ಜಾತಿ ಜನಗಣತಿಯ ವಿರುದ್ಧ ಈ ಹಿಂದೆ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರ ವಿರುದ್ಧ ಶುಕ್ರವಾರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಝಾ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಜಾತಿಗಣತಿಯ ಬೇಡಿಕೆಯು ನಿರ್ಲಕ್ಷಿಸಲು ಸಾಧ್ಯವಾಗದ ಬೇಡಿಕೆ ಎಂದು ಅವರು ಪ್ರತಿಪಾದಿಸಿದ್ದಾರೆ. ಜಾತಿಗಣತಿ ಬೇಡಿಕೆ
‘ಬಟೇಂಗೆ ತೋ ಕಟೇಂಗೆ’ ಎಂಬ ಘೋಷಣೆಗೆಯ ಬದಲಾಗಿ ಯಾವ ಘೋಷಣೆ ಕೂಗುತ್ತೀರಿ ಎಂದು ಅವರು ಬಿಜೆಪಿಗೆ ಕೇಳಿದ್ದಾರೆ. ಜಾತಿಗಣತಿ ಬೇಡಿಕೆ
“ನಮ್ಮ (ಬಿಹಾರ) ವಿಪಕ್ಷ ನಾಯಕ ತೇಜಸ್ವಿ ಯಾದವ್ ಕೂಡ ಇದನ್ನೇ ಹೇಳಿದ್ದಾರೆ. ನಾವು ಕೂಡ ಇದನ್ನೇ ಹೇಳುತ್ತಿದ್ದೇವೆ. ಇದು ನಿರ್ಲಕ್ಷಿಸಲು ಸಾಧ್ಯವಾಗದ ಬೇಡಿಕೆ. ಜಾತಿ ಜನಗಣತಿ ನಡೆದರೆ, ಜಾತಿವಾದದ ವಿಷ ಹರಡುತ್ತದೆ ಎಂದು ಹೇಳಿದ್ದ ಬಿಜೆಪಿಯ ದೊಡ್ಡ ನಾಯಕರ ಬಗ್ಗೆ ನನಗೆ ಚಿಂತೆಯಾಗಿದ್ದು, ಅವರು ಈಗ ತಮ್ಮ ಹೇಳಿಕೆಯನ್ನು ಹೇಗೆ ಮುಚ್ಚಿಡುತ್ತಾರೆ?” ಎಂದು ಝಾ ಅವರು ಹೇಳಿದ್ದಾರೆ.
ಜಾತಿ ಜನಗಣತಿಯನ್ನು ಮೂಲತಃ 2021 ಕ್ಕೆ ನಿಗದಿಪಡಿಸಲಾಗಿದ್ದಂತೆ, ಅದನ್ನು ಕಾರ್ಯಗತಗೊಳಿಸಲು ಮತ್ತು ನಡೆಸಲು ಸರ್ಕಾರವು ಒಂದು ಟೈಮ್‌ಲೈನ್ ಅಥವಾ ಮಾರ್ಗಸೂಚಿಯನ್ನು ರಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡನೆ ಸೇರಿದಂತೆ ಹಲವು ಸಮಸ್ಯೆಗಳು ಸರ್ಕಾರಿ ಜನಗಣತಿಗೆ ನಿಕಟ ಸಂಬಂಧ ಹೊಂದಿವೆ ಎಂದು ಅವರು ಹೇಳಿದ್ದಾರೆ.
“ಮುಖ್ಯವಾದ ವಿಷಯವೆಂದರೆ ಹಲವು ಪ್ರಮುಖ ವಿಷಯಗಳನ್ನು ಒಟ್ಟಿಗೆ ಸೇರಿಸಲಾಗಿದೆ. ಜನಗಣತಿ 2021 ರಲ್ಲಿ ನಡೆಯಬೇಕಿತ್ತು. ಆದರೆ ಈಗ ನಾಲ್ಕು ವರ್ಷಗಳು ಕಳೆದಿವೆ, ಅದಾಗ್ಯೂ, ಈ ಬಗ್ಗೆ ಏನೂ ನಡೆದಿಲ್ಲ. ಜಾತಿ ಜನಗಣತಿ, ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್‌ವಿಂಗಡನೆಯು ಜನಗಣತಿಯೊಂದಿಗೆ ಸಂಬಂಧ ಹೊಂದಿವೆ. ಅದಕ್ಕಾಗಿ ಒಂದು ಸಮಯ ಅಥವಾ ಮಾರ್ಗಸೂಚಿ ಇರಬೇಕು” ಎಂದು ಝಾ ಹೇಳಿದ್ದಾರೆ.
ಈ ಮಧ್ಯೆ, ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಲು ನಿರ್ಧರಿಸಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ವಸಂತರಾವ್ ಸಪ್ಕಲ್ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮನ್ನಣೆ ನೀಡಿದ್ದಾರೆ. ಜಾತಿ ಜನಗಣತಿಯನ್ನು ಸಮಯಕ್ಕೆ ಅನುಗುಣವಾಗಿ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದ್ದಾರೆ.
ಗುರುವಾರದಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಜಾತಿ ಜನಗಣತಿಯನ್ನು ಅನುಮೋದಿಸುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅವರು ಇದು ಸಾಮಾಜಿಕ ನ್ಯಾಯವನ್ನು ಸಾಧಿಸುವ ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮವು ಪಿಡಿಎ (ಹಿಂದುಳಿದ ವರ್ಗ, ದಲಿತ, ಆಲ್ಪಸಂಖ್ಯಾತರು) ಗೆ ದೊರೆತ ಪ್ರಮುಖ ವಿಜಯವಾಗಿದ್ದು, ವಿವಿಧ ಗುಂಪುಗಳ ಸಾಮೂಹಿಕ ಒತ್ತಡದ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: Karnataka SSLC Result 2025 | ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ
Karnataka SSLC Result 2025 | ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ