Homeಕೇಂದ್ರ ಮಿನಿ ಬಜೆಟ್‌ 2021: ಇಲ್ಲಿವೆ ಪ್ರಮುಖಾಂಶಗಳು

ಕೇಂದ್ರ ಮಿನಿ ಬಜೆಟ್‌ 2021: ಇಲ್ಲಿವೆ ಪ್ರಮುಖಾಂಶಗಳು

ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಫೆಬ್ರವರಿ 2ರಿಂದಲೇ  ಅನ್ವಯವಾಗಲಿದೆ.

- Advertisement -

2021-2022ನೇ ಸಾಲಿನ ಕೇಂದ್ರ ಆಯವ್ಯಯವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಂಸತ್ತಿನಲ್ಲಿ ಮಂಡಿಸಿದ್ದು, ಮುಖ್ಯಾಂಶಗಳು ಇಲ್ಲಿವೆ.

 • ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೃಷಿ ಮೂಲಭೂತ ಸೌಕರ್ಯ  ಹಾಗೂ ಅಭಿವೃದ್ದಿ ಸೆಸ್ (ಎಐಡಿಸಿ) ಅನ್ನು ವಿಧಿಸುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಪೆಟ್ರೋಲ್ ಮೇಲೆ ಲೀಟರ್ ಗೆ 2.50 ರೂ. ಹಾಗೂ ಡೀಸೆಲ್ ಮೇಲೆ 4 ರೂ. ಕೃಷಿ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಫೆಬ್ರವರಿ 2ರಿಂದಲೇ  ಅನ್ವಯವಾಗಲಿದೆ.

 • ಕೈಗೆಟುಕುವ ಮನೆ ಖರೀದಿಸಲು ಸಿಗುವ 1.5 ಲಕ್ಷ ರೂ. ಸಾಲ ಸೌಲಭ್ಯ ಇನ್ನೂ ಒಂದು ವರ್ಷ ವಿಸ್ತರಣೆ

 • ಕೋವಿಡ್ ಸೆಸ್ ವಿಧಿಸದಿರಲು ನಿರ್ಧಾರ

 • 75 ವರ್ಷ ಮೇಲ್ಪಟ್ಟವರು ತೆರಿಗೆ ಪಾವತಿಸುವ ಅಗತ್ಯವಿಲ್ಲ

 • ಎಲ್ಲಾ ವರ್ಗದ ಕಾರ್ಮಿಕರಿಗೆ ಇನ್ನುಮುಂದೆ ಕನಿಷ್ಠ ವೇತನ ಅನ್ವಯವಾಗಲಿದೆ. ಸಮರ್ಪಕ ರಕ್ಷಣೆಯೊಂದಿಗೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕು: ನಿರ್ಮಲಾ ಸೀತಾರಾಮನ್

 • ಒಂದೇ ದೇಶ,ಒಂದೇ ರೇಶನ್ ಕಾ‍ರ್ಡ್ ಪರಿಕಲ್ಪನೆ ಜಾರಿಗೆ

 • 69 ಕೋಟಿ ಜನ ಅಂದರೆ 86% ಫಲಾನುಭವಿಗಳು ಒಂದು ರಾಷ್ಟ್ರ, ಒಂದು ಪಡಿತರ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ರೌಡಿಶೀಟರ್ ಪಟ್ಟಿಯಲ್ಲಿ ಡಾ.ಕಫೀಲ್ ಖಾನ್ ಹೆಸರು – ಒಳ್ಳೆಯದೇ ಆಯ್ತು ಎಂದ ಕಫೀಲ್ ಖಾನ್!

 • ಗ್ರಾಮೀಣ ಮೂಲ ಅಭಿವೃದ್ಧಿ ನಿಧಿಗೆ 30,000 ಕೋಟಿಯಿಂದ 40,000 ಕೋಟಿ ರೂ. ಮತ್ತು ಐದು ಪ್ರಮುಖ ಮೀನುಗಾರಿಕೆ ಬಂದರುಗಳನ್ನು ಆರ್ಥಿಕ ಚಟುವಟಿಕೆಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಲಾಗಿದೆ.

 • ಕೃಷಿ ಸಾಲ ಗುರಿಯನ್ನು 16.5 ಲಕ್ಷ ಕೋ.ಗೆ ಹೆಚ್ಚಿಸಲು ವಿತ್ತ ಸಚಿವರ ಪ್ರಸ್ತಾವ

 • ಕೃಷಿ ಕ್ಷೇತ್ರದ ಸಂವರ್ಧನೆಗಾಗಿ 2022 ರ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ವಿಸ್ತರಿಸಲಾಗುತ್ತದೆ. ಇದಕ್ಕಾಗಿ ಹಲವು ಕಲ್ಯಾಣ ಯೋಜನೆಗಳನ್ನು ನವೀಕರಣಗೊಳಿಸಲಾಗಿದೆ: ನಿರ್ಮಲಾ ಸೀತಾರಾಮನ್

 • 2022 ರ  ಹಣಕಾಸು ವರ್ಷದಲ್ಲಿ 2 ಪಿಎಸ್‌ಯು ಬ್ಯಾಂಕುಗಳು ಮತ್ತು ಒಂದು ಸಾಮಾನ್ಯ ವಿಮಾ ಕಂಪನಿಯನ್ನು ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿದೆ: ನಿರ್ಮಲಾ ಸೀತಾರಾಮನ್

 • 1 ಕೋಟಿ ಜನರಿಗೆ ಉಜ್ವಲಾ ಯೋಜನೆ ವಿಸ್ತರಣೆ. ಮುಂದಿನ ಮೂರು ವರ್ಷಗಳಲ್ಲಿ 100 ಜಿಲ್ಲೆಗಳು ಯೋಜನೆ ವ್ಯಾಪ್ತಿಗೆ

ಇದನ್ನೂ ಓದಿ:ಮಿಯಾ ಮುಸ್ಲಿಮರು ನಮಗೆ ಮತ ಚಲಾಯಿಸಬೇಡಿ: ಅಸ್ಸಾಂ ಬಿಜೆಪಿ ಸಚಿವ

 • 1.15 ಲಕ್ಷ ಕೋಟಿ ರೂ. ರೈಲ್ವೆ ಇಲಾಖೆ ಮತ್ತು ವಿಮಾನಗಳ ಖಾಸಗೀಕರಣಕ್ಕೆ ವಿನಿಯೋಗ 2 ಮತ್ತು ಮೂರನೇ ಹಂತದ ನಗರಗಳಲ್ಲಿ ವಿಮಾನಗಳ ಖಾಸಗೀಕರಣ

 • ಮಾರ್ಚ್‌ 2022ರ ಹೊತ್ತಿಗೆ 8500 ಕಿ.ಮೀ. ಹೆದ್ದಾರಿ ನಿರ್ಮಾಣ, ತಮಿಳುನಾಡಿನಲ್ಲಿ 3500 ಕಿ.ಮೀ. ಕಾರಿಡಾರ್‌, ಕೇರಳದಲ್ಲಿ 65,000 ಕೋಟಿ ರೂ.ಗಳ 1100 ಕಿ.ಮೀ. ಉದ್ದದ ಹೆದ್ದಾರಿ, ಪಶ್ಚಿಮ ಬಂಗಾಳದಲ್ಲಿ 95,000 ಕೋಟಿ ರೂ. ವೆಚ್ಚದ 675 ಕಿ.ಮೀ. ಹೆದ್ದಾರಿ ಮತ್ತು ಮುಂದಿನ 3 ವರ್ಷಗಳಲ್ಲಿ ಅಸ್ಸಾಮ್‌ನಲ್ಲಿ 1300. ಕಿ.ಮೀ.

 • 61,000 ಕೋಟಿ ರೂ.ಗಳ ಹೊಸ ಆರೋಗ್ಯ ಮೂಲ ಸೌಕರ್ಯಗಳ ಯೋಜನೆ

 • 17,000 ಗ್ರಾಮೀಣ ಮತ್ತು 11000 ನಗರ ಆರೋಗ್ಯ ಕೇಂದ್ರಗಳ ಆರಂಭ.

 • ಮುಂದಿನ ಆರು ವರ್ಷಗಳಿಗೆ ಆರೋಗ್ಯ ಸೇವೆಗೆ 64,180 ಕೋಟಿ ರೂ.ಗಳು ಈ ಮೊತ್ತ ಮೂರು ಹಂತಗಳಲ್ಲಿ ವಿನಿಯೋಗಿಸಲಾಗುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಆಡಿಯಲ್ಲಿ ಕಾರ್ಯಚಟುವಟಿಕೆಗಳು

 • ಬಜೆಟ್‌ ಮೊದಲ ಭಾರತ ಆತ್ಮನಿರ್ಭ ರ ಭಾರತಕ್ಕೆ ಒತ್ತು,

 • ಇಲ್ಲಿಯವರೆಗೆ ಕೋವಿಡ್‌ ಪರಿಹಾರಕ್ಕೆ 27.1 ಲಕ್ಷ ಕೋಟಿ (GDP ಯ 13%) ಘೋಷಣೆ

 • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ 2021-22ರ ಕೇಂದ್ರ ಆಯವ್ಯಯ ಮಂಡನೆ


ಇದನ್ನೂ ಓದಿ: ರೈತ ಹೋರಾಟ: ಸಿಂಘು ಗಡಿಯಲ್ಲೀಗ ರೈತಾಪಿ ಮಹಿಳೆಯರ ದಂಡು

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಯಚೂರು: ಡಾ. ಅಂಬೇಡ್ಕರ್‌ರವರಿಗೆ ಅಗೌರವ ತೋರಿದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

0
ರಾಯಚೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಗಣರಾಜ್ಯೋತ್ಸವ ವೇಳೆ ಇರಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋ ತೆರವುಗೊಳಿಸಿ, ಧ್ವಜಾರೋಹಣ ನಡೆಸಿರುವ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ನಾಡಿನ ಚಿಂತಕರು, ಸಾಹಿತಿಗಳು, ವಕೀಲರು ತಮ್ಮ...
Wordpress Social Share Plugin powered by Ultimatelysocial