ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಕುರಿತ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು.
ಇದಲ್ಲದೆ ಉಭಯ ರಾಷ್ಟ್ರಗಳು ರಾಜತಾಂತ್ರಿಕರನ್ನು ದೇಶ ತೊರೆಯುವಂತೆ ಸೂಚಿಸಿತ್ತು. ಕೆನಡಾ ಮತ್ತು ಭಾರತದ ನಡುವಿನ ಬಿರುಕಿನ ಭಾಗವಾಗಿ ಅ.10ರೊಳಗೆ ಸುಮಾರು 40 ಮಂದಿ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಗೆ ಭಾರತ ಸೂಚನೆ ನೀಡಿತ್ತು.
ಈ ನಡುವೆ ಕೆನಡಾ, ಭಾರತದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಬಹುಪಾಲು ರಾಜತಾಂತ್ರಿಕರನ್ನು ವಾಪಾಸ್ಸು ಕರೆಸಿಕೊಂಡು ಕೌಲಾಲಂಪುರ ಹಾಗೂ ಸಿಂಗಾಪುರಕ್ಕೆ ಸ್ಥಳಾಂತರಿಸಿದೆ ಎಂದು ಕೆನಡಾದ ಟೆಲಿವಿಷನ್ ನೆಟ್‌ವರ್ಕ್ ಸಿಟಿವಿ ನ್ಯೂಸ್ ವರದಿ ಮಾಡಿದೆ.
ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಾಸ್ಸು ಕರೆಸಿಕೊಳ್ಳಲು ಭಾರತ ಸರ್ಕಾರ ಕೆನಡಾಕ್ಕೆ ಅ. 10ರವರೆಗೆ ಕಾಲಾವಕಾಶ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಟಿವಿ ನ್ಯೂಸ್ ವರದಿ ಮಾಡಿತ್ತು. ಇದಲ್ಲದೆ ಇಲ್ಲಿಯೇ ಉಳಿಯುವ ಅಧಿಕಾರಿಗಳಿಗೆ ಎಲ್ಲ ವಿನಾಯಿತಿಗಳನ್ನು ರದ್ದುಪಡಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿತ್ತು.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಕುರಿತ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಯನ್ನು ಈ ಮೊದಲು ಖಂಡಿಸಿದ್ದ ಭಾರತದ ವಿದೇಶಾಂಗ ಸಚಿವಾಲಯ, ಭಾರತದ ಹೆಸರನ್ನು ತಳುಕು ಹಾಕಿ ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶಪೂರಿತವಾಗಿವೆ. ನಮ್ಮದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ದೇಶವಾಗಿದ್ದು, ಕಾನೂನು- ಸುವ್ಯವಸ್ಥೆಯನ್ನು ಪಾಲಿಸುವ ಬದ್ಧತೆಯನ್ನು ಹೊಂದಿರುವ ರಾಷ್ಟ್ರವಾಗಿದೆ ಎಂದು ಹೇಳಿತ್ತು.
ಇದಲ್ಲದೆ ಅಮೆರಿಕಾ ಕೂಡ ಕೆನಾಡಾ ಪ್ರಧಾನಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಭಾರತ ನಿಜ್ಜರ್ ಪ್ರಕರಣದಲ್ಲಿ ಕೆನಡಾದ ತನಿಖೆಗೆ ಸಹಕರಿಸಬೇಕು ಎಂದು ಹೇಳಿತ್ತು.
ಇದನ್ನು ಓದಿ: ಕೇರಳ: ನ್ಯೂಸ್‌ಕ್ಲಿಕ್‌ನ ಮಾಜಿ ಸಿಬ್ಬಂದಿ ಮನೆ ಮೇಲೆ ದೆಹಲಿ ಪೊಲೀಸರ ದಾಳಿ


