ಉಕ್ರೇನ್‌ನಲ್ಲಿ ಸಿಲುಕಿರುವವ ಭಾರತೀಯರನ್ನು ಸ್ಥಳಾಂತರಿಸುತ್ತಿರುವುದನ್ನೂ ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ವಾಪಸ್ ಕರೆತರುವ ವಿಚಾರದಲ್ಲಿ ಬಿಜೆಪಿ ಸಚಿವರು ಪ್ರಚಾರ ಪಡೆಯುತ್ತಿರುವುದು ಅತ್ಯಂತ ಅವಮಾನಕರ ಹಾಗೂ ಅಸಹ್ಯಕರ ಸಂಗತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯಾವುದೇ ಗಡಿಬಿಡಿ, ಪ್ರಚಾರ ಇಲ್ಲದೆ ಲಿಬಿಯಾದ ಯುದ್ಧ ಭೂಮಿಯಿಂದ 16,000 ಭಾರತೀಯರನ್ನು ಸ್ಥಳಾಂತರಿಸಿದ್ದರು. ಇದು ಒಂದು ಸರ್ಕಾರದ ಬದ್ಧತೆಯೇ ಹೊರತು ಉಪಕಾರವೇನಲ್ಲ” ಎಂದು ತಿಳಿಸಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಟ್ವೀಟ್ ಮಾಡಿರುವ ವಿಡಿಯೊವನ್ನು ಹಂಚಿಕೊಂಡಿರುವ ಪ್ರಿಯಾಂಕ್, ಸರ್ಕಾರದ ವರ್ತನೆಯನ್ನು ಖಂಡಿಸಿದ್ದಾರೆ.
Absolutely disgusting & shameless PR exercise by BJP ministers for doing a shoddy job of evacuation.
Dr. MMS evacuated 16,000 Indians from war zone in Libya without any fuss or PR.
A Govt is duty bound to do so , it is not their benevolence. https://t.co/n0GDox5eRc— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 28, 2022
ಉಕ್ರೇನ್‌ನಿಂದ ವಾಪಸ್ ಭಾರತಕ್ಕೆ ಮರಳಿದ 250 ವಿದ್ಯಾರ್ಥಿಗಳಿಗೆ ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಮುರುಳಿಧರನ್ ಅವರೊಂದಿಗೆ ಜ್ಯೋತಿರಾದಿತ್ಯ ಸಿಂಧ್ಯಾ ಸ್ವಾಗತ ಕೋರುತ್ತಿರುವ ವಿಡಿಯೊವನ್ನು ಪ್ರಿಯಾಂಕ್ ಹಂಚಿಕೊಂಡಿದ್ದಾರೆ.
“ಎಲ್ಲರಿಗೂ ಸ್ವಾಗತ. ಸುರಕ್ಷಿತವಾಗಿ ನೀವೆಲ್ಲ ಮಾತೃಭೂಮಿಗೆ ಹಿಂತಿರುಗಿದ್ದೀರಿ. ಪ್ರಧಾನಿಯವರ ಪರವಾಗಿ ನಾವು ಇಲ್ಲಿದ್ದೇವೆ. ಪ್ರಧಾನಿ ನರೇಂದ್ರಮೋದಿಯವರು ನಿಮ್ಮೊಂದಿಗೆ ಇರುತ್ತಾರೆ. 130 ಕೋಟಿ ಭಾರತೀಯರು ನಿಮ್ಮೊಂದಿಗೆ ಇರುತ್ತಾರೆ. ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಕರೆತರುತ್ತೇವೆ ಎಂಬ ಸಂದೇಶವನ್ನು ನೀವು ಎಲ್ಲರಿಗೂ ನೀಡಿ” ಎಂದು ಸಿಂಧ್ಯಾ ಹೇಳಿರುವುದನ್ನು ಇಲ್ಲಿ ಕಾಣಬಹುದು.
“ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದು ಸರ್ಕಾರದ ಕರ್ತವ್ಯ. ಅದರಲ್ಲಿಯೂ ಪ್ರಚಾರ ಪಡೆಯುವುದು ಅಸಹ್ಯಕರ ಸಂಗತಿ” ಎಂದು ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಸಿಂಧ್ಯಾ ಪೋಸ್ಟ್‌ಗೆ ‘ಐ ಸಪೋರ್ಟ್ ರಾಹುಲ್‌ಗಾಂಧಿ’ ಟ್ವಿಟರ್ ಖಾತೆಯು ಪ್ರತಿಕ್ರಿಯೆ ನೀಡಿದ್ದು, ರಾಹುಲ್ ಗಾಂಧಿಯವರ ಟ್ವೀಟ್ ಲಗತ್ತಿಸಲಾಗಿದೆ. ಉಕ್ರೇನ್‌ನಲ್ಲಿರುವ ಪರಿಸ್ಥಿತಿಯನ್ನು ಕಂಡು ಭಾರತೀಯ ಪೋಷಕರು ಆತಂಕದಲ್ಲಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿರುವುದನ್ನು ಸಿಂಧ್ಯಾ ಅವರ ಗಮನಕ್ಕೆ ತರಲಾಗಿದೆ. “ಗ್ರೌಂಡ್ ರಿಯಾಲಿಟಿ ಇದು. ಪ್ರಚಾರವನ್ನು ನಿಲ್ಲಿಸಿ” ಎಂದು ಆಗ್ರಹಿಸಲಾಗಿದೆ.
In reality this what's happening in ground zero…pls stop your PR Ministerhttps://t.co/WJ2VKK08jR
— I support Rahul Gandhi (@UnitedWithINC) February 28, 2022
ಸಚಿವರ ವರ್ತನೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಉಕ್ರೇನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಸ್ಥಿತಿ ಕಂಡು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಅನುಸರಿಸುತ್ತಿರುವ ಪ್ರಚಾರದ ನೀತಿಯನ್ನು ಖಂಡಿಸಿದ್ದಾರೆ.
STOP REJOICING DEAR MINISTER!!!!
How on earth can you even use the word "joyous" while our people are still stuck there!!THIS IS NOT THE TIME FOR PR!!!!https://t.co/ZALRrcvMiy
— Sourabh🇮🇳 (@in_Sourabh) February 27, 2022
यूक्रेन में भारतीय छात्रों पर जुल्म ढहाया जा रहा है। एक छात्रा के वायरल वीडियो से खुली पोल। pic.twitter.com/Vd5JKjH9NO
— Hindustan (@Live_Hindustan) February 27, 2022
ಇದನ್ನೂ ಓದಿರಿ:


