Homeಮುಖಪುಟಹೆದ್ದಾರಿಯ ಮಧ್ಯೆಯೆ ಲೈಂಗಿಕ ಕ್ರಿಯೆ ನಡೆಸಿದ ಬಿಜೆಪಿ ನಾಯಕ; ವಿಡಿಯೊ ವೈರಲ್!

ಹೆದ್ದಾರಿಯ ಮಧ್ಯೆಯೆ ಲೈಂಗಿಕ ಕ್ರಿಯೆ ನಡೆಸಿದ ಬಿಜೆಪಿ ನಾಯಕ; ವಿಡಿಯೊ ವೈರಲ್!

- Advertisement -
- Advertisement -

ಮಧ್ಯಪ್ರದೇಶದ ಬಿಜೆಪಿ ಮುಖಂಡರೊಬ್ಬರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ನಿಂತು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ಸಿಸಿಟಿವಿ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೆದ್ದಾರಿಯ ಮಧ್ಯೆಯೆ

ಕಾಮಕೃತ್ಯದಲ್ಲಿ ತೊಡಗಿಸಿಕೊಂಡು ಸಿಕ್ಕಿಬಿದ್ದಿರುವ ಬಿಜೆಪಿ ಮುಖಂಡನನ್ನು ಮನೋಹರ್‌ಲಾಲ್ ಧಾಕಡ್‌ ಎಂದು ಗುರುತಿಸಲಾಗಿದೆ. ಈತ ಮಧ್ಯಪ್ರದೇಶದ ಮಂದ್ಸೌ‌ರ್‌ನ ಸಕ್ರಿಯ ಬಿಜೆಪಿ ನಾಯಕನಾಗಿದ್ದು, ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾ ಘಟಕದಲ್ಲೂ ಜವಾಬ್ದಾರಿ ಹೊಂದಿದ್ದರು ಎಂದು ತಿಳಿದುಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರನ್ನು ನಿಲ್ಲಿಸಿದ ಬಳಿಕ, ಕಾರಿನಿಂದ ಇಳಿಯುವ ನಗ್ನ ಮಹಿಳೆಯೊಂದಿಗೆ ರಸ್ತೆಯಲ್ಲೇ ನಿಂತು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಘಟನೆಯು ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ವರದಿಯಾಗಿದೆ. ಕಾಮಕೃತ್ಯದ ವಿಡಿಯೋ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾದ ಕಾರಿನ ನಂಬರ್ ಪ್ಲೇಟ್ ಅನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಕಾರು ಮನೋಹರ್ ಲಾಲ್ ಧಾಕಡ್ ಅವರಿಗೆ ಸೇರಿದ್ದೆಂದು ತಿಳಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಭಾನ್ಪುರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 296, 285, 3 (5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಈ ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಂದ್ಸೌ‌ರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಆನಂದ್‌, “ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋ ಗಮನಕ್ಕೆ ಬಂದಿದೆ. ತನಿಖೆಯ ವೇಳೆ ಆ ವಿಡಿಯೋ ದೆಹಲಿ ಮುಂಬೈ ಅಷ್ಟಪಥದ ಎಕ್ಸ್‌ಪ್ರೆಸ್‌ವೇಯ ಪ್ರದೇಶದ್ದು ಎಂದು ಕಂಡುಬಂದಿದೆ. ಈ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ, ಭಾನ್ಪುರದಲ್ಲಿ ಸೆಕ್ಷನ್ 296, 285, 3 (5) ಬಿ.ಎನ್.ಎಸ್. ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.

ಮನೋಹರ್ ಲಾಲ್ ಧಾಕಡ್ ಅವರಿಗೆ ಇತ್ತೀಚೆಗಷ್ಟೇ ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾದಲ್ಲೂ ಪ್ರಮುಖ ಜವಾಬ್ದಾರಿ ನೀಡಲಾಗಿತ್ತು ಎಂದು ವರದಿಯಾಗಿದೆ. ಈ ಘಟನೆಯು ಸುಮಾರು ನಾಲ್ಕು ದಿನಗಳ ಹಿಂದೆ ನಡೆದಿದ್ದೆಂದು ವರದಿಯಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರಾದರೂ, ಮನೋಹರ್‌ಲಾಲ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮನೋಹರ್‌ಲಾಲ್ ಧಾಕಡ್‌ ಅವರು ವಿವಾಹಿತರಾಗಿದ್ದು, ಅವರ ಪತ್ನಿ ಜಿಲ್ಲಾ ಪಂಚಾಯತ್ ಸದಸ್ಯರು ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ.

ಮನೋಹರ್‌ಲಾಲ್ ಧಾಕಡ್‌ ಅವರ ಈ ಕಾಮಕೃತ್ಯದ ವಿಡಿಯೋ ವೈರಲಾಗುತ್ತಿದ್ದಂತೆಯೇ ಬಿಜೆಪಿ ವಿರುದ್ಧ ಮುಗಿಬಿದ್ದಿರುವ ಮಧ್ಯಪ್ರದೇಶದ ಕಾಂಗ್ರೆಸ್, “ಮಂದ್ಸೌ‌ರ್ ಬಿಜೆಪಿ ನಾಯಕ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯ ಪತಿಯಾಗಿರುವ ಮನೋಹರ್‌ಲಾಲ್ ಧಾಕಡ್‌ ಅವರು ಎಕ್ಸ್‌ಪ್ರೆಸ್‌ ವೇಯಲ್ಲಿ ಅಶ್ಲೀಲ ಕೃತ್ಯದ ಅತ್ಯಂತ ಆಕ್ಷೇಪಾರ್ಹ ವೀಡಿಯೊ ವೈರಲ್ ಆಗಿ ನಾಲ್ಕು ದಿನಗಳಾಗಿವೆ. ಆದರೂ ಬಿಜೆಪಿಯ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ” ಎಂದು ಹೇಳಿದೆ.

“ಬಿಜೆಪಿಯ ಜಿಲ್ಲಾಧ್ಯಕ್ಷರು ವಿಡಿಯೋದ ಸತ್ಯಾಸತ್ಯತೆಯವನ್ನು ಪರಿಶೀಲಿಸುವುದಾಗಿ ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ಚಾರಿತ್ರ್ಯ ಪಾತಾಳಕ್ಕೆ ತಲುಪಿದೆ ಎಂಬುದು ಇಂತಹ ಕೃತ್ಯಗಳಿಂದ ತಿಳಿಯಬಹುದು. ಇದು ಇಡೀ ಸಮಾಜಕ್ಕೆ ಅವಮಾನಕರ ಘಟನೆ. ಅಧಿಕಾರದ ದುರಾಸೆಯಲ್ಲಿ ಪಕ್ಷವು ನೈತಿಕತೆಯನ್ನು ಚರಂಡಿಗೆ ಎಸೆದಿದೆ” ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಹೆದ್ದಾರಿಯ ಮಧ್ಯೆಯೆ

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ಪ್ರಧಾನಿ ಮೋದಿಗೆ ಅವಮಾನ ಆರೋಪ: ದಲಿತ ರ‍್ಯಾಪರ್ ವೇಡನ್ ವಿರುದ್ಧ ಗೃಹ ಸಚಿವಾಲಯ, ಎನ್ಐಎಗೆ ದೂರು

ಪ್ರಧಾನಿ ಮೋದಿಗೆ ಅವಮಾನ ಆರೋಪ: ದಲಿತ ರ‍್ಯಾಪರ್ ವೇಡನ್ ವಿರುದ್ಧ ಗೃಹ ಸಚಿವಾಲಯ, ಎನ್ಐಎಗೆ ದೂರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -