ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ

ಇಂಡಿಗೋದ ದೇಶೀಯ ಕಾರ್ಯಾಚರಣೆಗಳು ಸತತ ಐದನೇ ದಿನವೂ ಅಸ್ತವ್ಯಸ್ತಗೊಂಡಿದ್ದರಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ (ಡಿಸೆಂಬರ್ 6) ವಿಮಾನ ಟಿಕೆಟ್ ದರಗಳ ಮೇಲೆ ತಾತ್ಕಾಲಿಕ ಮಿತಿಯನ್ನು ವಿಧಿಸಿದೆ. ನಿಗದಿತ ಮಾನದಂಡಗಳ ಯಾವುದೇ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ತಕ್ಷಣದ ಸರಿಪಡಿಸುವ ಕ್ರಮ ಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಪ್ರಯಾಣಿಕರ ಹಣವನ್ನು ವಿಳಂಬವಿಲ್ಲದೆ ಮರುಪಾವತಿಸಲು ಸರ್ಕಾರ ಇಂಡಿಗೋಗೆ ನಿರ್ದೇಶನ ನೀಡಿದೆ. ರದ್ದಾದ ಎಲ್ಲಾ ವಿಮಾನಗಳ ಮರುಪಾವತಿ ಪ್ರಕ್ರಿಯೆಯನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸಬೇಕೆಂದು ಆದೇಶಿಸಿದೆ. … Continue reading ಇಂಡಿಗೋ ಹಾರಾಟದಲ್ಲಿ ಐದನೇ ದಿನವೂ ವ್ಯತ್ಯಯ: ವಿಮಾನ ದರಕ್ಕೆ ತಾತ್ಕಾಲಿಕ ಮಿತಿ ವಿಧಿಸಿದ ಕೇಂದ್ರ