ಮೊಘಲ್ ಚಕ್ರವರ್ತಿ ಔರಂಗಜೇಬ್ ಅವರ ಸಮಾಧಿಯನ್ನು ತೆಗೆದುಹಾಕಬೇಕೆಂಬ ಕೂಗುಗಳು ತೀವ್ರಗೊಳ್ಳುತ್ತಿದ್ದಂತೆ, ಪೊಲೀಸರು ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಸಮಾಧಿಯ ಸ್ಥಳಕ್ಕೆ ಪ್ರವೇಶಿಸುವ ಮೊದಲು ಸಂದರ್ಶಕರು ತಮ್ಮ ಗುರುತಿನ ಚೀಟಿಗಳನ್ನು ಒದಗಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಬಿಜೆಪಿ ಪರ ಸಂಘಟನೆಯ
ಬಿಜೆಪಿ ಪರ ದುಷ್ಕರ್ಮಿಗಳ ಸಂಘಟನೆಯಾದ ವಿಎಚ್‌ಪಿ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಖುಲ್ದಾಬಾದ್‌ನಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಲು ಜ್ಞಾಪಕ ಪತ್ರಗಳನ್ನು ಸಲ್ಲಿಸಿತ್ತು. ಮರಾಠಾ ರಾಜ ಶಿವಾಜಿಯ ಮಗ ಸಂಭಾಜಿಯನ್ನು ಸೆರೆಹಿಡಿದು, ಔರಂಗಜೇಬ್ ಆದೇಶದ ಮೇರೆಗೆ ಗಲ್ಲಿಗೇರಿಸಲಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಬಿಜೆಪಿ ಪರ ಸಂಘಟನೆಯ
ಛತ್ರಪತಿ ಸಂಭಾಜಿನಗರ ಗ್ರಾಮೀಣ ಪೊಲೀಸ್ ಇಲಾಖೆಯು ಖುಲ್ದಾಬಾದ್ ಪಟ್ಟಣದ ಪ್ರವೇಶ ದ್ವಾರದಿಂದ ಸಮಾಧಿ ಸ್ಥಳದವರೆಗೆ ಬಹು ಭದ್ರತಾ ಠಾಣೆಗಳನ್ನು ಅಳವಡಿಸಿದೆ. ರಾಜ್ಯ ಮೀಸಲು ಪೊಲೀಸ್ ಪಡೆ (SRPF)ಯ 50 ಪೊಲೀಸರು, ಸ್ಥಳೀಯ ಪೊಲೀಸರ 30 ಸಿಬ್ಬಂದಿ ಮತ್ತು 20 ಗೃಹರಕ್ಷಕ ದಳದವರನ್ನು ಒಳಗೊಂಡ ತಂಡವನ್ನು ವಿವಿಧ ಸ್ಥಳಗಳಲ್ಲಿ ಮತ್ತು ಸಮಾಧಿ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮಾಧಿಗೆ ಭೇಟಿ ನೀಡುವ ಪ್ರವಾಸಿಗರು ಈಗ ಗೃಹರಕ್ಷಕ ದಳದ ತಂಡದೊಂದಿಗೆ ಇರಿಸಲಾಗಿರುವ ಸಂದರ್ಶಕರ ನೋಂದಣಿಯಲ್ಲಿ ತಮ್ಮ ಹೆಸರುಗಳನ್ನು ಬರೆಯಬೇಕು ಮತ್ತು ಗುರುತಿನ ದಾಖಲೆಗಳನ್ನು ಒದಗಿಸಬೇಕು ಎಂದು ಅವರು ಹೇಳಿದ್ದಾರೆ. ಸಮಾಧಿಯ ಉಸ್ತುವಾರಿ ವಹಿಸಿರುವ ಪರ್ವೇಜ್ ಕಬೀರ್ ಅಹ್ಮದ್, “ಇಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಜನರು ವದಂತಿಗಳನ್ನು ನಂಬಬಾರದು.” ಎಂದು ಹೇಳಿದ್ದಾರೆ.
“ಸಮಾಧಿಯನ್ನು ಕೆಡವಲು ಬೇಡಿಕೆಗಳು ಬಂದ ನಂತರ ಸಂದರ್ಶಕರ ಸಂಖ್ಯೆ ಕಡಿಮೆಯಾಗಿದೆ. ರಂಜಾನ್ ಸಮಯದಲ್ಲಿ ಸಾಮಾನ್ಯವಾಗಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ದಿನನಿತ್ಯ ಸುಮಾರು 100 ಜನರು ಭೇಟಿ ನೀಡುತ್ತಾರೆ, ಆದರೆ ಈ ವಿಷಯ ಮುನ್ನಲೆಗೆ ಬಂದಾಗಿನಿಂದ ಸಂಖ್ಯೆ ಕಡಿಮೆಯಾಗಿದೆ.” ಎಂದು ಅವರು ಹೇಳಿದ್ದಾರೆ.
ವಿಎಚ್‌ಪಿ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿರುವ ಸರ್ಕಾರಿ ಕಚೇರಿಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಔರಂಗಜೇಬ್‌ನ ಸಮಾಧಿಯನ್ನು ತೆಗೆದುಹಾಕಲು ಜ್ಞಾಪಕ ಪತ್ರಗಳನ್ನು ಸಲ್ಲಿಸಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಬರೆದ ಮನವಿ ಪತ್ರದಲ್ಲಿ, ಔರಂಗಜೇಬ್ ಸಿಖ್ ಗುರು ಗುರು ಗೋಬಿಂದ್ ಸಿಂಗ್ ಅವರ ಇಬ್ಬರು ಪುತ್ರರನ್ನು ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ಕೊಂದಿದ್ದಾರೆ. ಮರಾಠಾ ರಾಜ ಛತ್ರಪತಿ ಸಂಭಾಜಿಯನ್ನು ಹಿಂಸಿಸಿ ಕೊಂದಿದ್ದಾನೆ ಮತ್ತು ಕಾಶಿ, ಮಥುರಾ, ಸೋಮನಾಥದಲ್ಲಿ ದೇವಾಲಯಗಳನ್ನು ಕೆಡವಿದ್ದಾನೆ ಎಂದು ಹೇಳಿದೆ.
“ಔರಂಗಜೇಬ್‌ನ ಯಾವುದೇ ಸ್ಮಾರಕವು ನೋವು ಮತ್ತು ಗುಲಾಮಗಿರಿಯ ಸಂಕೇತವಾಗಿದೆ. ಆದ್ದರಿಂದ ಸಮಾಧಿಯನ್ನು ಸಂಪೂರ್ಣವಾಗಿ ಕೆಡವಬೇಕು” ಎಂದು ಅದು ಹೇಳಿದೆ. ಈ ವಿಚಾರದಲ್ಲಿ ಸರ್ಕಾರ ನಿಷ್ಕ್ರಿಯವಾಗಿದ್ದರೆ, ವಿಎಚ್‌ಪಿ ಛತ್ರಪತಿ ಸಂಭಾಜಿನಗರ ಜಿಲ್ಲೆಗೆ ಮೆರವಣಿಗೆ ನಡೆಸಿ ಸಮಾಧಿಯನ್ನು ಕೆಡವುವುದಾಗಿ ಎಚ್ಚರಿಸಿದೆ. ದುಷ್ಕರ್ಮಗಳ ಈ ಸಂಘಟನೆಯು ಛತ್ರಪತಿ ಸಂಭಾಜಿನಗರ, ನಾಗ್ಪುರ ಮತ್ತು ಮುಂಬೈನ ಉಪನಗರ ಪ್ರದೇಶಗಳಲ್ಲಿ ಇದೇ ರೀತಿಯ ಆಂದೋಲನಗಳನ್ನು ನಡೆಸಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ರಾಮದೇವಸ್ಥಾನದಲ್ಲಿ ದಲಿತ ಯುವಕನಿಗೆ ತಿಲಕ ಹಚ್ಚಲು ಪೂಜಾರಿ ನಿರಾಕರಣೆ: ನಾವು ಹಿಂದೂಗಳಲ್ಲವೇ? ಎಂದು ಆಕ್ರೋಶ
ರಾಮದೇವಸ್ಥಾನದಲ್ಲಿ ದಲಿತ ಯುವಕನಿಗೆ ತಿಲಕ ಹಚ್ಚಲು ಪೂಜಾರಿ ನಿರಾಕರಣೆ: ನಾವು ಹಿಂದೂಗಳಲ್ಲವೇ? ಎಂದು ಆಕ್ರೋಶ

