- Advertisement -
- Advertisement -
ಇಂದು ಎರಡು ನಗರಸಭೆ ಚುನಾವಣೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದರೆ, ಚಿಕ್ಕಬಳ್ಳಾಪುರ ನಗರಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ವಿಜಯಪತಾಕೆ ಹಾರಿಸಿದೆ.
ಡಿಸೆಂಬರ್‌ನಲ್ಲಿ ನಡೆದಿದ್ದ ಹೊಸಕೋಟೆ ಉಪಚುನಾವಣೆಯ ಸೋಲಿನ ಸೇಡನ್ನು ಬಿಜೆಪಿ ತಿರಿಸಿಕೊಂಡಿದೆ. ಉಪಚುನಾವಣೆಯಲ್ಲಿ ಬಿಜೆಪಿಯಿಂದ ಎಂಟಿಬಿ ನಾಗಾರಾಜ್ ಅವರು ಸೋತಿದ್ದರು.
ಹೊಸಕೋಟೆ ನಗರಸಭೆಯಲ್ಲಿ ಒಟ್ಟು ಬಿಜೆಪಿ- 22 ಸ್ಥಾನಗಳನ್ನು ಪಡೆದಿದ್ದು, ಶರತ್ ಬಚ್ಚೇಗೌಡರ ಬಣ 7 ಸ್ಥಾನಗಳನ್ನು ಪಡೆದಿದ್ದರೆ, ಎಸ್.ಡಿ.ಪಿ.ಐ 1, ಪಕ್ಷೇತರ 1 ಹಾಗೂ ಕಾಂಗ್ರೆಸ್ ಶೂನ್ಯ ಸಾಧನೆಯನ್ನು ಮಾಡಿದೆ.
ಇನ್ನು ಚಿಕ್ಕಬಳ್ಳಾಪುರ ನಗರಸಭೆಯ 31 ವಾರ್ಡ್ ಗಳ ಪೈಕಿ ಕಾಂಗ್ರೆಸ್ 16 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ 09, ಜೆಡಿಎಸ್ 02 ಮತ್ತು ಪಕ್ಷೇತರರು 04 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಈ ಮೂಲಕ ಸಚಿವ ಸುಧಾಕರ್ ಬಾರಿ ಮುಖಭಂಗಕ್ಕೊಳಗಾಗಿದ್ದಾರೆ.


