತರನ್ನು ಕಾಡಿತು. ಸಿಗರೇಟ್ ಲಾಬಿಯೂ ಸತಾಯಿಸಿತು. ಯುಪಿಎ-2 ಸರ್ಕಾರ ಇದ್ದಾಗ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ಅಫಿಡವಿಟ್ ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿತ್ತು. ಇದು ಅಡಿಕೆ ತೋಟಿಗರಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿತು. 2014ರ ಲೋಕಸಭಾ ಇಲೆಕ್ಷನ್‌ನಲ್ಲಿ ಬಿಜೆಪಿ ಕರ್ನಾಟಕದ ಮಲೆನಾಡು, ಅರೆಮಲೆನಾಡು ಮತ್ತು ಕರಾವಳಿಯಲ್ಲಿ ಈ “ಕ್ಯಾನ್ಸರ್” ಭೂತವನ್ನೇ ಅಸ್ತ್ರವಾಗಿ ಬಳಸಿ ಕಾಂಗ್ರೆಸನ್ನು ಹಣಿಯಿತು. ಕಾಂಗ್ರೆಸಿಗರು ಅಡಿಕೆ ಬೆಳೆಗಾರರ ಶತ್ರುಗಳು ಮತ್ತು ತಾವು ಮಾತ್ರ ರಕ್ಷಕರು ಎಂಬಂತೆ ಬಿಂಬಿಸಿದರು. ಗೊಂದಲದಲ್ಲಿದ್ದ ಅಡಿಕೆ ಬೆಳೆಗಾರರು ಬಿಜೆಪಿಗರ ಮೋಸಕ್ಕೆ ಮರುಳಾದರು. ಅಡಿಕೆ ಬೆಳೆಯುವ ಐದಾರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಲಾಭಮಾಡಿಕೊಂಡಿತು.

ಅಸಹಾಯಕರನ್ನು ದಿಕ್ಕು ತಪ್ಪಿಸಿ ಗೆಲ್ಲುವುದರಲ್ಲಿ ನಿಸ್ಸೀಮರಾದ ಕೇಸರಿ ಪಡೆಯವರು ಗೆದ್ದ ಬಳಿಕ ಅಡಿಕೆ ಬೆಳೆಗಾರರನ್ನು ಮರೆತೇ ಬಿಟ್ಟರು! ಅಡಿಕೆ ಬೆಳೆಗಾರರ ಸಾರಾಸಗಟು ಬೆಂಬಲದಿಂದ ಎಂಪಿಯಾಗಿದ್ದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗಡೆ, ರಾಘವೇಂದ್ರ, ಜಿ.ಎಂ.ಸಿದ್ದೇಶ್, ಹಾವೇರಿಯ ಉದಾಸಿ ಇವರೆಲ್ಲರೂ ಅಡಿಕೆ ಬೆಳೆಗೊಂದು ಸ್ಥಿರ ಮಾರುಕಟ್ಟೆ ಒದಗಿಸುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ಅದಕ್ಕಿಂತ ದೊಡ್ಡ ದ್ರೋಹವೆಂದರೆ, ತಮ್ಮದೇ ಸರ್ಕಾರ ಕೇಂದ್ರದಲ್ಲಿದ್ದರೂ ಸುಪ್ರೀಂ ಕೋರ್ಟ್ನಲ್ಲಿದ್ದ “ಕ್ಯಾನ್ಸರ್” ಪ್ರಮಾಣಪತ್ರ ವಾಪಸ್ ಪಡೆಯುವ ಬಗ್ಗೆಯೂ ಯೋಚಿಸಲೇ ಇಲ್ಲ!!

ಅಷ್ಟೇ ಅಲ್ಲ, ಮೋದಿ ಸರ್ಕಾರದ ಆರೋಗ್ಯ ಇಲಾಖೆಯ ಸಹಾಯಕ ಮಂತ್ರಿಣಿ ಲೋಕಸಭೆಯಲ್ಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದಿದ್ದರು! ಮೋದಿ ಬಳಗದ ಈ ಅಭಿಪ್ರಾಯ ಕೇಸರಿ ಸರ್ಕಾರ್-2ರಲ್ಲೂ ಬದಲಾಗಿಲ್ಲ. ಇಂಥದೇ ಮಾತು ಕೆಲದಿನಗಳ ಹಿಂದೆ ಪಾರ್ಲಿಮೆಂಟ್‌ನಲ್ಲಿ ಆರೋಗ್ಯ ಇಲಾಖೆಯ ಮರಿ ಮಂತ್ರಿ ಹೇಳಿದ್ದರು. ಇಷ್ಟಾದರೂ ರಾಜ್ಯದ ಅಡಿಕೆ ಏರಿಯಾದ ಸಂಸದ ಶಿಖಾಮಣಿಗಳು ತಲೆ ಕೆಡಿಸಿಕೊಳ್ಳಲಿಲ್ಲ. ಯಾವಾಗ ಅಡಿಕೆ ತೋಟಿಗರಲ್ಲಿ ಹಾಹಾಕಾರ ಎದ್ದು ಬೊಬ್ಬೆ ಶುರುವಾಯಿತೋ ಆಗ ಬೆಚ್ಚಿಬಿದ್ದ ಸಂಸದರು ಶೋಭಕ್ಕನ ಮುಂದಿಟ್ಟುಕೊಂಡು ಆರೋಗ್ಯ ಮಂತ್ರಿಗೊಂದು ಮನವಿ ಕೊಟ್ಟು ಕೈತೊಳೆದುಕೊಂಡರು. ಆ ಫೋಟೋ ಟಿವಿ-ಪತ್ರಿಕೆಗಳಲ್ಲೂ ಹಾಕಿಸಿಕೊಂಡು ಯಥಾಪ್ರಕಾರ ತಾವು ಅಡಿಕೆ ಬೆಳೆಗಾರರ ಉದ್ಧಾರಕ್ಕೆಂದೇ ಜೀವತಳೆದ ಎಂಪಿಗಳೆಂಬಂತೆ ಪೋಸುಕೊಟ್ಟರು.

ಅಡಿಕೆ ಬೆಳೆಗಾರರು ಮಾತ್ರ ಈ ಗಿಮಿಕ್ ಸಂಸದರನ್ನು ನಂಬುವ ಸ್ಥಿತಿಯಲ್ಲಿಲ್ಲ. ಗುಟ್ಕಾ ನಿಷೇಧವಾದಾಗ ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣ ಆಗಿತ್ತಾದರೂ ಆರೊಗ್ಯದ ಕಾರಣಕ್ಕೆ ಏನೂ ಮಾಡದಂತಾಗಿತ್ತು. ಆದರೆ ತೀರಾ ಈಚೆಗೆ ರಾಜಸ್ಥಾನ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಸುವಾಸನೆಯ ಸಿಹಿ ಅಡಿಕೆ ಮಾರಾಟವನ್ನು ನಿಷೇಧಿಸಲಾಯಿತು. ಆಗಲೂ ಅಡಕೆ ಬೆಳೆಗಾರರ ಗೋಳು ಆರು ಸಂಸದರಿಗೆ ಅರ್ಥವಾಗಲಿಲ್ಲ!! ಮೋಸಗಾರರ ಗೆಲ್ಲಿಸಿದ ಪ್ರಾರಬ್ಧಕ್ಕೆ ಅಡಿಕೆ ಬೆಳೆಗಾರರೀಗ ಹಣೆಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಈಗ ಆಳುವ ಬಿಜೆಪಿಯವರಿಂದ ಅಡಿಕೆ ತೋಟಗಾರಿಕೆಗೆ ಆರ್‌ಸಿಇಪಿ (ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ)ಯ ಕಂಟಕ ಎದುರಾಗಿದೆ. ಆಗ್ನೇಯ ಏಷ್ಯಾದ 16 ದೇಶಗಳ ಜತೆ ಮುಕ್ತ ಮಾರುಕಟ್ಟೆ ವ್ಯವಹಾರಕ್ಕೆ ಭಾರತವನ್ನು ತೊಡಗಿಸಲು ಮೋದಿ ಮಾಮ ಸಿದ್ಧವಾಗಿದ್ದಾರೆ. ಇದು ಅಡಿಕೆ ಕೃಷಿಯಿಂದ ಜೀವನ ನಡೆಸುತ್ತಿರುವವರ ಬದುಕು ಬರಿದಾಗಿಸುವುದು ಗ್ಯಾರಂಟಿ.

ಮೋದಿಯ ಆರ್‌ಸಿಇಪಿ ಒಪ್ಪಂದ ಸಾಂಪ್ರದಾಯಿಕ ಅಡಿಕೆ ಬೆಳೆಗಾರರನ್ನು ಹೈರಾಣಾಗಿಸಲಿದೆ. ಸಣ್ಣ ಹಿಡುವಳಿದಾರರಿಂದ ಮುಕ್ತ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲು ಸಾಧ್ಯವಿಲ್ಲ. 16 ರಾಷ್ಟ್ರಗಳ ನಡುವೆ ವಾಣಿಜ್ಯ, ಕೃಷಿ, ಹಾಲಿನ ಉತ್ಪನ್ನಗಳ ಮುಕ್ತ ಮಾರುಕಟ್ಟೆಗೆ ಅವಕಾಶ ಕೊಡುವುದು ಮತ್ತು ಆಮದು-ರಫ್ತು ನೀತಿ ಸರಳೀಕರಿಸುವುದು ಆರ್‌ಸಿಇಪಿ ಒಪ್ಪಂದದ ಮುಖ್ಯ ಉದ್ದೇಶ. ಸದ್ಯಕ್ಕೆ ದೊಡ್ಡಮಟ್ಟದ ತೆರಿಗೆ ಆಮದು ಅಡಿಕೆಗೆ ವಿಧಿಸಿದರೂ ಒಪ್ಪಂದದಂತೆ ಮುಂದಿನ 12 ವರ್ಷದಲ್ಲಿ ಎಲ್ಲಾ ಆಯಾತ-ನಿಯಾತ ಸಂಕ ತೆಗೆಯಬೇಕೆಂಬುದು ಒಪ್ಪಂದದ ಕರಾರು. ಆಗ ಆಗ್ನೇಯ ಏಷ್ಯಾದ 15 ರಾಷ್ಟ್ರಗಳ ಅಡಿಕೆ ರೈತರ, ಬಂಡವಾಳಿಗರ ಜತೆ ನಾವು ಪೈಪೋಟಿ ಮಾಡಬೇಕಾಗುತ್ತದೆ. ಆಗ ಸ್ಥಳೀಯ ಅಡಿಕೆ ತೋಟಿಗರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಖಂಡಿತ!!

ಸದ್ಯಕ್ಕೆ ನಾವು ಆರ್‌ಸಿಇಪಿಗೆ ಸಹಿ ಹಾಕುವುದಿಲ್ಲ ಎಂದು ಮೋದಿ ಮಾಮ ಹೇಳಿದ್ದಾರೆ. ಇದಕ್ಕೆ ಕಾರಣ ಡೈರಿ ಉದ್ಯಮದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಅರಿತ ಜನ ಬೀದಿಗಿಳಿದು ಹೋರಾಡಿದರು. ಒಂದೊಂದು ತಾಲ್ಲೂಕು ಕೇಂದ್ರದಲ್ಲಿಯೂ ಹತ್ತಾರು ಸಾವಿರ ಜನ ಆರ್‌ಸಿಇಪಿ ವಿರುದ್ಧ ಪ್ರತಿಭಟಿಸಿದರು. ಹಾಗಾಗಿ ಸರ್ಕಾರ ಬೆದರಿದೆ. ಆದರೆ ಇನ್ನು ಮೂರು ತಿಂಗಳಲ್ಲಿ ಸಹಿ ಹಾಕಲೇಬೇಕಾದ ಒತ್ತಡ ಸರ್ಕಾರಕ್ಕಿದೆ. ಆಗ ಡೈರಿ ಉದ್ದಿಮೆಯನ್ನು ಹೊರಗಿಟ್ಟು ಸಹಿ ಹಾಕುವ ತೀರ್ಮಾನವನ್ನು ಭಾರತ ತೆಗೆದುಕೊಳ್ಳಬಹುದು. ಆಗ ಮತ್ತೆ ಅಡಿಕೆ ಬೆಳೆಗಾರರಿಗೆ ಕುತ್ತು ಬರುವುದರಲ್ಲಿ ಸಂದೇಹವಿಲ್ಲ.

ಇದೆಲ್ಲ ಅಡಿಕೆ ಬೆಳೆಗಾರರ ಯಾಮಾರಿಸಿ ಗೆದ್ದಿರುವ ಕರ್ಮಗೇಡಿ ಆರು ಸಂಸದರಿಗೆ ಅರ್ಥವಾಗಿದೆಯೋ ಇಲ್ಲವೋ? ಅಕಸ್ಮಾತ್ ಅರ್ಥವಾದರೂ ಹೆಡ್ ಮಾಸ್ಟರ್ ಮೋದಿ ಎದುರು ನಿಂತು ಸಮಸ್ಯೆ ಹೇಳುವ ನೈತಿಕ ಧೈರ್ಯ ಇರ‍್ಯಾರಿಗೂ ಇಲ್ಲ!! ಆರ್‌ಸಿಇಪಿ ಒಪ್ಪಂದದಲ್ಲಿ ಅಡಿಕೆಯನ್ನು ಋಣಾತ್ಮಕ ಪಟ್ಟಿಗೆ ಸೇರಿಸಿದರೆ ಬೆಳೆಗಾರರಿಗೆ ತೊಂದರೆ ತಪ್ಪುತ್ತದೆ. ಋಣಾತ್ಮಕ ಪಟ್ಟಿಯಲ್ಲಿ ಅಡಿಕೆಯಿದ್ದರೆ ಮುಕ್ತ ಆಮದಿಗೆ ಅವಕಾಶವಿರದು. ಇರುವ ಮೂರು ತಿಂಗಳಲ್ಲಿ ಇಂಥದೊಂದು ಪ್ರಯತ್ನ ಪ್ರಾಮಾಣಿಕವಾಗಿ ಆರು ಸಂಸದರು ಮಾಡಿ ತಮ್ಮನ್ನು ಗೆಲ್ಲಿಸಿದವರ ಋಣ ತೀರಿಸುವರಾ? ಅಥವಾ ಮೋದಿ ಕೆಂಗಣ್ಣಿಗೆ ಗುರಿಯಾಗಿ ಹೆದರಿ ಹೇತ್ಲಾಂಡಿಗಳೆಂದು ಇತಿಹಾಸದಲ್ಲಿ ದಾಖಲಾಗುವರಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...