ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ರಾಜ್ಯದ ಆಡಳಿತರೂಢ ಜೆಡಿಯು ಶಾಸಕ ಪನ್ನಾ ಲಾಲ್ ಸಿಂಗ್ ಪಟೇಲ್ ಅವರ ಸೋದರಳಿಯ ಎಂದು ಹೇಳಲಾದ 50 ವರ್ಷದ ವ್ಯಕ್ತಿಯನ್ನು ಶಸ್ತ್ರಸಜ್ಜಿತ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಿಹಾರ
ಮೃತನನ್ನು ಖಗಾರಿಯಾದ ಕೈಥಿ ಟೋಲಾ ನಿವಾಸಿ ಕೌಶಲ್ ಸಿಂಗ್ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಕೌಶಲ್ ಮತ್ತು ಅವರ ಪತ್ನಿ ಚೌಥಮ್ ಪೊಲೀಸ್ ಠಾಣೆ ವ್ಯಾಪ್ತಿಯ ಕೈಥಿ ಟೋಲಾದಲ್ಲಿರುವ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.
ದಾಳಿಕೋರರು ಕೌಶಲ್ ಮೇಲೆ ಹತ್ತಿರದಿಂದ ಅವರಿಗೆ ಗುಂಡು ಹಾರಿಸಿದ್ದು, ಇದರಿಂದ ಅವರಿಗೆ ಗಂಭೀರ ಗಾಯಗಳಾಗಿತ್ತು. ಅವರು ಪ್ರಜ್ಞಾಹೀನರಾದ ತಕ್ಷಣ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಮಾಜಿ ಪಂಚಾಯತ್ ಸಮಿತಿ ಸದಸ್ಯರಾದ ಕೌಶಲ್ ಜೆಡಿಯು ಪಕ್ಷದ ಜೊತೆಗೆ ಗುರುತಿಸಿಕೊಂಡಿದ್ದರು. ಬುಧವಾರ ತಡರಾತ್ರಿ ಅವರು ತಮ್ಮ ಗೋದಾಮಿನಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕೌಶಲ್ ಅವರನ್ನು ತಕ್ಷಣ ಚೌಥಮ್‌ನಲ್ಲಿರುವ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅಲ್ಲಿಗೆ ತಲುಪುವ ವೇಳೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ. ಮೃತರ ಪತ್ನಿ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.
ಮೃತರ ಪತ್ನಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದು, ಅಪರಾಧಿಗಳು ಗೋದಾಮಿನಿಂದ ತಮ್ಮನ್ನು ಬೈಕ್‌ನಲ್ಲಿ ಹಿಂಬಾಲಿಸಿರಬಹುದು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. “ನಾವು ಮನೆಗೆ ತಲುಪುವ ಹಂತದಲ್ಲಿದ್ದಾಗ ಅಪರಾಧಿಗಳು ನನ್ನ ಗಂಡನನ್ನು ತಡೆದು ಅವರ ಮೇಲೆ ಗುಂಡು ಹಾರಿಸಿದರು” ಎಂದು ಅವರು ವಿಚಾರಣಾಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರಾಥಮಿಕವಾಗಿ ಈ ಘಟನೆಯು ಕೌಟುಂಬಿಕ ಕಲಹದ ಪರಿಣಾಮದಂತೆ ಕಂಡುಬರುತ್ತಿದೆ ಎಂದು ಖಗರಿಯಾದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಕೇಶ್ ಕುಮಾರ್ ಅವರು ಹೇಳಿದ್ದಾರೆ. “ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ನಾವು ವಿಶೇಷ ತಂಡವನ್ನು ರಚಿಸಿದ್ದೇವೆ. ಮೃತರ ಪತ್ನಿಯ ಹೇಳಿಕೆಯನ್ನು ಸಹ ದಾಖಲಿಸಲಾಗಿದೆ” ಎಂದು ಎಸ್ಪಿ ಹೇಳಿದ್ದಾರೆ.
ಖಗರಿಯಾ ಜಿಲ್ಲೆಯಲ್ಲಿ ನಡೆದ ಜೆಡಿಯು ಶಾಸಕರ ಸಂಬಂಧಿಯ ಈ ಹತ್ಯೆಗೆ ಕೌಟುಂಬಿಕ ಕಲಹವೆ ಕಾರಣ ಎಂದು ಉಪಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ಮಂಗಳವಾರ ಸಂಜೆ ಹೇಳಿದ್ದಾರೆ. “ಇದು ಅಪರಾಧವಲ್ಲ. ಕೊಲೆ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದ್ದರೆ, ಅದು ಅಪರಾಧವಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ಮೃತರ ಕುಟುಂಬ ಸದಸ್ಯರು ತಮ್ಮ ಪತಿಯ ಕೊಲೆಗೆ ಕೌಟುಂಬಿಕ ವಿವಾದವೂ ಒಂದು ಕಾರಣವಾಗಿರಬಹುದು ಎಂದು ಹೇಳಿದ್ದನ್ನು ಅವರು ಉಲ್ಲೇಖಿಸಿದ್ದಾರೆ. “ಮೃತರ ಕುಟುಂಬ ಸದಸ್ಯರ ಹೇಳಿಕೆಯ ಪ್ರಕಾರ, ಇದು ಕುಟುಂಬಕ್ಕೆ ಸಂಬಂಧಿಸಿದ ವಿಷಯ” ಎಂದು ಚೌಧರಿ ಹೇಳಿದ್ದಾರೆ. ಬಿಹಾರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಜೆಪಿ ಸಂಸದೆ ಕಂಗನಾ; ಎಚ್‌ಪಿಎಸ್‌ಇಬಿಎಲ್ ಸ್ಪಷ್ಟನೆ
1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಬಿಜೆಪಿ ಸಂಸದೆ ಕಂಗನಾ; ಎಚ್‌ಪಿಎಸ್‌ಇಬಿಎಲ್ ಸ್ಪಷ್ಟನೆ

