ಇನ್ನು ಕೆಲವೇ ತಿಂಗಳುಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಜ್ಜಾಗಲಿದೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಯಾರಿಗಳನ್ನು ಪ್ರಾರಂಭಿಸಿದೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ’ದ್ರಾವಿಡ ಮುನ್ನೇಟ್ರಂ ಕಳಗಂ’ ಬಿಜೆಪಿಯನ್ನು ಹೊರಗಿನ ಪಕ್ಷ ಎಂದು ಕರೆದಿದೆ. ಪಕ್ಷದ ನಾಯಕಿ ಸಂಸದೆ ಕನಿಮೋಳಿ, “ಬಿಜೆಪಿ ಎಂದಿಗೂ ತಮಿಳು ಕೋಟೆಯನ್ನು ಭೇದಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
“ಭಾರತೀಯ ಜನತಾ ಪಕ್ಷದ ನಾಯಕರು ಎಷ್ಟು ಬಾರಿ ತಮಿಳುನಾಡಿಗೆ ಬಂದರೂ ಇಲ್ಲಿ ಕಮಲ ಅರಳುವುದಿಲ್ಲ” ಎಂದು ಅವರು ರಾಮೇಶ್ವರಂನಲ್ಲಿ ಹೇಳಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ನೇಕಾರ ಸಮುದಾಯದಲ್ಲಿ ಉಂಟಾದ ಆರ್ಥಿಕ ಹಿನ್ನಡೆಯ ಬಗ್ಗೆ ಸಂವಹನ ಮತ್ತು ಅವರ ಕಳವಳಗಳ ಬಗ್ಗೆ ಅರಿಯಲು ಅವರು ರಾಮೇಶ್ವರಂಗೆ ತೆರಳಿದ್ದರು.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಡಿಎಂಕೆ ಒಕ್ಕೂಟಕ್ಕೆ ಸ್ಪಷ್ಟ ಬಹುಮತವೆಂದ ABP-ಸಿ ವೋಟರ್ ಸಮೀಕ್ಷೆ
Tamil Nadu | No matter how many times Bharatiya Janata Party leaders come to Tamil Nadu, lotus will not bloom here: DMK leader Kanimozhi in Rameswaram pic.twitter.com/mFfbGyNYv1
— ANI (@ANI) January 23, 2021
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಶನಿವಾರ ತಮ್ಮ ಮೂರು ದಿನಗಳ ತಮಿಳುನಾಡು ಭೇಟಿಯನ್ನು ಪ್ರಾರಂಭಿಸಿದ್ದು, ರೈತರು, ಸಣ್ಣ ಮತ್ತು ಮಧ್ಯಮ ಹಾಗೂ ಸೂಕ್ಷ್ಮ ವಲಯ ಉದ್ಯಮದ ಪ್ರತಿನಿಧಿಗಳು, ನೇಕಾರರು, ಕಾರ್ಮಿಕ ಸಂಘಗಳು ಮತ್ತು ರಾಜ್ಯದ ಕಾರ್ಮಿಕರೊಂದಿಗೆ ಸಂವಾದ ನಡೆಸುವ ನಿರೀಕ್ಷೆಯಿದೆ.
“ಕೊಂಗು ಭಾಗದಲ್ಲಿರುವ ನನ್ನ ತಮಿಳು ಸಹೋದರ ಸಹೋದರಿಯರೊಂದಿಗೆ ಸಮಯ ಕಳೆಯಲು ನಾನು ತಮಿಳುನಾಡಿಗೆ ತೆರಳಲು ಸಂತೋಷಪಡುತ್ತೇನೆ. ಮೋದಿ ಸರ್ಕಾರ ನಡೆಸುತ್ತಿರುವ ದಾಳಿಯ ವಿರುದ್ದ ನಾವು ಒಟ್ಟಾಗಿ ನಿಂತು ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ರಕ್ಷಿಸುತ್ತೇವೆ ಮತ್ತು ಕಾಪಾಡುತ್ತೇವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು?


