ಅಂಡಮಾನ್ ಸಮುದ್ರದಲ್ಲಿ ದೋಣಿ ಮುಳುಗಡೆ : 200ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಕಣ್ಮರೆ

ಬಾಂಗ್ಲಾದೇಶದಿಂದ ಮಲೇಷ್ಯಾಗೆ ಹೊರಟಿದ್ದ ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶದ ಪ್ರಜೆಗಳನ್ನು ಹೊತ್ತಿದ್ದ ದೋಣಿಯೊಂದು ಅಂಡಮಾನ್ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ವರದಿಯಾಗಿದೆ. ದೋಣಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಇದ್ದರು ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ (ಯುಎನ್‌ಹೆಚ್‌ಸಿಆರ್‌) ವರದಿ ಮಾಡಿದೆ. ಇದುವರೆಗೆ ಕೇವಲ 9 ಜನರನ್ನು ಮಾತ್ರ ರಕ್ಷಿಸಲಾಗಿದೆ. ಇವರನ್ನು ಏಪ್ರಿಲ್ 9, 2026ರಂದು ಅಂಡಮಾನ್ ದ್ವೀಪಗಳ ಸಮೀಪ ಸಂಚರಿಸುತ್ತಿದ್ದ ಬಾಂಗ್ಲಾದೇಶದ ಧ್ವಜ ಹೊಂದಿದ್ದ ಹಡಗು ರಕ್ಷಿಸಿದೆ ಎಂದು ವರದಿಗಳು ಹೇಳಿವೆ. ಅತಿಯಾದ ಜನದಟ್ಟಣೆ (Overcrowding), ಬಲವಾದ ಗಾಳಿ ಮತ್ತು ಸಮುದ್ರದ ಅಲೆಗಳ ಅಬ್ಬರದಿಂದಾಗಿ … Continue reading ಅಂಡಮಾನ್ ಸಮುದ್ರದಲ್ಲಿ ದೋಣಿ ಮುಳುಗಡೆ : 200ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರು ಕಣ್ಮರೆ