ಕಳೆದ ವಾರ ಪಶ್ಚಿಮ ದೆಹಲಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು “ಭಯೋತ್ಪಾದಕ” ಎಂದು ಕರೆದಿರುವುದು ವಿವಾದಕ್ಕೀಡಾಗಿದ್ದು, ಇದು ಬಿಜೆಪಿಗೆ ಬಹುದೊಡ್ಡ ಹಿನ್ನೆಡೆ ಎನ್ನಲಾಗುತ್ತಿದೆ.
“ಹಿಂದೂ ಮಹಿಳೆಯರನ್ನು ಮುಸ್ಲಿಂ ಪುರುಷರು ಎತ್ತಿಕೊಂಡುಹೋದ ಉದಾಹರಣೆಗಳನ್ನು ನಾವು ಕೇಳುತ್ತೇವೆ. ಕೇಜ್ರಿವಾಲ್ ನಂತಹ ಭಯೋತ್ಪಾದಕರು ಎಲ್ಲೆಡೆ ಅಡಗಿರುವ ಕಾರಣ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ ಎಂದುದ್ದಲ್ಲದೆ, ನಾವು ಕಾಶ್ಮೀರದಲ್ಲಿ ಪಾಕಿಸ್ತಾನ ಭಯೋತ್ಪಾದಕರೊಂದಿಗೆ ಅಥವಾ ಕೇಜ್ರಿವಾಲ್ ನಂತಹ ಭಯೋತ್ಪಾದಕರೊಂದಿಗೆ ಹೋರಾಡಬೇಕೇ?” ಎಂದು ವರ್ಮಾ ಮತದಾರರನ್ನು ಪ್ರಶ್ನಿಸಿದ್ದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಕೇಜ್ರಿವಾಲ್, “ನಾನು ಹೇಗೆ ಭಯೋತ್ಪಾದಕನಾಗುತ್ತೇನೆ? ನಾನು ಜನರಿಗೆ ಉತ್ತಮ ಆರೋಗ್ಯಕ್ಕಾಗಿ ಷಧಿಗಳನ್ನು ವ್ಯವಸ್ಥೆ ಮಾಡಿದ್ದೇನೆ … ಅಗತ್ಯವಿರುವವರಿಗೆ ತುಂಬಾ ಕೆಲಸ ಮಾಡಿದ್ದೇನೆ, ನಾನು ಎಂದಿಗೂ ನನ್ನ ಅಥವಾ ನನ್ನ ಕುಟುಂಬದ ಬಗ್ಗೆ ಯೋಚಿಸಿಲ್ಲ… ರಾಷ್ಟ್ರಕ್ಕಾಗಿ ನನ್ನ ಜೀವನವನ್ನು ನೀಡಲು ನಾನು ಸಿದ್ಧನಿದ್ದೇನೆ” ಎಂದಿದ್ದಾರೆ.
“ನಾನು ಮಧುಮೇಹ ರೋಗಿಯಾಗಿದ್ದೇನೆ, ನಾನು ದಿನಕ್ಕೆ ನಾಲ್ಕು ಬಾರಿ ಇನ್ಸುಲಿನ್ ತೆಗೆದುಕೊಳ್ಳುತ್ತೇನೆ. ವೈದ್ಯರು ನಾನು ರಾಜಕೀಯಕ್ಕೆ ಸೇರಬಾರದೆಂದು ಹೇಳಿದ್ದರು. ಇಲ್ಲವಾದಲ್ಲಿ ನಾನು ಬದುಕುವುದಿಲ್ಲ ಎಂದು ಸಹ ಹೇಳಿದ್ದರು” ಎಂದು ತಮ್ಮ ಭ್ರಷ್ಟಾಚಾರ ವಿರೋಧಿ ಹೋರಾಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.
“ನಾನು ಬಯಸಿದರೆ… ನನ್ನ ಅನೇಕ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಮಾಡಿದ ರೀತಿಯಲ್ಲಿ ನಾನು ಸಹ ವಿದೇಶಕ್ಕೆ ಹೋಗಬಹುದಿತ್ತು … ನಾನು ನನ್ನ ಕೆಲಸವನ್ನು ಬಿಟ್ಟುಬಿಟ್ಟೆ … ಭಯೋತ್ಪಾದಕನು ಇದನ್ನೆಲ್ಲಾ ಮಾಡುತ್ತಾನೆಯೇ?” ಪ್ರತಿಷ್ಠಿತ ಐಐಟಿ ಖರಗ್‌ಪುರದಿಂದ ಪದವಿ ಪಡೆದ ಕೇಜ್ರಿವಾಲ್, “ನಾನು ಇದನ್ನೆಲ್ಲ ನಿರ್ಧರಿಸಲು ದೆಹಲಿಯ ಜನರಿಗೆ ಬಿಡುತ್ತೇನೆ … ನಾನು ಅವರ ಮಗ, ಅವರ ಸಹೋದರನೋ ಅಥವಾ ಭಯೋತ್ಪಾದಕ” ಎಂದು ಅವರೆ ನಿರ್ಧರಿಸಲು ಎಂದು ಘೋಷಿಸಿದ್ದಾರೆ.
ಕೇಜ್ರಿವಾಲ್‌ರವರು ದೆಹಲಿಯ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಶಾಹೀನ್ ಬಾಗ್‌ನಲ್ಲಿ ಪೌರತ್ವ ವಿರೋಧಿ ಪ್ರತಿಭಟನಾಕಾರರು “ನಿಮ್ಮ ಮನೆಗೆ ನುಗ್ಗಿ ನಿಮ್ಮ ಸಹೋದರಿಯರು, ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುತ್ತಾರೆ” ಎಂದು ವರ್ಮಾ ಕೆಟ್ಟದಾಗಿ ಮಾತನಾಡಿದ್ದರು.
ಘಟನೆಯ ವೀಡಿಯೊವೊಂದರಲ್ಲಿ ವರ್ಮಾ ಅವರು “ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೆ ಹಿಂದಿರುಗಿದರೆ, ಶಾಹೀನ್ ಬಾಗ್ ರೀತಿಯ ಜನರು ಬೀದಿಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ” ಮತ್ತು ಇದು “ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಆದ ಪರಿಸ್ಥಿತಿ ಬರುತ್ತದೆ ಎಂದಿದ್ದರು.
“ನಾನು ದೆಹಲಿಗಾಗಿ ಐದು ವರ್ಷ, ಹಗಲು ರಾತ್ರಿ ಶ್ರಮಿಸಿದ್ದೇನೆ. ದೆಹಲಿ ಜನರಿಗಾಗಿ ನಾನು ಎಲ್ಲವನ್ನೂ ತ್ಯಜಿಸಿದ್ದೇನೆ. ರಾಜಕೀಯ ಪ್ರವೇಶಿಸಿದ ನಂತರ ನಾನು ಅನೇಕ ಸವಾಲುಗಳನ್ನು ಎದುರಿಸಿದ್ದೇನೆ, ಇದರಿಂದ ಜನರು ತಮ್ಮ ಜೀವನವನ್ನು ಸುಧಾರಿಸಲು ಸಹಾಯವಾಗಿದೆ. ಇದಕ್ಕೆ ಪ್ರತಿಯಾಗಿ, ಬಿಜೆಪಿ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ”ಎಂದು ಕೇಜ್ರಿವಾಲ್ ನಿನ್ನೆ ಟ್ವೀಟ್ ಮಾಡಿದ್ದರು.


