‘ಜಾತಿ ಬೇಲಿಯಿಂದ ಧಾರ್ಮಿಕ ನಂಬಿಕೆ ತಡೆಯಲು ಸಾಧ್ಯವಿಲ್ಲ..’; ದಲಿತ ಕಾಲೊನಿಯ ಮೂಲಕ ದೇವರ ರಥ ಸಂಚಾರಕ್ಕೆ ಮದ್ರಾಸ್ ಹೈಕೋರ್ಟ್ ಅನುಮತಿ

ದಲಿತ ಕಾಲೊನಿಯ ಮೂಲಕ ದೇವಾಲಯದ ರಥವು ತೆರಳಲು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಮಾರ್ಗ ಮಾಡಿಕೊಟ್ಟಿದೆ. “ದೇವರು ಎಂದಿಗೂ ಭೇದಭಾವ ತೋರಿಸುವುದಿಲ್ಲ, ದೇವರಿಗೆ ಅಥವಾ ರಥಕ್ಕೆ ಯಾವ ಬೀದಿಯೂ ಅಯೋಗ್ಯವಲ್ಲ ಎಂದು ನ್ಯಾಯಮೂರ್ತಿ ಪಿ.ಬಿ. ಬಾಲಾಜಿ ಅವರು ಅಭಿಪ್ರಾಯಪಟ್ಟರು ಎಂದು ‘ಲೈವ್ ಲಾ’ ವರದಿ ಮಾಡಿದೆ. “ಧಾರ್ಮಿಕ ನಂಬಿಕೆಯನ್ನು ಜಾತಿ ಅಥವಾ ಧರ್ಮದ ಬೇಲಿಯಿಂದ ಸುತ್ತುವುದಕ್ಕೆ ಸಾಧ್ಯವಿಲ್ಲ. ದೈವತ್ವವನ್ನು ಮಾನವ ಪೂರ್ವಾಗ್ರಹಗಳ ಅಡಿಯಲ್ಲಿಡಲಾಗುವುದಿಲ್ಲ. ದೇವರು ಕೆಲ ಬೀದಿಗಳಲ್ಲೇ ವಾಸಿಸುತ್ತಾನೆ ಎಂಬುದಿಲ್ಲ. ಯಾವ ಬೀದಿಯೂ ದೇವರಿಗೂ ಅಥವಾ ರಥಕ್ಕೂ ಅಯೋಗ್ಯವಲ್ಲ. … Continue reading ‘ಜಾತಿ ಬೇಲಿಯಿಂದ ಧಾರ್ಮಿಕ ನಂಬಿಕೆ ತಡೆಯಲು ಸಾಧ್ಯವಿಲ್ಲ..’; ದಲಿತ ಕಾಲೊನಿಯ ಮೂಲಕ ದೇವರ ರಥ ಸಂಚಾರಕ್ಕೆ ಮದ್ರಾಸ್ ಹೈಕೋರ್ಟ್ ಅನುಮತಿ