ಸಾಮಾನ್ಯ ವಿಭಾಗದಲ್ಲಿ 2ನೇ ರ‍್ಯಾಂಕ್ ಪಡೆದಿದ್ದರೂ ಪ್ರವೇಶ ನಿರಾಕರಿಸಿದ ಬಿಎಚ್‌ಯು; ದಲಿತ ವಿದ್ಯಾರ್ಥಿಯಿಂದ ಧರಣಿ

ಸಾಮಾನ್ಯ ವಿಭಾಗದಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಎರಡನೇ ಸ್ಥಾನ ಪಡೆದಿದ್ದರೂ ಪಿಎಚ್‌ಡಿ ಮಾಡಲು ಪ್ರವೇಶ ನಿರಾಕರಿಸಿದ್ದಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (ಬಿಎಚ್‌ಯು) ದಲಿತ ವಿದ್ಯಾರ್ಥಿಯೊಬ್ಬರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಂ ಸೋಂಕರ್ ಪ್ರವೇಶ ಪಡೆಯಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದಾಗ ಉಪಕುಲಪತಿಗಳ ನಿವಾಸದ ಹೊರಗೆ ಧರಣಿ ಕುಳಿತಿದ್ದಾರೆ. ವಿದ್ಯಾರ್ಥಿಗಳು ಮತ್ತು ರಾಜಕಾರಣಿಗಳು ಸಹ ಶಿವಂ ಬೆಂಬಲ ಸೂಚಿಸಿದ್ದಾರೆ. ಮಾಳವೀಯ ಸೆಂಟರ್ ಫಾರ್ ಪೀಸ್ ರಿಸರ್ಚ್‌ನಲ್ಲಿ ಪಿಎಚ್‌ಡಿ ಪ್ರವೇಶಕ್ಕಾಗಿ ಸೋಂಕರ್ ಪರೀಕ್ಷೆ ಬರೆದಿದ್ದರು. ಎರಡನೇ ರ‍್ಯಾಂಕ್ ಪಡೆದಿದ್ದರೂ ಅವರಿಗೆ ಪ್ರವೇಶ ಸಿಗಲಿಲ್ಲ. … Continue reading ಸಾಮಾನ್ಯ ವಿಭಾಗದಲ್ಲಿ 2ನೇ ರ‍್ಯಾಂಕ್ ಪಡೆದಿದ್ದರೂ ಪ್ರವೇಶ ನಿರಾಕರಿಸಿದ ಬಿಎಚ್‌ಯು; ದಲಿತ ವಿದ್ಯಾರ್ಥಿಯಿಂದ ಧರಣಿ