ಇತ್ತೀಚೆಗೆ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, “ಬಿಹಾರದಲ್ಲಿ ದೀರ್ಘ ಯುದ್ಧಕ್ಕಾಗಿ ಹೊಸ ಪಕ್ಷವನ್ನು ರಚಿಸಿದ್ದೇವೆ” ಎಂದು ಶುಕ್ರವಾರ ಘೋಷಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತೇಜ್ ಪ್ರತಾಪ್, ಜನಶಕ್ತಿ ಜನತಾದಳದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮನ್ನು ‘ರಾಷ್ಟ್ರೀಯ ಅಧ್ಯಕ್ಷರು’ ಎಂದು ಘೋಷಣೆ ಮಾಡಿದ್ದು, ‘ಕಪ್ಪು ಹಲಗೆ’ಯನ್ನು ಅವರ ಪಕ್ಷದ ಚಿಹ್ನೆಯಾಗಿ ಬಳಸಿದ್ದಾರೆ.
ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಮಾಡಿರುವ ವರದಿ ಪ್ರಕಾರ, ಈಗಾಗಲೇ ಪಕ್ಷವನ್ನು ನೋಂದಾಯಿಸಿ ಚಿಹ್ನೆಯನ್ನು ಅವರಿಗೆ ನೀಡಲಾಗಿದೆಯೇ ಎಂಬುದು ಈವರೆಗೆ ತಿಳಿದಿಲ್ಲ.
ಆಗಸ್ಟ್‌ನಲ್ಲಿ, ತೇಜ್ ಪ್ರತಾಪ್ ಯಾದವ್ ತಮ್ಮ ನೇತೃತ್ವದಲ್ಲಿ ಐದು ಪಕ್ಷಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿಕೊಂಡಿದ್ದರು. ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
हमलोग बिहार के संपूर्ण विकास के लिए पूर्ण रूप से समर्पित और तत्पर हैं। हमारा मकसद बिहार में संपूर्ण बदलाव कर एक नई व्यवस्था का नव निर्माण करना है।
हमलोग बिहार के संपूर्ण विकास के लिए लंबी लड़ाई लड़ने को तैयार हैं।#tejpratapyadav #janshaktijantadal #biharelection pic.twitter.com/GxsQHw0WqQ
— Tej Pratap Yadav (@TejYadav14) September 25, 2025
ಇತ್ತೀಚೆಗೆ, ಲಾಲು ಪ್ರದಾಶ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಬಂಡಾಯವೆದ್ದು, ತನ್ನ ತಂದೆ, ಸಹೋದರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಮತ್ತು ಸಹೋದರಿ ಮಿಸಾ ಭಾರ್ತಿ (ಲೋಕಸಭಾ ಸದಸ್ಯೆ) ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್‌ಫಾಲೋ ಮಾಡಿದ್ದಾರೆ. ತೇಜಸ್ವಿ ಅವರ ಆಪ್ತ ಮಿತ್ರ ಸಂಜಯ್ ಯಾದವ್, ರಾಜ್ಯಸಭಾ ಸದಸ್ಯರೂ ಆಗಿದ್ದಾರೆ ಎಂಬ ಕಾರಣಕ್ಕೆ ಅವರ ಕುಟುಂಬದಲ್ಲಿ ವಿವಾದ ಉಂಟಾಗಿತ್ತು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರೋಹಿಣಿ ಬಯಸಿದ್ದರು ಎಂದು ನಂಬಲಾಗಿತ್ತು. ಆದರೆ ತೇಜಸ್ವಿ ಅವರನ್ನು ನಿರ್ಲಕ್ಷಿಸಿದರು ಎನ್ನಲಾಗಿದೆ.


