ಧರ್ಮಸ್ಥಳದಲ್ಲಿ ಶವ ಶೋಧ: 6ನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಅವಶೇಷ ಪತ್ತೆ

ಧರ್ಮಸ್ಥಳದಲ್ಲಿ ಹೂಳಲಾಗಿದೆ ಎನ್ನಲಾದ ಶವಗಳ ಶೋಧ ಕಾರ್ಯ ಮೂರನೇ ದಿನವೂ ಮುಂದುವರಿದಿದೆ. ಇಂದು (ಗುರುವಾರ) ದೂರುದಾರ ತೋರಿಸಿರುವ 6ನೇ ಪಾಯಿಂಟ್‌ನಿಂದ ಮಣ್ಣು ಅಗೆಯುವ ಕಾರ್ಯ ಆರಂಭಿಸಲಾಗಿದೆ. ಮಹತ್ವದ ಬೆಳವಣಿಗೆಯಲ್ಲಿ 6ನೇ ಪಾಯಿಂಟ್‌ನಲ್ಲಿ ಗುಂಡಿ ತೋಡುವ ವೇಳೆ ಮೂಳೆ ರೀತಿಯ ವಸ್ತುಗಳು ಅಥವಾ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂಬ ಮಾಹಿತಿ ದೊರೆತಿದೆ. ಎಫ್‌ಎಸ್‌ಎಲ್‌ ತಜ್ಞರು ಅದನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸಂಗ್ರಹಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ತಜ್ಞರು ಆಗಮಿಸಿದ್ದಾರೆ. ಉಪ್ಪು, ಪ್ಲಾಸ್ಟಿಕ್ ಕಂಟೇನರ್, ಟಾರ್ಪಲ್ ರವಾನಿಸಲಾಗಿದೆ.