Home ನಮ್ಮ ಕುರಿತು

ನಮ್ಮ ಕುರಿತು

ಪಿ.ಲಂಕೇಶ್ ಅವರು ಸ್ಥಾಪಿಸಿದ್ದ ಲಂಕೇಶ್ ಪತ್ರಿಕೆಯು ಕನ್ನಡ ಪತ್ರಿಕೋದ್ಯಮ, ಸಂಸ್ಕೃತಿ ಮತ್ತು ರಾಜಕಾರಣದಲ್ಲಿ ಮಹತ್ವದ ವಿದ್ಯಮಾನವಾಗಿತ್ತು. ಕನ್ನಡದ ಜಾಣ ಜಾಣೆಯರಿಗೆ ರಂಜನೆ-ಬೋಧನೆ-ಪ್ರಚೋದನೆ ನೀಡುತ್ತಿದ್ದ ಆ ಪತ್ರಿಕೆಗೆ, ಅವರ ನಿಧನಾನಂತರ ಗೌರಿ ಲಂಕೇಶರು ಸಂಪಾದಕರಾಗಿದ್ದರು. ಅದರ ಮುಂದುವರಿಕೆಯಾಗಿ ತಮ್ಮದೇ ಗೌರಿ ‘ಲಂಕೇಶ್’ ವಾರಪತ್ರಿಕೆಯನ್ನು ಅವರು ಒಂದು ದಶಕಕ್ಕೂ ಹೆಚ್ಚು ಕಾಲ ತರುತ್ತಲೇ, ಒಬ್ಬ ಧೀಮಂತ ಸಾಮಾಜಿಕ ಕಾರ್ಯಕರ್ತೆಯಾಗಿ ರೂಪುತಳೆದಿದ್ದರು.

ಸೆಪ್ಟೆಂಬರ್ 5, 2017ರಂದು ಅಪರಿಚಿತ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆಗೈದರು. ತನಿಖೆ ನಡೆಯುತ್ತಿದ್ದು, ಅಪರಾಧಿಗಳು ಯಾರೆಂಬುದು ಸ್ಪಷ್ಟವಾಗಬೇಕಿದೆಯಾದರೂ, ಗೌರಿಯವರು ಪ್ರತಿಪಾದಿಸಿದ ಸಾಂವಿಧಾನಿಕ ಆಶಯಗಳ ವಿರುದ್ಧ ಇದ್ದವರೇ ಈ ಕೊಲೆಯನ್ನು ಮಾಡಿದ್ದಾರೆನ್ನುವುದಕ್ಕೆ ಪುರಾವೆಗಳಿವೆ.

ಗೌರಿಯವರು ಇಲ್ಲವಾದರೂ, ಅವರು ಪ್ರಪಂಚದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕವಾಗಿ ನಮ್ಮ ಜೊತೆಗೇ ಇದ್ದಾರೆ. ಅವರ ಆಶಯಗಳನ್ನು ಮುಂದುವರೆಸುವ ಸಲುವಾಗಿ ‘ನ್ಯಾಯಪಥ’ ವಾರಪತ್ರಿಕೆ ಮತ್ತು ‘ನಾನುಗೌರಿ.ಕಾಂ’ ವೆಬ್ ಪೋರ್ಟಲ್ ಗಳನ್ನು ‘ಗೌರಿ ಮೀಡಿಯಾ ಟ್ರಸ್ಟ್’ ನಡೆಸಿಕೊಂಡು ಬರುತ್ತಿದೆ. ಇದಕ್ಕೆ ಹಲವು ಹಿತೈಷಿಗಳಲ್ಲದೇ, ‘ಗೌರಿ ಸ್ಮಾರಕ ಟ್ರಸ್ಟ್’ ಪ್ರಧಾನವಾಗಿ ಬೆಂಬಲಿಸುತ್ತಿವೆ.

ನೀವೂ ಜೊತೆಗೂಡಿದರೆ, ಇಂದಿನ ಬಹುಮುಖ್ಯ ಅಗತ್ಯವಾದ ‘ಸ್ವತಂತ್ರ, ನಿರ್ಭೀತ, ಜನಪರ ಪತ್ರಿಕೋದ್ಯಮ’ವನ್ನು ಮತ್ತಷ್ಟು ಗಟ್ಟಿಯಾಗಿ ಕಟ್ಟಬಹುದು.

No posts to display