ಉತ್ತರಪ್ರದೇಶದ ಗಾಜಿಯಾಬಾದ್‌ನ ದಾಸನ ದೇವಿ ಮಂದಿರ್ ದೇವಾಲಯದಲ್ಲಿ ನೀರು ಕುಡಿದಿದ್ದಕ್ಕಾಗಿ ಮುಸ್ಲಿಂ ಬಾಲಕನೊಬ್ಬನ ಮೇಲೆ ನಡೆದ ಕ್ರೂರ ಹಲ್ಲೆಯನ್ನು ಲಕ್ಷಾಂತರ ಜನರು ಖಂಡಿಸಿದ್ದಾರೆ. ‘ಸಾರಿ ಆಸಿಫ್’ ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟರ್‌ನಲ್ಲಿ ಕ್ಷಮೆ ಕೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇಂಟು ಟ್ವಿಟರ್‌ನಲ್ಲಿ #SorryAsif ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ. ಅದೇ ಸಮಯದಲ್ಲಿ 96 ವರ್ಷದ ಹಿಂದೆ ಡಾ.ಬಿ.ಆರ್ ಅಂಬೇಡ್ಕರ್‌ರವರು ನಡೆಸಿದ ಚೌಡಾರ್ ಕೆರೆ ಹೋರಾಟವನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ. “ನೀರು ಕುಡಿಯುವುದಕ್ಕಾಗಿನ ಸಂಘರ್ಷ ಬಹಳ ಹಿಂದಿನದ್ದು” ಎಂಬ ಶೀರ್ಷಿಕೆಯೊಂದಿಗೆ ಅಂಬೇಡ್ಕರ್ ಆಸಿಫ್‌ನನ್ನು ಸಂತೈಸುತ್ತಿರುವ ಕಾರ್ಟೂನ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
पानी पीने का संघर्ष बहुत पुराना है pic.twitter.com/bh8KOxIi6M
— Sandeep Singh (@PunYaab) March 14, 2021
“ನಾನೊಬ್ಬ ಹಿಂದೂ ಬ್ರಾಹ್ಮಣ. ಆದರೆ ಅನ್ಯಧರ್ಮೀಯರು ನೀರು ಕುಡಿದ ಕಾರಣಕ್ಕೆ ಅವರ ಮೇಲೆ ಹಲ್ಲೆಗಳಾಗುವುದಾದರೆ ನಾನು ಇನ್ನು ಮುಂದೆ ನನ್ನ ಜೀವಮಾನವಿಡಿ ಅಂತಹ ದೇವಾಸ್ಥಾನಗಳಿಗೆ ಹೋಗುವುದಿಲ್ಲ” ಎಂದು ಮುಕುಲ್ ಚತುರ್ವೇದಿ ಎಂಬುವವರು ಟ್ವೀಟ್ ಮಾಡಿದ್ದಾರೆ.
I am a Hindu brahmin and I will not go to a temple for whole life where people of other religion are beaten to drink the water.#SorryAsif
— Mukul Chaturvedi (@mukul53605109) March 13, 2021
“ನೀರು ಕುಡಿಯಲು ದೇವಸ್ಥಾನಕ್ಕೆ ಹೋಗಿದ್ದಕ್ಕಾಗಿ ಮುಸ್ಲಿಂ ಬಾಲಕನನ್ನು ಥಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನೀರು ಅಥವಾ ಆಹಾರದ ಅಗತ್ಯವಿರುವ ಪ್ರತಿಯೊಬ್ಬರಿಗೂ (ಅವರ ಧರ್ಮವನ್ನು ಲೆಕ್ಕಿಸದೆ) ಮಸೀದಿಗಳನ್ನು ತೆರೆಯುವುದಾಗಿದೆ. ಈ ದ್ವೇಷ ಮತ್ತು ಕತ್ತಲೆಯ ವಿರುದ್ಧ ನಾವು ಹೋರಾಡುವ ಬೇರೆ ದಾರಿ ನನಗೆ ತಿಳಿದಿಲ್ಲ” ಎಂದು ಖ್ಯಾತ ಪತ್ರಕರ್ತೆ ಅರ್ಫ ಖಾನುಂ ಶೆರ್ವಾನಿ ಟ್ವೀಟ್ ಮಾಡಿದ್ದಾರೆ.
I dream of an India where the response to a Muslim kid being beaten up for going to a temple to get water should be to open up mosques for everyone (irrespective of their religion)who needs water or food.
I don’t know any other way we can fight this hatred & darkness.#SorryAsif— Arfa Khanum Sherwani (@khanumarfa) March 13, 2021
“ನಿನಗಾದ ಅನ್ಯಾಯಕ್ಕೆ ಮಾತ್ರವಲ್ಲದೆ ದೇಶದಲ್ಲಿ ವರದಿಯಾಗದ ಅಸಂಖ್ಯಾತದ ಅನ್ಯಾಯಗಳಿಗೆ ಕ್ಷಮೆ ಯಾಚಿಸುತ್ತಿದ್ದೇನೆ. ಇಂದಿನ ನಮ್ಮ ಸಮಾಜದ ಪರಿಸ್ಥಿತಿ ಕಂಡು ನಾಚಿಕೆಯಾಗುತ್ತಿದೆ. ಈ ದ್ವೇಷದಿಂದ ತುಂಬಿದ ವಿಭಜಕ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳುತ್ತೇನೆ” ಎಂದು ಯುವಹಲ್ಲಾಬೋಲ್ ಆಂದೋಲನದ ಮುಖಂಡ ಅನುಪಮ್ ತಿಳಿಸಿದ್ದಾರೆ.
This is an apology not just to you, but for the innumerable unreported instances of injustice across our country.
I'm ashamed at what our society has become and take a pledge to contribute in the struggle against these hate-filled divisive forces. pic.twitter.com/9z4ng7k3Q7
— अनुपम | Anupam (@AnupamConnects) March 13, 2021
“ಟ್ವಿಟರ್‌ನಲ್ಲಿ ಸಾರಿ ಆಸಿಫ್ ಟ್ರೆಂಡ್ ಆಗುತ್ತಿದೆ. ಅಂದರೆ ದ್ವೇಷಿಸುವವರಿಗಿಂತ ಪ್ರೀತಿಸುವವರ ಸಂಖ್ಯೆ ಹೆಚ್ಚು ಎಂಬುದು ಆಗ ಮಗುವಿಗೆ ಗೊತ್ತಾಗಲಿ. ಜೊತೆಗೆ ಅಮಾನವೀಯವಾಗಿ ಥಳಿಸಿದ ಶೃಂಗಿ ನಂದನ್ ಯಾದವ್ ಎಂಬ ಹುಡುಗನಿಗೂ ಸಹ ಹೇಗೆ ಹಿಂದುತ್ವವಾದಿ ಶಕ್ತಿಗಳು ತನ್ನನ್ನು ದಾರಿ ತಪ್ಪಿಸಿದವು ಮತ್ತು ದ್ವೇಷಿಸುವುದರಿಂದ ಯಾವುದೇ ಲಾಭವಿಲ್ಲ ಎಂಬುದು ಅರಿವಾಗಲಿ” ಎಂದು ರಿಫತ್ ಜಾವೇದ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಬಹಳಷ್ಟು ಜನ ಹಿಂದೂ ಮುಸ್ಲಿಂ ಬಾಲಕರು ಮತ್ತು ಯುವಕರು ಕೂಡಿ ಬಾಳುವ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ನಿಮ್ಮ ದ್ವೇಷಕ್ಕಿಂತ ನಮ್ಮ ಪ್ರೀತಿ ದೊಡ್ಡದು ಎಂದು ಸಾರಿದ್ದಾರೆ.
ನಿನ್ನೆ ದೇವಸ್ಥಾನದಲ್ಲಿ ನೀರು ಕುಡಿದಿದ್ದಕ್ಕಾಗಿ ಆಸಿಫ್ ಎಂಬ ಬಾಲಕನ ಮೇಲೆ ಶೃಂಗಿ ನಂದನ್ ಯಾದವ್ ಎಂಬ ವ್ಯಕ್ತಿಯು ಕ್ರೂರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ವರದಿಯಾಗಿತ್ತು. ಆ ವಿಡಿಯೋ ವೈರಲ್ ಆದ ನಂತರ ಗಾಜಿಯಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಇದನ್ನೂ ಓದಿ: ಉತ್ತರಪ್ರದೇಶ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ- ಆರೋಪಿಯ ಬಂಧನ


