ಲಾಠೀ ಏಟು, ಜಲಫಿರಂಗಿ ಮತ್ತು ಅಶ್ರವಾಯುಗಳನ್ನು ಸಿಡಿಸಿ ರೈತರನ್ನು ಬಗ್ಗುಬಡಿಯಲು ಯತ್ನಿಸಿದ ಸರ್ಕಾರ ಕಳೆದ ಮೂರು ದಿನಗಳಿಂದ ಅವರೊಂದಿಗೆ ಮಾತುಕತೆ ನಡೆಸಲು ಮುಂದಾಗಿತ್ತು. ಆದರೆ ರೈತರು ಕೇಂದ್ರದ ವಾದಗಳನ್ನು ಒಪ್ಪದೆ, 3 ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರೆಸಿದಾಗ ಅವರ ಮೇಲೆ ಸಾಂಕ್ರಾಮಿಕ ಕಾಯ್ದೆ ಉಲ್ಲಂಘನೆಯ ಆರೋಪಗಳನ್ನು ಹೊರಿಸಿದೆ. ದೆಹಲಿ ಪೊಲೀಸರು ಈ ಕುರಿತು ರೈತ ಹೋರಾಟಗಾರರಿಗೆ ನೋಟಿಸ್ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ರೈತರು ದೆಹಲಿ ತಲುಪುವು ಎಲ್ಲಾ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಔಷಧಿ ಪೂರೈಕೆಗೆ ತಡೆಯಾಗಿದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ಹೋರಾಟ ನಿರತರನ್ನು ರೈತರನ್ನು ಎಲ್ಲಿಂದ ಹೊರಗೆ ಕಳಿಸಬೇಕೆಂದು ಇಂದು ಸುಪ್ರೀಂನಲ್ಲಿ ಪಿಐಎಲ್ ಒಂದು ದಾಖಲಾಗಿದೆ.
ಸಾಂಕ್ರಾಮಿಕ ರೋಗ ಕಾಯ್ದೆ ಉಲ್ಲಂಘಿಸಿದ ನೆಪವೊಡ್ಡಿ ಪ್ರತಿಭಟನಾ ನಿರತ ರೈತ ನಾಯಕರಿಗೆ ಪೊಲೀಸ್ ನೋಟಿಸ್ ನೀಡಿದ ಸರ್ಕಾರದ ಕ್ರಮವನ್ನು ಎಐಕೆಎಸ್‌ಸಿಸಿ ಖಂಡಿಸಿದೆ. ಬಿಹಾರದಲ್ಲಿ ಚುನಾವಣೆ ನಡೆದಾಗಿ ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸಭೆಗೆ ಲಕ್ಷಾಂತರ ಜನ ಸೇರಿದ್ದರು. ಪ್ರಧಾನಿ ಕ್ಷೇತ್ರ ವಾರಣಾಸಿಯಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಜನ ಸೇರಿ ದೀಪೋತ್ಸವ ಆಚರಿಸಿದರು, ಆಗ ಎಲ್ಲಿ ಹೋಗಿತ್ತು ನಿಮ್ಮ ಈ ಕಾಯ್ದೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.
ಎಂಎಸ್‌ಪಿ ಕೊಡುತ್ತೇವೆ ಎಂಬ ಸರ್ಕಾರದ ಮಾತನ್ನು ನಾವು ನಂಬುವುದಿಲ್ಲ. ಸ್ವಾಮಿನಾಥನ್ ಆಯೋಗದ ವರದಿಯಂತೆ ರೈತ ಬೆಳೆದ ಬೆಳಗೆ ಖರ್ಚು ಸೇರಿ ಒಂದೂವರೆ ಪಟ್ಟು ಬೆಲೆ ನಿಗದಿ ಮಾಡಬೇಕು. ಇದಕ್ಕಾಗಿ ಕಾನೂನು ತರಬೇಕೆಂದು ಆಗ್ರಹಿಸಿದ್ದಾರೆ. ಅದೇ ಸಮಯದಲ್ಲಿ ನೀತಿ ಆಯೋಗವು ಕಾರ್ಪೊರೇಟ್‌ಗಳ ಪರವಾಗಿ ಬ್ಯಾಟಿಂಗ್ ಮಾಡುತ್ತಾ ಕೃಷಿ ಕಾಯ್ದೆಗಳನ್ನು ಸಮರ್ಥಿಸುವುದನ್ನು ಎಐಕೆಎಸ್‌ಸಿಸಿ ಖಂಡಿಸಿದೆ.
ಇದನ್ನೂ ಓದಿ: ಪಂಜಾಬಿನ ಪುಟ್ಟ ಮಕ್ಕಳಿಗೂ ಗೊತ್ತು ಈ ರೈತ ವಿರೋಧಿ ನೀತಿಗಳ ಪರಿಣಾಮ ಏನೆಂದು..


