ಸೋಮವಾರ ಸುಬ್ರಮಣಿಯನ್ ಸ್ವಾಮಿ, “ಬಿಜೆಪಿ ಐಟಿ ಸೆಲ್ ವರ್ತನೆ ರಾಕ್ಷಸೀಯವಾಗಿದೆ” ಎಂದು ಕಿಡಿಕಾರಿದ್ದು, ತಮ್ಮ ಮೇಲೆ ಕೆಲವರು ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ಐಟಿ ಸೆಲ್‌ನ ಕೆಲವು ಸದಸ್ಯರು ನಕಲಿ ಟ್ವಿಟರ್ ಖಾತೆಗಳನ್ನು ತೆರೆದು ನನ್ನ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ. ಇಂತಹ ದುರುದ್ದೇಶಪೂರಿತ ವೈಯಕ್ತಿಕ ದಾಳಿಗಳಿಂದ ನನ್ನ ಹಿಂಬಾಲಕರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ದಾಳಿಗೆ ಮುಂದಾದರೆ ಅದಕ್ಕೆ ನಾನು ಹೊಣೆಯಾಗಲಾರೆ ಎಂದು” ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
The BJP IT cell has gone rogue. Some of its members are putting out fake ID tweets to make personal attacks on me. If my angered followers make counter personal attacks I cannot be held resonsible just as BJP cannot be held respinsible for the rogue IT cell of the party
— Subramanian Swamy (@Swamy39) September 7, 2020
ಟ್ವೀಟಿಗರೊಬ್ಬರ ‘ಅದನ್ನು ನಿರ್ಲಕ್ಷಿಸಿ’ ಎಂಬ ಪ್ರತಿಕ್ರಿಯಗೆ ರೀಟ್ವೀಟ್ ಮಾಡಿ, “ನಾನು ಅವುಗಳನ್ನೆಲ್ಲಾ ನಿರ್ಲಕ್ಷ್ಯ ಮಾಡುತ್ತೇನೆ. ಆದರೆ ಬಿಜೆಪಿ ತನ್ನ ಐಟಿ ಸೆಲ್ ಸದಸ್ಯರನ್ನು ಕಿತ್ತೊಗೆಯಬೇಕು. ಒಬ್ಬ ಮಾಳವಿಯನ ಪಾತ್ರ ಅಶುದ್ಧತೆಯಿಂದ ಗಲಭೆ ನಡೆಸುವಂತಿದೆ. ನಮ್ಮದು ಮರ್ಯಾದಾ ಪುರುಷೋತ್ತಮನ ಪಕ್ಷ, ರಾವಣ ಅಥವಾ ದುಶ್ಯಾಸನನ ಪಕ್ಷವಲ್ಲ” ಎಂದು ಹೇಳಿದ್ದಾರೆ.
You are above criticism, ignore them, if you give them importance than you are wasting your important time
— Pradeep Chehria ?? (@chehriap) September 7, 2020
ತನ್ನ ನೇರ ವಾಗ್ದಾಳಿಗಳ ಮೂಲಕ ವಿರೋಧ ಪಕ್ಷಗಳನ್ನು ಬಾಯಿ ಮುಚ್ಚಿಸಲು ಸಾಧ್ಯವಿರುವ ಕೆಲವೇ ಕೆಲವು ಬಿಜೆಪಿ ನಾಯಕರಲ್ಲಿ ಪಕ್ಷದ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಮುಖರು.
ವಿರೋಧ ಪಕ್ಷಗಳ ಜೊತೆಗೆ, ತಮ್ಮ ಪಕ್ಷದ ವಿರುದ್ಧ, ಸರ್ಕಾರದ ವೈಫಲ್ಯತೆಗಳ ವಿರುದ್ಧ ತಮ್ಮ ಪ್ರತಿಕ್ರಿಯೆಗಳನ್ನು ಆಗಾಗ ದಾಖಲಿಸಿದ್ದಾರೆ. ಇತ್ತೀಚೆಗೆ ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವುತ್ತಿರುವ ಬಗ್ಗೆ, ದೇಶದ ಆರ್ಥಿಕತೆ ಕುಸಿತಕ್ಕೆ ದೇವರ ಆಟ ಕಾರಣ ಎಂದಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ, ಜೆಇಇ, ನೀಟ್ ಪರೀಕ್ಷೆಯನ್ನು ಕೊರೊನಾ ನಿಮಿತ್ತ ಮುಂದೂಡಲು ಒಪ್ಪದ ಕೇಂದ್ರ ಸರ್ಕಾರದ ನಡೆ ವಿರುದ್ಧವೂ ಸ್ವಾಮಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಟಿಟಿಡಿ ಲೆಕ್ಕಪರಿಶೋಧನೆ ಜವಾಬ್ದಾರಿ ಸಿಎಜಿಗೆ: ಕೆಲಸ ಮುಗಿಯಿತು ಎಂದ ಸುಬ್ರಮಣಿಯನ್ ಸ್ವಾಮಿ


