ಅಮರಿಂದರ್ ಸಿಂಗ್ ರಾಜೀನಾಮೆಯಿಂದ ತೆರವಾದ ಪಂಜಾಬ್ ಸಿಎಂ ಸ್ಥಾನಕ್ಕೆ ಹಲವು ಹೆಸರುಗಳು ಕೇಳಿಬಂದಿದ್ದವು. 62 ವರ್ಷಗಳ ಸುಖ್‌ಜಿಂದರ್ ಸಿಂಗ್ ರಾಂಧ್ವಾ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿತ್ತು. ಆದರೆ ಬಹುತೇಕ ಶಾಸಕರು ಒಪ್ಪಿರಲಿಲ್ಲ. ಈಗ ಚರಣಜಿತ್ ಸಿಂಗ್ ಚನ್ನಿ ಮುಂದಿನ ಪಂಜಾಬ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಅಮರಿಂದರ್ ಸಂಪುಟದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ, ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
It's high command's decision…, I welcome it. Channi is like my younger brother…I am not at all disappointed…: Congress leader Sukhjinder Singh Randhawa, after announcement of Charanjit Singh Channi as new Punjab Chief Minister pic.twitter.com/jHbAHapQEH
— ANI (@ANI) September 19, 2021
“ಇದು ಹೈಕಮಾಂಡ್ ನಿರ್ಧಾರ…, ನಾನು ಅದನ್ನು ಸ್ವಾಗತಿಸುತ್ತೇನೆ. ಚನ್ನಿ ನನ್ನ ಕಿರಿಯ ಸಹೋದರನಂತೆ … ನನಗೆ ಯಾವುದೇ ನಿರಾಶೆ ಇಲ್ಲ… ಎಂದು ಕಾಂಗ್ರೆಸ್ ನಾಯಕ ಸುಖಜಿಂದರ್ ಸಿಂಗ್ ರಾಂಧವಾ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ; ಗಾಂಧಿ ಕೊಂದವರು ನಾವು ಎಂದೇಳಿ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ


