ಬಿಜೆಪಿಯು ರಾಜ್ಯದಲ್ಲಿ ವಿಭಜಕ ರಾಜಕೀಯವನ್ನು ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ. ಅಖಿಲ ಭಾರತ ಮಜ್ಲಿಸ್-ಎ-ಇತ್ತಿಹಾದುಲ್ ಮುಸ್ಲೀಮೀನ್ (AIMIM) ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಪಕ್ಷಗಳಿಗೆ ಬಿಜೆಪಿಯು ಹಣ ನೀಡಿ ಪ್ರೋತ್ಸಾಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ರೈದಿಗಿ ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ, “ಹಿಂದೂಗಳು, ಮುಸ್ಲಿಮರು, ಸಿಖ್ಖರು ಮತ್ತು ಕ್ರಿಶ್ಚಿಯನ್ನರು ಹರೇ ಕೃಷ್ಣ ಹರೆ ಹರೆ, ತೃಣಮೂಲ ಘರೆ ಘರೆ ಎಂದು ಹೇಳುತ್ತಿದ್ದಾರೆ. ಬಿಜೆಪಿಯು ಹರೇ ಕೃಷ್ಣ ಹರೆ ಹರೆ, ಹಿಂದೂ, ಮುಸ್ಲಿಂ ಬೇರೆ ಬೇರೆ, ಪರಿಶಿಷ್ಟ ಜಾತಿ (ಎಸ್‌ಸಿ) ಬೇರೆ ಬೇರೆ ಎಂದು ಹೇಳುತ್ತಿದೆ. ಅವರು ಬಂಗಾಳವನ್ನು ನಾಶಪಡಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ನಮ್ಮ ಸಂಸ್ಕೃತಿ ಏನೆಂದರೆ, ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಚಹಾ ಸೇವಿಸುತ್ತಾರೆ ಮತ್ತು ದುರ್ಗಾ ಪೂಜೆಯನ್ನು ಒಟ್ಟಿಗೆ ಆಚರಿಸುತ್ತಾರೆ. ನಮ್ಮ ಹಳ್ಳಿಗಳಲ್ಲಿ ಅಶಾಂತಿ ಇದ್ದರೆ ಬಿಜೆಪಿಗೆ ಲಾಭವಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮಿತ್ರಪಕ್ಷಕ್ಕೆ ಬೆದರಿಕೆ: ಬಿಜೆಪಿ ಸಚಿವನಿಗೆ 48 ಗಂಟೆ ಪ್ರಚಾರ ಮಾಡದಂತೆ ನಿಷೇಧ
AIMIM ಮತ್ತು ಐಎಸ್‌ಎಫ್ ಮೇಲೆ ದಾಳಿ ಮಾಡಿದ ತೃಣಮೂಲ ಮಮತಾ, “ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಲು ಅವರಿಗೆ ಬಿಜೆಪಿ ಹಣ ನೀಡಿದೆ. ನಿಮಗೆ ವಿಭಜನೆ ಆಗಲು ಮನಸ್ಸಿಲ್ಲದೆ ಇದ್ದರೆ, ಎನ್ನಾರ್ಸಿ ಬೇಡವಾದರೆ ಅವರಿಗೆ ಮತ ಚಲಾಯಿಸಬೇಡಿ” ಎಂದು ಹೇಳಿದ್ದಾರೆ.
“ಅವರಿಗೆ ಮತ ನೀಡುವುದು ಬಿಜೆಪಿಗೆ ಮತ ನೀಡಿದಂತೆ. ನಂದಿಗ್ರಾಮದಲ್ಲಿ, ನಿಮ್ಮ ಮಗಳು ಮತ್ತು ಮಕ್ಕಳನ್ನು ಅಪಹರಿಸಲಾಗುವುದು, ಅದನ್ನೇ ಈ ಗೂಂಡಾಗಳು ಬೆದರಿಸುತ್ತಿದ್ದಾರೆ. ಹೊಗಿನವರಾದ ಬಿಜೆಪಿಯ ಗೂಂಡಾಗಳಿಗೆ ಮತಗಳನ್ನು ನೀಡಬೇಡಿ” ಎಂದು ಅವರು ಹೇಳಿದ್ದಾರೆ.
ಟಿಎಂಸಿಯಿಂದ ಟಿಕೆಟ್ ನಿರಾಕರಿಸಿದ ಜನರನ್ನು ಹೆಸರಿಸಿದ ಮಮತಾ, ಅವರು ಬಿಜೆಪಿಯ ಜನರು ಎಂದು ಆರೋಪಿಸಿದರು. “ನಿಮಗೆ ಮಮತಾ ಬೇಕಾದರೆ, ಟಿಎಂಸಿಗೆ ಮತ ನೀಡಿ. ಇದು ದೆಹಲಿ ಚುನಾವಣೆಯಲ್ಲ ಬಂಗಾಳದ ಚುನಾವಣೆ” ಎಂದು ಜನತೆಗೆ ನೆನಪಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯ ಮೊದಲ ಎರಡು ಹಂತಗಳ ಮತದಾನ ಕ್ರಮವಾಗಿ ಮಾರ್ಚ್ 27 ಮತ್ತು ಏಪ್ರಿಲ್ 1 ರಂದು ನಡೆಯಿತು. ಮುಂದಿನ ಹಂತದ ಮತದಾನ ಏಪ್ರಿಲ್ 6 ರಂದು ನಡೆಯಲಿದೆ.
ಇದನ್ನೂ ಓದಿ: ನಾನು ಕರುಣಾನಿಧಿ ಮಗ ಎಂಬುದನ್ನು ಮರೆಯದಿರಿ, ನಿಮ್ಮ ಬೆದರಿಕೆಗೆ ಬಗ್ಗುವುದಿಲ್ಲ: ಐಟಿ ದಾಳಿಗೆ ಎಂ.ಕೆ. ಸ್ಟಾಲಿನ್



Ban EVM
BAN EVM..
BAN EVM….
BAN EVM……..
BAN EVM…………