Homeಮುಖಪುಟಹಲವರು ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಬಿಹಾರ ಸಿಎಂ ಚುನಾವಣೆ ಪ್ರಚಾರದಲ್ಲಿದ್ದಾರೆ; ಪ್ರಶಾಂತ್ ಕಿಶೋರ್

ಹಲವರು ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಬಿಹಾರ ಸಿಎಂ ಚುನಾವಣೆ ಪ್ರಚಾರದಲ್ಲಿದ್ದಾರೆ; ಪ್ರಶಾಂತ್ ಕಿಶೋರ್

- Advertisement -
- Advertisement -

ಹಲವು ರಾಜ್ಯಗಳು ವೈರಸ್ ವಿರುದ್ಧ ಹೋರಾಡುತ್ತಿದ್ದರೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ.

ಕಳೆದ ವಾರ ಬಿಹಾರದಲ್ಲಿ ನಿತೀಶ್ ಕುಮಾರ್‌ರವರು ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿರುವುದನ್ನು ಹಲವಾರು ಜನ ಖಂಡಿಸಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅದರ ಮೇಲೆ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ.

ಲಾಕ್‌ಡೌನ್‌ ಘೋಷಿಸಿದಾಗಿನಿಂದ ಪತ್ರಿಕಾಗೋಷ್ಠಿ ಅಥವಾ ಜನರೊಂದಿಗೆ ಸಂವಾದ ನಡೆಸದ ಕೆಲವೇ ಕೆಲವು ಮುಖ್ಯಮಂತ್ರಿಗಳಲ್ಲಿ ನಿತೀಶ್ ಕುಮಾರ್‌ ಸಹ ಒಬ್ಬರಾಗಿದ್ದಾರೆ. ಅವರಿಗೆ ಜನಾಭಿಪ್ರಾಯಗಳು ಬೇಕಿಲ್ಲ ಎಂದು ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ.

“ಕಡಿಮೆ ಪರೀಕ್ಷಾ ದರ, ಪರೀಕ್ಷೆಯಲ್ಲಿ 7-9 ಶೇಕಡಾ ಧನಾತ್ಮಕ ಪ್ರಕರಣಗಳ ಪ್ರಮಾಣ ಮತ್ತು 6,000 ಕ್ಕೂ ಹೆಚ್ಚು ಪ್ರಕರಣಗಳು ಬಿಹಾರದಲ್ಲಿ ದಾಖಲಾಗಿರುವುದರ ಹೊರತಾಗಿಯೂ ಇಲ್ಲಿನ ಮುಖ್ಯಮಂತ್ರಿ ಚುನಾವಣೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಕೊರೊನಾ ವೈರಸ್ ಭಯದ ನಡುವೆ ಮೂರು ತಿಂಗಳು ತನ್ನನ್ನು ತನ್ನ ಮನೆಗೆ ಸೀಮಿತಗೊಳಿಸಿಕೊಂಡಿದ್ದ ನಿತೀಶ್ ಕುಮಾರ್, ಈಗ ಚುನಾವಣೆಯಲ್ಲಿ ಭಾಗವಹಿಸಲು ತಮ್ಮ ಮನೆಯಿಂದ ಹೊರಬಂದರೆ?” ಎಂದು ಪ್ರಶಾಂತ್ ಕಿಶೋರ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ನಿತೀಶ್ ಕುಮಾರ್ ಅವರು ಮಾರ್ಚ್ 16 ರಿಂದ ಪಾಟ್ನಾದ ಆನ್ ಮಾರ್ಗ್ 1 ರ ತಮ್ಮ ಸರ್ಕಾರಿ ಬಂಗಲೆಯಿಂದ ಹೊರಬಂದಿಲ್ಲ. 84 ದಿನಗಳ ಸಾಮಾಜಿಕ ಅಂತರದ ನಂತರ ಕ್ಯಾಬಿನೆಟ್ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಹೊರಬಂದಿದ್ದಾರೆ. ಆದರೆ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ವಾಸ್ತವ ಸಭೆಗಳನ್ನು ನಡೆಸುತ್ತಿದ್ದರು ಎಂದು ಹಲವರು ದೂರಿದ್ದಾರೆ.

ಕೊರೊನಾ ವೈರಸ್ ಪ್ರಕರಣಗಳಲ್ಲಿ ರಾಜ್ಯವು 6,000 ದಾಟಿದ್ದರೆ, ಆಡಳಿತಾರೂಢ ಎನ್‌ಡಿಎ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ಪ್ರಶಾಂತ್ ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಪ್ರಶಾಂತ್ ಕಿಶೋರ್ ಸಹ ಜೆಡಿಯು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಸಿಎಎ, ಎನ್‌ಆರ್‌ಸಿಯನ್ನು ನಿತೀಶ್ ಕುಮಾರ್ ಬೆಂಬಲಿಸಿದಾಗ ಉಂಟಾದ ವಾಗ್ವಾದಿದಿಂದಾಗಿ ಪ್ರಶಾಂತ್ ಪಕ್ಷದಿಂದ ಹೊರಬಂದಿದ್ದಾರೆ.

ಪ್ರಶಾಂತ್ ಕಿಶೋರ್ ಕೋವಿಡ್ ಎದುರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದ್ದಾರೆ. “COVID ಅನ್ನು ದೂರವಿಡಲು ಸಾಧ್ಯವಿಲ್ಲ. ನಾವು ಅದರ ವಿರುದ್ಧ ಹೋರಾಡಬೇಕು. ಜಾಗತಿಕವಾಗಿ ಹಲವಾರು ನಾಯಕರು ಈ ಹೋರಾಟವನ್ನು ಹ್ಯೂಮಿಲಿಟಿ, ಟ್ರಾನ್ಸ್‌ಪರೆನ್ಸಿ, ಸೈನ್ಸ್ ಮತ್ತು ವ್ಯಾಪಕವಾದ ಸಾರ್ವಜನಿಕ ಬೆಂಬಲದೊಂದಿಗೆ ಗೆದ್ದಿದ್ದಾರೆ. ಇದು ನಾವು ಇತರರಿಂದ ಕಲಿಯುವ ಸಮಯ ಎಂದು ಕಿಶೋರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ – ಕಾಂಗ್ರೆಸ್ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...