Homeಮುಖಪುಟಛತ್ತೀಸ್‌ಗಡ: ಭಾರತವನ್ನು ತೀವ್ರವಾದಿ ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ವಿಡಿಯೋ ವೈರಲ್: ಪ್ರಕರಣ ದಾಖಲು

ಛತ್ತೀಸ್‌ಗಡ: ಭಾರತವನ್ನು ತೀವ್ರವಾದಿ ಹಿಂದೂ ರಾಷ್ಟ್ರ ಮಾಡುವ ಪ್ರತಿಜ್ಞೆ ವಿಡಿಯೋ ವೈರಲ್: ಪ್ರಕರಣ ದಾಖಲು

- Advertisement -
- Advertisement -

ಭಾರತವನ್ನು ತೀವ್ರವಾದಿ ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವುದಾಗಿ ಪ್ರತಿಜ್ಞೆ ಮಾಡಿ, ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ವಿಡಿಯೋ ವೈರಲ್ ಆದ ನಂತರ ಪ್ರಮೋದ್ ಅಗರ್ವಾಲ್ ಎಂಬಾತನ ವಿರುದ್ಧ ಛತ್ತೀಸ್‌ಗಡ ಪೋಲಿಸರು ಜನವರಿ 22 ರಂದು ಪ್ರಕರಣ ದಾಖಲಿಸಿದ್ದಾರೆ.

ಛತ್ತೀಸ್‌ಗಡದ ಕೊರ್ಬಾದಲ್ಲಿ ಬೆಂಕಿಯ ಸುತ್ತ ಸೇರಿದ ಗುಂಪೊಂದು ಧರ್ಮದ ಆಧಾರದ ಮೇಲೆ ತಾರತಮ್ಯ ಆಚರಿಸುವುದಾಗಿ ಪ್ರತಿಜ್ಞೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ “ಇಂದು, ನಾವೆಲ್ಲಾ ಬಾಕಿನೋಂಗ್ರ ನಗರದ ಕೊಬ್ರ ಜಿಲ್ಲೆ ಛತ್ತಿಸ್‌ಗಡ ರಾಜ್ಯದ ನಿವಾಸಿಗಳು ಹಿಂದೂಗಳಾಗಿದು, ಈ ಬೆಂಕಿಯನ್ನು ಸಾಕ್ಷಿಯಾಗಿಸಿ ಭಾರತವನ್ನು ತೀವ್ರವಾದಿ ಹಿಂದೂ ರಾಷ್ಟ್ರವನ್ನಾಗಿಸುತ್ತೆವೆ ಎಂದು ಪ್ರಮಾಣ ಮಾಡುತ್ತೇವೆ. ನಾವು ನಮ್ಮ ಸಂಸ್ಥೆಗಳಲ್ಲಿ, ಮನೆಯಲ್ಲಿ ಮತ್ತು ವ್ಯವಹಾರಗಳಲ್ಲಿ ಹಿಂದೂ ಸಹೋದರರನ್ನು ಮಾತ್ರ ಸೇರಿಸಿಕೊಳ್ಳುತ್ತೆವೆ ಮತ್ತು ಇದರಿಮದ ಹಿಂದುತ್ವವನ್ನು ಬಲಿಷ್ಠಗೊಳಿಸುತ್ತೆವೆ” ಎಂದು ಹಿಂದಿಯಲ್ಲಿ ಪ್ರತಿಜ್ಞೆ ಮಾಡುವುದನ್ನು ನೋಡಬಹುದಾಗಿದೆ.

ವಿಡಿಯೋ ವಿರುದ್ಧ ಕೊಟ್ವಾಲಿ ಪೋಲಿಸ್ ಠಾಣೆಯಲ್ಲಿ ಲಿಖಿತ ದೂರನ್ನು ದಾಖಲಿಸಲಾಗಿದ್ದು, ಆರೋಪಿಗಳು ಧಾರ್ಮಿಕ ಮತಾಂಧತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

“ಪ್ರಮೋದ ಅಗರವಾಲ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 153(ಎ) (ಧರ್ಮ, ಜನಾಂಗ, ವಾಸಸ್ಥಳ, ಭಾಷೆ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಕೃತ್ಯಗಳನ್ನು ಮಾಡುವುದು) ಅಡಿಯಲ್ಲಿ ಎಫ್‌ಐಆರ್ ಅನ್ನು ಕೋಟ್ವಾಲಿ ಪೋಲಿಸ್ ಠಾಣೆಯಲ್ಲಿ ದಾಖಲಿಸಿದು, ತನಿಖೆ ಮುಂದುವರೆದಿದೆ.” ಎಂದು ಕೊಬ್ರಾದ ಪೋಲಿಸ್ ಸೂಪರಿಡೆಂಟ್ ಬೊಜರಾಮ್ ಪಟೇಲ್ ತಿಳಿಸಿದ್ದಾರೆ ಎಂದು ಕ್ವಿಂಟ್ ವರದಿ ಮಾಡಿದೆ.

ಈ ವರ್ಷ ಜನವರಿಯಲ್ಲಿ ಛತ್ತೀಸ್‌ಗಡ ಸುರ್ಗುಜಾ ಜಿಲ್ಲೆಯ ಹಳ್ಳಿಯೊಂದರಲ್ಲಿ ‘ಮುಸ್ಲಿಂ ವ್ಯಾಪರಿಗಳ’ ಬಹಿಷ್ಕಾರಕ್ಕೆ ಕರೆ ನೀಡಿದ್ದ ವಿಡಿಯೊವೊಂದು ವೈರಲ್ ಆಗಿತ್ತು. ವಿಡಿಯೋದಲ್ಲಿ ಮುಸ್ಲಿಮರೊಂದಿಗೆ ಯಾವುದೇ ವ್ಯವಹಾರ, ವಹಿವಾಟಿನಿಂದ ದೂರವಿರಲು ಜನರು ಪ್ರತಿಜ್ಞೆ ಮಾಡುತ್ತಿರುವುದು ಕೇಳಿಬಂದಿತ್ತು. ಈಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ.


ಇದನ್ನೂ ಓದಿ: ನೇತಾಜಿ ಜನ್ಮದಿನ: ಹೀಗಿದ್ದರು ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...