Homeಮುಖಪುಟವರ್ಕೌಟ್ ಆಗದ ವಚನಾನಂದ ಸ್ವಾಮಿ ಧಮಕಿ : ಮರುಗೇಶ ನಿರಾಣಿಗಿಲ್ಲ ಸಚಿವ ಸ್ಥಾನ!

ವರ್ಕೌಟ್ ಆಗದ ವಚನಾನಂದ ಸ್ವಾಮಿ ಧಮಕಿ : ಮರುಗೇಶ ನಿರಾಣಿಗಿಲ್ಲ ಸಚಿವ ಸ್ಥಾನ!

ತನಗೆ ಅನ್ಯಾಯವಾದಾಗಲೆಲ್ಲ ಪತ್ಯೇಕತೆಯ ಕೂಗು ಹಾಕುತ್ತ 'ಕತ್ತಿ' ಝಳಪಿಸುತ್ತಿದ್ದ ಉಮೇಶ್ ಕತ್ತಿ ನನಗೆ ಸಚಿವ ಸ್ಥಾನ ಬೇಡ., ನಾನು ಮುಖ್ಯಮಂತ್ರಿ ಆಗಿಯೇ ತೀರುತ್ತೇನೆ ಎನ್ನುತ್ತಿದ್ದವರು ಈಗ ಮೌನಕ್ಕೆ ಜಾರಿದ್ದಾರೆ.

- Advertisement -

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಮುಖಂಡರಿಗೆ ಸಚಿವ ಸ್ಥಾನ ದೊರೆತಿಲ್ಲ. ಅರ್ಹತೆ, ಅನುಭವ ಇದ್ದರೂ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ದೂರವೇ ಇಡಲಾಗಿದೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಮೊದಲಾದವರಿಗೆ ಸಚಿವ ಸ್ಥಾನ ತಪ್ಪಿದೆ. ಇದು ಬಿಜೆಪಿಯಲ್ಲಿ ಭಿನ್ನಮತಕ್ಕೆ  ಕಾರಣವಾಗಬಹುದು. ಸಚಿವ ಸ್ಥಾನ ದೊರೆಯದೇ ಇರುವವರ ಮುಂದಿನ ನಡೆಯ ಬಗ್ಗೆ ಸದ್ಯಕ್ಕೆ ಏನೂ ಹೇಳಲು ಆಗದಿದ್ದರೂ ದೂರಗಾಮಿ ಪರಿಣಾಮ ಬೀರದೆ ಇರದು.

ಯಡಿಯೂರಪ್ಪ ಅಧಿಕಾರದಲ್ಲಿ ಇರಲಿ, ಬಿಡಲಿ  ಅವರನ್ನು ಎಡಬಿಡದೆ ಜೊತೆಯಲ್ಲಿದ್ದುಕೊಂಡು ಬಂದವರು ಉಮೇಶ್‌ ಕತ್ತಿ ಮತ್ತು ಮುರುಗೇಶ್ ನಿರಾಣಿ. ಎಂತಹ ಪರಿಸ್ಥಿತಿಯಲ್ಲೂ ಇವರಿಬ್ಬರು ಯಡಿಯೂರಪ್ಪ ಅವರನ್ನು ಬಿಟ್ಟು ಕೊಡಲಿಲ್ಲ. ಯಡಿಯೂರಪ್ಪ ಎಲ್ಲಿಗೆ ಹೋಗುತ್ತಾರೋ ಅಲ್ಲಿ ಇವರು ಇರುತ್ತಿದ್ದರು. ಅವರ ನೆರವಿಗೆ ಬರುತ್ತಿದ್ದರು. ಇದೇ ಕಾರಣಕ್ಕೆ ಉಮೇಶ್ ಕತ್ತಿ ಮತ್ತು ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗಲಿದೆ. ಯಡಿಯೂರಪ್ಪ ಇವರಿಬ್ಬರನ್ನು ಕೈಬಿಡಲ್ಲ  ಎಂಬುದು ಬಹುತೇಕರಿಗೆ ಖಚಿತವಾಗಿತ್ತು. ಈಗ ಅದೆಲ್ಲವೂ ಹುಸಿಯಾಗಿದೆ.

ಮುರುಗೇಶ ನಿರಾಣಿ

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ಪಂಚಮಸಾಲಿಗರ ಸಮಾವೇಶದಲ್ಲಿ ವಚನಾನಂದ ಶ್ರೀಗಳು ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ತಮ್ಮ ಸಮುದಾಯದ ಮುರುಗೇಶ್ ನಿರಾಣಿಗೆ ಮಂತ್ರಿ ಸ್ಥಾನ ಕೊಡಬೇಕು. ಇಲ್ಲಿದಿದ್ದರೆ ಸಮುದಾಯ ಮುಖ್ಯಮಂತ್ರಿಗಳನ್ನು ಕೈಬಿಡಲಿದೆ ಎಂದು ಧಮಕಿ ಹಾಕಿದ್ದರು. ಆಗ ಯಡಿಯೂರಪ್ಪ ಸಿಟ್ಟಿನಿಂದ ಎದ್ದುನಿಂತು ಹಾಗೆಲ್ಲ ಹೇಳಬೇಡಿ ಎಂದು ಹೇಳಿ ಸಾವರಿಸಿಕೊಂಡು ಕುಳಿತಿದ್ದರು. ಮುಖ್ಯಮಂತ್ರಿಗಳು ಆಗ ತಮ್ಮ ನಿಲುವನ್ನು ವ್ಯಕ್ತಪಡಿಸದೇ ಹೋದರೂ, ಈಗ ಧಮಕಿಗೆ ಮಣಿಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಚಿವ ಸಂಪುಟದ ವಿಸ್ತರಣೆಯಲ್ಲಿ ಪಂಚಮಸಾಲಿ ಸಮುದಾಯದ  ಒಬ್ಬರನ್ನೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದು ಪಂಚಮಸಾಲಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವಚನಾನಂದ ಶ್ರೀಗಳು ಹಾಕಿದ ಧಮಕಿಯೂ ವರ್ಕೌಟ್ ಆಗಿಲ್ಲ. ಇದರಿಂದ ಶ್ರೀಗಳು ಬೇಸರಗೊಂಡು ಉತ್ತರ ಕರ್ನಾಟಕದಲ್ಲಿ ಪ್ರಬಲ ವಾಗಿರುವ ತಮ್ಮ ಪಂಚಮಸಾಲಿ ಸಮುದಾಯಕ್ಕೆ ಯಾವ ಸಂದೇಶವನ್ನು ರವಾನಿಸುತ್ತಾರೋ ನೋಡಬೇಕು. ರೇಣುಕಾಚಾರ್ಯ ಮೊದಲಾದವರು ಸಚಿವ ಸ್ಥಾನ ಬೇಕು ಎಂದು ಹೇಳಿಕೆಗಳನ್ನು ನೀಡುತ್ತಿದ್ದರೂ ಈ ಇಬ್ಬರು ಮಾತ್ರ ಮೌನವಾಗೇ ಹೆಜ್ಜೆಹಾರುತ್ತಾ ಬರುತ್ತಿದ್ದಾರೆ.

ಉಮೇಶ್‌ ಕತ್ತಿ

ಪ್ರತ್ಯೇಕ ರಾಜ್ಯದ ಮಾತುಗಳನ್ನಾಡುತ್ತ ಸುದ್ದಿಯಲ್ಲಿರುತ್ತಿದ್ದ ಉಮೇಶ್ ಕತ್ತಿ ಈಗ ಏನು ಮಾಡುತ್ತಾರೆಂಬುದು ಕುತೂಹಲ ಮೂಡಿಸಿದೆ. ತನಗೆ ಅನ್ಯಾಯವಾದಾಗಲೆಲ್ಲ ಪತ್ಯೇಕತೆಯ ಕೂಗು ಹಾಕುತ್ತ ‘ಕತ್ತಿ’ ಝಳಪಿಸುತ್ತಿದ್ದ ಉಮೇಶ್ ಕತ್ತಿ ನನಗೆ ಸಚಿವ ಸ್ಥಾನ ಬೇಡ., ನಾನು ಮುಖ್ಯಮಂತ್ರಿ ಆಗಿಯೇ ತೀರುತ್ತೇನೆ ಎನ್ನುತ್ತಿದ್ದವರು ಈಗ ಮೌನಕ್ಕೆ ಜಾರಿದ್ದಾರೆ. ಮೌನ ಸ್ಪೋಟಿಸಲು ಕಾಲ ಪಕ್ವವಾಗಬೇಕು. ‘ಪಕ್ವಕ್ಕಲ್ಲದೆ ಪರಿಣಾಮಕ್ಕಕ್ಕುಂ’ ಎಂಬ ಕವಿಯೊಬ್ಬರ ಮಾತಿನಂತೆ ಬೇಗುದಿ ಸ್ಪೋಟವಾದರೂ ಅಚ್ಚರಿ ಇಲ್ಲ.

ಸಂಪುಟ ವಿಸ್ತರಣೆಯ ಈ ಸಂದರ್ಭದಲ್ಲೂ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ಕೂಗಾಡುತ್ತಿದ್ದ ಆ ಭಾಗದ ಶಾಸಕರು ಯಡಿಯೂರಪ್ಪ ಅವಧಿಯಲ್ಲಿ ಮೌನಕ್ಕೆ ಜಾರಿರುವುದು ಐತಿಹಾಸಿಕ ವ್ಯಂಗ್ಯ. ನಿರ್ಲಕ್ಷ್ಯಕ್ಕೆ ‘ಉತ್ತರ’ ನೀಡಬಲ್ಲುದೇ ಕರ್ನಾಟಕ? ನೋಡಬೇಕು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial