ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಚುನಾವಣಾ ಆಯೋಗದ ಘೋಷಣೆಯು ರಾಷ್ಟ್ರೀಯ ನಾಗರಿಕರ ನೋಂದಣಿ(ಎನ್‌ಆರ್‌ಸಿ)ಗಿಂತ “ಇನ್ನೂ ಅಪಾಯಕಾರಿ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ. ಬಿಹಾರ ಮತದಾರರ ಪಟ್ಟಿ
ಬಿಹಾರ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮೊದಲು ಚುನಾವಣಾ ಆಯೋಗ ಪ್ರಕಟಿಸಿರುವ ಮತದಾರರ ಪಟ್ಟಿಯ “ವಿಶೇಷ ತೀವ್ರ ಪರಿಷ್ಕರಣೆ”ಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ, 2003 ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ವ್ಯಕ್ತಿಗಳು ಅರ್ಹತೆಯ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ.
ಜುಲೈ 1, 1987 ರ ಮೊದಲು ಜನಿಸಿದ ಮತದಾರರು ತಮ್ಮ ಜನ್ಮ ದಿನಾಂಕ ಮತ್ತು ಜನ್ಮ ಸ್ಥಳದ ಪುರಾವೆಯನ್ನು ತೋರಿಸಬೇಕು, ಆದರೆ ಜುಲೈ 1, 1987 ಮತ್ತು ಡಿಸೆಂಬರ್ 2, 2004 ರ ನಡುವೆ ಜನಿಸಿದವರು ತಮ್ಮ ಪೋಷಕರ ಜನ್ಮ ದಿನಾಂಕ ಮತ್ತು ಜನ್ಮ ಸ್ಥಳದ ಬಗ್ಗೆಗಿನ ದಾಖಲೆಗಳನ್ನು ಸಲ್ಲಿಸಬೇಕು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಡಿಸೆಂಬರ್ 2, 2004 ರ ನಂತರ ಜನಿಸಿದವರಿಗೆ ಇಬ್ಬರೂ ಪೋಷಕರ ಜನ್ಮ ದಿನಾಂಕದ ಪುರಾವೆ ಅಗತ್ಯವಿರುತ್ತದೆ ಎಂದು ವರದಿ ಉಲ್ಲೇಖಿಸಿದೆ.
ಬಿಹಾರದಿಂದ ಈ ಪ್ರಕ್ರಿಯೆ ಪ್ರಾರಂಭವಾದರೂ, ನಿಜವಾದ ಗುರಿ ಪಶ್ಚಿಮ ಬಂಗಾಳ, ವಿಶೇಷವಾಗಿ ಅದರ ವಲಸೆ ಕಾರ್ಮಿಕರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ಚುನಾವಣಾ ಆಯೋಗವು [ಬಿಜೆಪಿಯ] ಮುಖವಾಣಿಯಾಗಿರದೆ, ಸ್ವತಂತ್ರ ಸಂಸ್ಥೆಯಂತೆ ಕಾರ್ಯನಿರ್ವಹಿಸಬೇಕು” ಎಂದು ಅವರು ಹೇಳಿದ್ದಾರೆ.
ಮತದಾರರ ಪಟ್ಟಿಗಳ ಪರಿಷ್ಕರಣೆಯ ಮೂಲಕ ಚುನಾವಣಾ ಆಯೋಗವು ಯುವ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮಮತಾ ಅವರು ಆರೋಪಿಸಿದ್ದಾರೆ. “ಅವರು ಎನ್‌ಆರ್‌ಸಿ ನೋಂದಾಯಿಸಲು ಕೆಲಸ ಮಾಡುತ್ತಿದ್ದಾರೆಯೇ? ಅವರ ಉದ್ದೇಶವೇನು?” ಎಂದು ಅವರು ಕೇಳಿದ್ದಾರೆ.
ಅಸ್ಸಾಂ ಸರ್ಕಾರವು ಆಗಸ್ಟ್ 2019 ರಲ್ಲಿ ರಾಜ್ಯದಲ್ಲಿ ವಾಸಿಸುವ ದಾಖಲೆರಹಿತ ವಲಸಿಗರಿಂದ ಭಾರತೀಯ ನಾಗರಿಕರನ್ನು ಬೇರ್ಪಡಿಸುವ ಉದ್ದೇಶದಿಂದ ಪ್ರಕಟಿಸಿದ ನವೀಕರಿಸಿದ ಎನ್‌ಆರ್‌ಸಿಯನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
ಈ ಪ್ರಕ್ರಿಯೆಯ ಭಾಗವಾಗಿ, ನಿವಾಸಿಗಳು ಮಾರ್ಚ್ 24, 1971 ರ ಮಧ್ಯರಾತ್ರಿಯ ಮೊದಲು ಅವರು ಅಥವಾ ಅವರ ಪೂರ್ವಜರು ಅಸ್ಸಾಂಗೆ ಪ್ರವೇಶಿಸಿದ್ದಾರೆ ಎಂದು ಸಾಬೀತುಪಡಿಸಬೇಕಾಗಿತ್ತು. ಅಸ್ಸಾಂ ಸರ್ಕಾರದ ಈ ನಿರ್ಧಾರದಿಂದಾಗಿ 19 ಲಕ್ಷಕ್ಕೂ ಹೆಚ್ಚು ಜನರು, ಅಥವಾ ಅರ್ಜಿದಾರರಲ್ಲಿ 5.77% ರಷ್ಟು ಜನರು ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ.
If the new voters verdict is implemented, voters from rural Bengal will be erased, and replaced with names from Bihar, UP, Rajasthan. Students, villagers, migrant workers, even their parents, will be excluded!
Smt. @MamataOffcial warns: this is more dangerous than NRC. It’s… pic.twitter.com/cPwnqfVNap
— All India Trinamool Congress (@AITCofficial) June 26, 2025
ಮತದಾರರ ಪಟ್ಟಿಗಳ ಪರಿಷ್ಕರಣೆಯನ್ನು ಪಶ್ಚಿಮ ಬಂಗಾಳಕ್ಕೆ ವಿಸ್ತರಿಸಿದರೆ, ಅದು ಗ್ರಾಮೀಣ ಪ್ರದೇಶದ ನಾಗರಿಕರ ಮತದಾನದ ಹಕ್ಕಿಗೆ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
“…ಈ ಪರಿಷ್ಕರಣೆಯು ಗ್ರಾಮೀಣ ಬಂಗಾಳದ ಮತದಾರರನ್ನು ಅಳಿಸಿಹಾಕುತ್ತದೆ. ವಿದ್ಯಾರ್ಥಿಗಳು, ಗ್ರಾಮಸ್ಥರು, ವಲಸೆ ಕಾರ್ಮಿಕರು, ಅವರ ಪೋಷಕರನ್ನು ಸಹ ಹೊರಗಿಡಲಾಗುತ್ತದೆ!” ಎಂದು ಅವರು ಹೇಳಿದ್ದಾರೆ. ಅರ್ಹ ಮತದಾರರನ್ನು ಹೊರಗಿಡದೆ, ಮತದಾರರ ಪಟ್ಟಿ ಪರಿಷ್ಕರಣೆ ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಬಿಹಾರ ಮತದಾರರ ಪಟ್ಟಿ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಗುಜರಾತ್| ಜಾತಿ ತಾರತಮ್ಯ ಆರೋಪ ಮಾಡಿದ ಕೋಲಿ ಸಮುದಾಯದ ಶಾಸಕ ಆಪ್‌ನಿಂದ ಅಮಾನತು
ಗುಜರಾತ್| ಜಾತಿ ತಾರತಮ್ಯ ಆರೋಪ ಮಾಡಿದ ಕೋಲಿ ಸಮುದಾಯದ ಶಾಸಕ ಆಪ್‌ನಿಂದ ಅಮಾನತು

