ಲಾಕ್ ಡೌನ್ ಕಾರಣಕ್ಕೆ ದೆಹಲಿಯಿಂದ ಉತ್ತರ ಪ್ರದೇಶದ ಬರೇಲಿಗೆ ನಡೆದುಬಂದ ವಲಸೆ ಕಾರ್ಮಿಕರಿಗೆ ಪ್ರಾಣಿಗಳಿಗಿಂತಲೂ ಕಡೆಯಾಗಿ ರಾಸಾಯನಿಕ ಔಷಧಿ ಸಿಂಪಡಿಸಿತ್ತಿರುವ ಯುಪಿ ಪೊಲೀಸರ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.
ಲಾಕ್ ಡೌನ್ ಕಾರಣಕ್ಕೆ ದೆಹಲಿಯಿಂದ ಉತ್ತರ ಪ್ರದೇಶದ ಬರೇಲಿಗೆ ನಡೆದುಬಂದ ವಲಸೆ ಕಾರ್ಮಿಕರಿಗೆ ಪ್ರಾಣಿಗಳಿಗಿಂತಲೂ ಕಡೆಯಾಗಿ ರಾಸಾಯನಿಕ ಔಷಧಿ ಸಿಂಪಡಿಸಿತ್ತಿರುವ ಯುಪಿ ಪೊಲೀಸರ ಕ್ರಮಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.
Posted by Naanu Gauri on Monday, March 30, 2020
ವಲಸಿಗ ಕಾರ್ಮಿಕರನ್ನು ಉತ್ತರ ಪ್ರದೇಶದ ಬರೇಲಿಗೆ ಪ್ರವೇಶಿಸಲು ಅನುಮತಿಸುವ ಮೊದಲು ರಾಸಾಯನಿಕ ಸೋಂಕುನಿವಾರಕವನ್ನು ಸಿಂಪಡಿಸಲಾಗುತ್ತದೆ. ಅವರು ಆಹಾರ ಮತ್ತು ನೀರಿಲ್ಲದೆ ಕೆಲವು ದಿನಗಳ ಕಾಲ ನಡೆಯುವಂತೆ ಶಿಕ್ಷೆ ನೀಡಿದ ನಂತರವೂ ಅವರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ.
ವಿದೇಶದಿಂದ ಹಾರಿಬಂದ ಪ್ರಯಾಣಿಕರಿಗೆ ಏಕೆ ಇದನ್ನು ಮಾಡಲಿಲ್ಲ? ನಾವು ಅವರನ್ನು ಪ್ರಾಣಿಗಳು ಅಥವಾ ಕೀಟಗಳಂತೆ ಪರಿಗಣಿಸಲಿಲ್ಲ. ನಾವು ಅವರನ್ನು ಇಟಲಿ ಮತ್ತು ಚೀನಾದಿಂದ ಹೇಗೆ ಸ್ವಾಗತಿಸಿದೆವು ಎಂಬುದನ್ನು ನೆನಪಿಡಿ. ಈ ದೇಶದಲ್ಲಿ ಎಲ್ಲಾ ನಾಗರಿಕರು ನಿಜವಾಗಿಯೂ ಸಮಾನರೆ ಎಂಬ ಟೀಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.
ಕೊರೊನಾ ದುರಂತದ ವಿರುದ್ಧ ನಾವೆಲ್ಲರೂ ಹೋರಾಡುತ್ತಿದ್ದೇವೆ ಎಂದು ಯುಪಿ ಸರ್ಕಾರ ಹೇಳಿದೆ. ಆದರೆ ದಯವಿಟ್ಟು ಇಂತಹ ಅಮಾನವೀಯ ಕೆಲಸಗಳನ್ನು ಮಾಡಬೇಡಿ.
ಈ ಕಾರ್ಮಿಕರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರ ಮೇಲೆ ರಾಸಾಯನಿಕವನ್ನು ಸಿಂಪಡಿಸಬೇಡಿ. ಇದು ಅವರನ್ನು ಉಳಿಸುವುದಿಲ್ಲ ಬದಲಿಗೆ ಅವರ ಆರೋಗ್ಯಕ್ಕೆ ಹೆಚ್ಚಿನ ಹಾನಿಯುಂಟು ಮಾಡುತ್ತದೆ ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ.
यूपी सरकार से गुजारिश है कि हम सब मिलकर इस आपदा के खिलाफ लड़ रहे हैं लेकिन कृपा करके ऐसे अमानवीय काम मत करिए।
मजदूरों ने पहले से ही बहुत दुख झेल लिए हैं। उनको केमिकल डाल कर इस तरह नहलाइए मत। इससे उनका बचाव नहीं होगा बल्कि उनकी सेहत के लिए और खतरे पैदा हो जाएंगे। pic.twitter.com/ftovaFHR5q
— Priyanka Gandhi Vadra (@priyankagandhi) March 30, 2020
ವಿದೇಶಗಳಿಂದ ಬಂದವರಿಗೆ ಇದೇ ರೀತಿ ಮಾಡಿದ್ರಾ? ಬಡವರಿಗೆ ಹೇಗೆ ಬೇಕಾದರೂ ಅವಮಾನ ಮಾಡಬಹುದಲ್ವಾ? UP ಸರ್ಕಾಕ್ಕೆ ಸ್ವಲ್ಪನಾದರೂ ನಾಚಿಕೆ, ಮಾನ, ಮರ್ಯಾದೆ ಇದೆಯಾ ಸಾಮಾಜಿಕ ಕಾರ್ಯಕರ್ತ ಅನಿಲ್ ಕುಮಾರ್ ಪ್ರಶ್ನಿಸಿದ್ದಾರೆ.
ಯಾರನ್ನ ಸಾಯಿಸ್ತಿದ್ದಾರೆ, ವೈರಸ್ಸನ್ನ ಅಥ್ವ ಮನುಷ್ಯರನ್ನ? ಬಡವರು ಅಂದ್ರೆ ಏನು ಅವರಿಗೆ ಬೆಲೆ ಇಲ್ವ? ಎಂದು ಶರತ್ ಚಂದ್ರ ಎಂಬುವವರು ಕಿಡಿಕಾರಿದ್ದಾರೆ.


