- Advertisement -
- Advertisement -
ಕಳೆದ 15 ದಿನಗಳಿಂದ ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಬೀದರ್‌ನ ಶಾಲೆಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಮತ್ತು ಶಾಲೆಯ ಮಗುವಿನ ತಾಯಿ ನೈಜುಬುನ್ನೀಶಗೆ ಇಂದು ಕೋರ್ಟ್ ಜಾಮೀನು ನೀಡಿದೆ.
ಫೆ.11 ರಂದು ಆರೋಪಿಗಳ ಪರವಾಗಿ 12 ವಕೀಲರ ತಂಡದ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ಬಿ.ಟಿ ವೆಂಕಟೇಶ್‌ರವರು ವಾದ ಮಂಡಿಸಿದ್ದರು. ಇಂದಿಗೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ಜಾಮೀನು ನೀಡಿದೆ.
ಜನವರಿ 20ರಂದು ಈ ಶಾಲೆಯಲ್ಲಿ ಸಿಎಎ ವಿರುದ್ಧ ಪಠ್ಯೇತರ ಚಟುವಟಿಕೆಗಳ ಭಾಗವಾಗಿ ಮಕ್ಕಳಿಂದ ನಾಟಕ ಆಡಿಸಲಾಗಿತ್ತು. ಅದರಲ್ಲಿ ಯಾರಾದರೂ ದಾಖಲೆ ಕೇಳಿಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂಬ ಸಂಭಾಷಣೆ ಇದ್ದ ಕಾರಣ ದೂರು ದಾಖಲಾಗಿತ್ತು.
ನಂತರ ಪೊಲೀಸರು ಶಾಲೆಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಮತ್ತು ಶಾಲೆಯ ಮಗುವಿನ ತಾಯಿ ನೈಜುಬುನ್ನೀಶ ಎಂಬುವವರನ್ನು ಕಳೆದ 15 ದಿನಗಳಿಂದ ಬಂಧಿಸಿ ಜೈಲಿನಟ್ಟಿದ್ದರು.



ನ್ಯಾಯವಾದಿ ಬಿ.ಟಿ.ವೆಂಕಟೇಶ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು.
ಮಕ್ಕಳ ಜೊತೆ ಅನುಚಿತವಾಗಿ ಬೇಜವಾಬ್ದಾರಿತನದಿಂದ ವರ್ತಿಸಿ ಅಧಿಕಾರವನ್ನು ದುರುಪಯೋಗ ಮಾಡಿದ ಪೋಲೀಸರನ್ನು ಶಿಕ್ಷಿಸಬೇಕು