Homeಮುಖಪುಟಪಟಾಕಿ ಸಿಡಿಸುವುದು ಧಾರ್ಮಿಕ ಹಕ್ಕಿನಡಿ ರಕ್ಷಿಸಲ್ಪಟ್ಟಿಲ್ಲ : ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್‌. ಓಕಾ

ಪಟಾಕಿ ಸಿಡಿಸುವುದು ಧಾರ್ಮಿಕ ಹಕ್ಕಿನಡಿ ರಕ್ಷಿಸಲ್ಪಟ್ಟಿಲ್ಲ : ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್‌. ಓಕಾ

- Advertisement -
- Advertisement -

ಮಾಲಿನ್ಯ ಅಥವಾ ಪರಿಸರ ಹಾನಿ ಉಂಟುಮಾಡುವ ಧಾರ್ಮಿಕ ಆಚರಣೆಗಳು ಸಂವಿಧಾನದ 25ನೇ ವಿಧಿಯಡಿ (ಧಾರ್ಮಿಕ ಸ್ವಾತಂತ್ರ್ಯದ ಹಕ್ಕು) ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹೇಳಿದ್ದಾರೆ. ನಾಗರಿಕರು, ಸರ್ಕಾರಗಳು ಮತ್ತು ನ್ಯಾಯಾಲಯಗಳು ಹಬ್ಬಗಳು ಮತ್ತು ನಂಬಿಕೆ ಆಧಾರಿತ ಪದ್ಧತಿಗಳು ಪರಿಸರ ಮೇಲೆ ಬೀರುವ ಪರಿಣಾಮದ ಕುರಿತು ಪುನ:ವಿಮರ್ಶಿಸುವಂತೆ ಒತ್ತಾಯಿಸಿದ್ದಾರೆ.

“ಪಟಾಕಿ ಸಿಡಿಸುವುದು ಅಥವಾ ನದಿಗಳನ್ನು ಮಾಲಿನ್ಯ ಮಾಡುವ ಈ ರೀತಿಯ ಚಟುವಟಿಕೆಗಳು ಸಂವಿಧಾನದ 25ನೇ ವಿಧಿಯಡಿ ರಕ್ಷಣೆ ರಕ್ಷಿಸಲ್ಪಟ್ಟಿವೆಯೇ? ಎಂಬುವುದು ಪ್ರಶ್ನೆ. ನನ್ನ ಸೀಮಿತ ಜ್ಞಾನದ ಪ್ರಕಾರ, ಉತ್ತರವು ದೃಢವಾಗಿ ನಕಾರಾತ್ಮಕವಾಗಿರಬೇಕು” ಎಂದು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ‘ಕ್ಲೀನ್ ಏರ್, ಕ್ಲೈಮೆಟ್ ಜಸ್ಟಿಸ್ ಅಂಡ್ ವಿ – ಟುಗೆದರ್ ಫಾರ್ ಎ ಸಸ್ಟೇನೇಬಲ್ ಫ್ಯೂಚರ್’ ಎಂಬ ಉಪನ್ಯಾಸದಲ್ಲಿ ಓಕಾ ಹೇಳಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯವಾಗಲಿ ಅಥವಾ ಜನಪ್ರಿಯ ಭಾವನೆಯಾಗಲಿ ಸಾರ್ವಜನಿಕ ಆರೋಗ್ಯ ಅಥವಾ ಪರಿಸರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕ್ರಮಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ.

“ಧಾರ್ಮಿಕ ಹಬ್ಬದಂದು ಮಾಲಿನ್ಯ ಸೃಷ್ಟಿಸುವ ಹಕ್ಕು ನನಗಿದೆ ಎಂದು ನಾನು ಹೇಳಲಾರೆ. ಸಂವಿಧಾನವನ್ನು ಪಾಲಿಸುವುದು ಮತ್ತು 21ನೇ ವಿಧಿಯ ಅಡಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಅನುಭವಿಸುವಂತೆ ನೋಡಿಕೊಳ್ಳುವುದು ನನ್ನ ಮೂಲಭೂತ ಕರ್ತವ್ಯ. ನ್ಯಾಯಾಲಯಗಳು ಪರಿಸರ ವಿಷಯಗಳನ್ನು ನಿರ್ವಹಿಸುವಾಗ, ಅವು ಜನಪ್ರಿಯ ಅಥವಾ ಧಾರ್ಮಿಕ ಭಾವನೆಗಳಿಂದ ಪ್ರಭಾವಿತವಾಗಬಾರದು” ಎಂದು ಅಭಯ್ ಎಸ್‌. ಓಕಾ ಹೇಳಿದ್ದಾರೆ.

ಪರಿಸರ (ರಕ್ಷಣೆ) ಕಾಯ್ದೆ, ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ ಮತ್ತು ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಗಳಿಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳ ಬಗ್ಗೆ ನ್ಯಾಯಮೂರ್ತಿ ಓಕಾ ಕಳವಳ ವ್ಯಕ್ತಪಡಿಸಿದ್ದು, ಇವು ಉಲ್ಲಂಘನೆಗಳಿಗೆ ಕ್ರಿಮಿನಲ್ ಹೊಣೆಗಾರಿಕೆಯನ್ನು ತೆಗೆದುಹಾಕಿವೆ ಎಂದಿದ್ದಾರೆ.

“ಮೊದಲು ಪರಿಸರ ಕಾಯ್ದೆಗಳಲ್ಲಿ (ಇಪಿಎ, ಗಾಳಿ ಮತ್ತು ನೀರು ಕಾಯ್ದೆಗಳು) ಮಾಲಿನ್ಯಕಾರಕ ಕೃತ್ಯಗಳಿಗೆ ಜೈಲು ಶಿಕ್ಷೆ ಅಥವಾ ಅಪರಾಧ ಕೇಸ್ ಹಾಕುವ ನಿಯಮಗಳಿದ್ದವು. ಆದರೆ ಈಗ ಶಾಸಕಾಂಗವು ಆ ನಿಯಮಗಳನ್ನು ತೆಗೆದುಹಾಕಿ, ಕೇವಲ ಹಣದ ದಂಡ ಮಾತ್ರ ವಿಧಿಸುವಂತೆ ಬದಲಾಯಿಸಿದೆ. ಉದಾಹರಣೆಗೆ, ಕುಡಿಯುವ ನೀರನ್ನು ಕಲುಷಿತಗೊಳಿಸಿದರೂ ಆ ವ್ಯಕ್ತಿಗೆ ಜೈಲು ಶಿಕ್ಷೆಯಾಗದು, ಕೇವಲ ದಂಡ ಮಾತ್ರ. ಇದು ಪರಿಸರ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ ಎಂಬುದು ಓಕಾ ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಸರ ಸಂರಕ್ಷಣೆ ಯಾವಾಗಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ ಎಂದು ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ.

“ಶತಮಾನಗಳಿಂದ ನಮ್ಮ ಧಾರ್ಮಿಕ ಮತ್ತು ತತ್ವಜ್ಞಾನಿಗಳು ನಮ್ಮ ಪರಿಸರವನ್ನು ಸಂರಕ್ಷಿಸುವ ಮಹತ್ವವನ್ನು ನಮಗೆ ಕಲಿಸಿದ್ದಾರೆ. ನಾವು ಈ ಅಂತಾರಾಷ್ಟ್ರೀಯ ಸಮಾವೇಶಗಳಿಗೆ ಹೋಗಬೇಕಾಗಿಲ್ಲ; ಅದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ. ಬಹುಶಃ ಕಾಲಾನಂತರದಲ್ಲಿ, ನಮ್ಮ ಸಂಸ್ಕೃತಿಯಲ್ಲಿ ಯಾವುದು ಉತ್ತಮ ಎಂಬುದನ್ನು ನಾವು ಮರೆತಿರಬಹುದು” ಎಂದಿದ್ದಾರೆ.

“ಹಸಿರು ಬೆಂಚುಗಳ” ಪರಿಣಾಮಕಾರಿತ್ವವನ್ನು ಅವುಗಳ ಶೀರ್ಷಿಕೆಯಿಂದಲ್ಲ, ಬದಲಾಗಿ ಅವುಗಳ ಕೆಲಸದ ಮೂಲಕ ನಿರ್ಣಯಿಸಬೇಕು ಎಂದು ಓಕಾ ಹೇಳಿದ್ದಾರೆ.

“ಒಂದು ಪೀಠವು ಹಸಿರು ಬಣ್ಣದ್ದಾಗಿದೆಯೋ ಇಲ್ಲವೋ ಎಂಬುದು ಅದು ಹೊರಡಿಸಿದ ಆದೇಶಗಳ ಸ್ವರೂಪವನ್ನು ಅವಲಂಬಿಸಿರುತ್ತದೆ ಹೊರತು, ಅದರ ಹೆಸರಿನ ಆಧಾರದ ಮೇಲೆ ಅಲ್ಲ” ಎಂದು ಅವರು ಟೀಕಿಸಿದ್ದಾರೆ.

ನ್ಯಾಯಪೀಠದಲ್ಲಿ ತಮ್ಮ ಅವಧಿಯನ್ನು ನೆನಪಿಸಿಕೊಂಡ ನ್ಯಾಯಮೂರ್ತಿ ಓಕಾ, “ದುಃಖದ ಸಂಗತಿಯೆಂದರೆ ಪರಿಸರ ಸಮಸ್ಯೆಗಳಿಗೆ ನ್ಯಾಯಾಲಯದ ಮೆಟ್ಟಿಲೇರಲು ಧೈರ್ಯ ತೋರುವ ನಾಗರಿಕರು ಬಹಳ ಕಡಿಮೆ ಇದ್ದಾರೆ. ದುರದೃಷ್ಟವಶಾತ್, ಇಂತಹ ಪರಿಸರ ಪರ ಕೆಲಸ ಮಾಡುವರನ್ನು ರಾಜಕೀಯ ವರ್ಗ ಮತ್ತು ಧಾರ್ಮಿಕ ಗುಂಪುಗಳು ಅಪಹಾಸ್ಯ ಮಾಡುತ್ತವೆ. ಪರಿಸರ ವಿಷಯಗಳಲ್ಲಿ ಬಲವಾದ ಆದೇಶಗಳನ್ನು ನೀಡುವ ನ್ಯಾಯಾಧೀಶರನ್ನು ಕೂಡ ಗುರಿಯಾಗಿಸಲಾಗುತ್ತಿದೆ. ಇದು ಅತ್ಯಂತ ದುರದೃಷ್ಟಕರ ಪರಿಸ್ಥಿತಿ” ಎಂದಿದ್ದಾರೆ.

ನಿಜವಾದ ಅಭಿವೃದ್ಧಿಯು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕೇ ಹೊರತು, ಪರಿಸರವನ್ನು ಕೆಡಿಸಬಾರದು ಎಂದು ನ್ಯಾಯಮೂರ್ತಿ ಓಕಾ ತಿಳಿಸಿದ್ದಾರೆ.

“ಪರಿಸರ ಕಾಳಜಿಯನ್ನು ಅಭಿವೃದ್ಧಿಯ ಅಗತ್ಯದೊಂದಿಗೆ ಸಮತೋಲನಗೊಳಿಸಬೇಕು ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಸಂವಿಧಾನದ ಚೌಕಟ್ಟಿನಲ್ಲಿ ನಿಜವಾದ ಅಭಿವೃದ್ಧಿ ಎಂದರೆ ಏನು ಎಂಬುದನ್ನು ನಾವು ನಿರ್ಲಕ್ಷಿಸಿರುವುದರಿಂದ ಬಹುಶಃ ಇದೆಲ್ಲವೂ ಸಂಭವಿಸಿದೆ” ಎಂದಿದ್ದಾರೆ.

“ನಮ್ಮ ನಗರಗಳಲ್ಲಿ ಬಡವರಿಗೆ ಕೈಗೆಟುಕುವ ವಸತಿ ಸೌಕರ್ಯ, ಸಾಮಾನ್ಯ ಜನರಿಗೆ ಕೈಗೆಟುಕುವ ಸಾರಿಗೆ, ಶಿಕ್ಷಣ ಮತ್ತು ಆರೋಗ್ಯವನ್ನು ಸೃಷ್ಟಿಸುವುದು ನಿಜವಾದ ಅಭಿವೃದ್ಧಿ ಎಂದು ನಾನು ಭಾವಿಸುತ್ತೇನೆ. ಇಂದು ಯಾವುದೇ ನಗರದಲ್ಲಿ, ಸಾಮಾನ್ಯ ವ್ಯಕ್ತಿಯು ವಸತಿ ಸೌಕರ್ಯವನ್ನು ಪಡೆಯಲು ಸಾಹಸ ಮಾಡಬಹುದೇ? ಅದು ಅಸಾಧ್ಯ,” ಎಂದು ಹೇಳಿದ್ದಾರೆ.

ನ್ಯಾಯಾಂಗ ಆದೇಶಗಳು ವಿಕಸಿತ ಭಾರತ ಅಭಿಯಾನಕ್ಕೆ ಅಡ್ಡಿಯಾಗುತ್ತಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಓಕಾ, “ಸರ್ಕಾರದಲ್ಲಿ ಉತ್ತಮ ಹುದ್ದೆಯನ್ನು ಹೊಂದಿರುವ ಒಬ್ಬ ಪ್ರಖ್ಯಾತ ವ್ಯಕ್ತಿ ಇತ್ತೀಚೆಗೆ ಟೀಕೆ ಮಾಡಿದ್ದಾರೆ. ನ್ಯಾಯಾಲಯದ ಆದೇಶಗಳು ವಿಕಸಿತ ಭಾರತಕ್ಕೆ ಅಡ್ಡಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ರಚನಾತ್ಮಕ ಟೀಕೆ ಮಾಡುವ ಹಕ್ಕಿದೆ ಎಂದು ನಾನು ಹೇಳಿದ್ದೇನೆ. ಆದರೆ, ಈ ವಿದ್ವಾಂಸರು ವಿಕಸಿತ ಭಾರತದ ಪ್ರಯತ್ನಕ್ಕೆ ಅಡ್ಡಿಯಾದ ನ್ಯಾಯಾಂಗ ಆದೇಶಗಳ ಉದಾಹರಣೆಗಳನ್ನು ನೀಡಬೇಕಾಗಿತ್ತು. ಅವರು ವಿವರಗಳನ್ನು ಕೊಡಬೇಕಿತ್ತು. ಆ ಆದೇಶಗಳು ಯಾವುವು? ಎಂದು ಅವರು ಹೇಳಿದ್ದರೆ, ಅದು ರಚನಾತ್ಮಕ ಟೀಕೆಯಾಗುತ್ತಿತ್ತು. ಅವರು ನಿದರ್ಶನಗಳನ್ನು ನೀಡಿದ್ದರೆ, ನಾವು ಆ ಆದೇಶಗಳನ್ನು ಅಧ್ಯಯನ ಮಾಡುತ್ತಿದ್ದೆವು” ಎಂದಿದ್ದಾರೆ.

Courtesy: barandbench.com

ಒಳಮೀಸಲಾತಿಯ ಒಳಸುಳಿಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...

ಬುರ್ಖಾ ಧರಿಸದ ಕಾರಣಕ್ಕೆ ಪತ್ನಿ-ಮಕ್ಕಳ ಕೊಲೆ; ಮನೆಯೊಳಗೆ ಹೂತುಹಾಕಿದ ವ್ಯಕ್ತಿ

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಘೋರ ಘಟನೆಯಿಂದು ವರದಿಯಾಗಿದೆ, ತನ್ನ ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ತ್ರಿವಳಿ ಕೊಲೆ ಮಾಡಿದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿ ಫಾರೂಕ್ ಎಂದು...