ಬಿಜೆಪಿ ಆಡಳಿತದ ಛತ್ತೀಸ್‌ಗಢದ ಜೈಲು ಇಲಾಖೆಯು ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ (ಹಿಂದಿ ಭಾಷೆ) ಮತ್ತು ಆರ್ಗನೈಸರ್ (ಇಂಗ್ಲಿಷ್ ಭಾಷೆ) ಪತ್ರಿಕೆಗಳನ್ನು ಕೈದಿಗಳಿಗಾಗಿ ಗ್ರಂಥಾಲಯಗಳಿಗೆ ಸೇರಿಸಲು ನಿರ್ಧರಿಸಿದೆ. ರಾಜ್ಯದ ಜೈಲು ಗ್ರಂಥಾಲಯಗಳು ವೈವಿಧ್ಯಮಯ ವಿಷಯಗಳ ಕುರಿತು ಪುಸ್ತಕಗಳು ಮತ್ತು ಪ್ರಕಟಣೆಗಳ ಸಂಗ್ರಹಗಳನ್ನು ಹೊಂದಿವೆ ಎಂದು ಹೇಳಲಾಗಿದೆ. ಛತ್ತೀಸ್‌ಗಢ – ಕೈದಿಗಳ
ರಾಜ್ಯ ಮಹಾನಿರ್ದೇಶಕ (ಜೈಲು) ಹಿಮಾಂಶು ಗುಪ್ತಾ ಅವರು ಇತ್ತೀಚೆಗೆ ನಡೆಸಿದ ತಪಾಸಣೆಯ ಸಮಯದಲ್ಲಿ ಜೈಲುಗಳಲ್ಲಿರುವ ಗ್ರಂಥಾಲಯಗಳಲ್ಲಿ ಪಾಂಚಜನ್ಯ ಮತ್ತು ಆರ್ಗನೈಸರ್ ಇಲ್ಲ ಎಂದು ಕಂಡುಕೊಂಡಿದ್ದರು. ಹಾಗಾಗಿ ಎಲ್ಲಾ 33 ರಾಜ್ಯ ಕಾರಾಗೃಹಗಳಲ್ಲಿ ಈ ನಿಯತಕಾಲಿಕೆಗಳು ಲಭ್ಯವಾಗುವಂತೆ ಮಾಡಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಛತ್ತೀಸ್‌ಗಢದಲ್ಲಿ ಐದು ಕೇಂದ್ರ, 20 ಜಿಲ್ಲಾ ಜೈಲುಗಳು ಮತ್ತು ಎಂಟು ಉಪ ಜೈಲುಗಳಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಖೈದಿಗಳನ್ನು ಸುಧಾರಿಸುವ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ, ಅವರ ಕಲಿಕೆಯನ್ನು ಸುಧಾರಿಸುವ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುವಲ್ಲಿ ಆರೆಸ್ಸೆಸ್ ಮುಖವಾಣಿ ಸಹಾಯ ಮಾಡಲಿದೆ ಎಂದು ಡಿಜಿ ಹೇಳಿದ್ದಾರೆ. ಬಿಡುಗಡೆಯಾದ ನಂತರ ಮುಖ್ಯವಾಹಿನಿಯ ಸಮಾಜದಲ್ಲಿ ತಮ್ಮನ್ನು ತಾವು ಪುನರ್ವಸತಿ ಮಾಡಿಕೊಳ್ಳಲು ಇದು ಕೈದಿಗಳನ್ನು ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಕ್ರಮವು ಕೈದಿಗಳಲ್ಲಿ ‘ಸನಾತನ ಭಾರತೀಯ ಸಂಸ್ಕೃತಿ ಮತ್ತು ದೇಶಭಕ್ತಿ’ಯ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದು ಜೈಲು ಆಡಳಿತ ಹೇಳಿಕೊಂಡಿವೆ. ಛತ್ತೀಸ್‌ಗಢ – ಕೈದಿಗಳ
ಜೈಲಿನ ಗ್ರಂಥಾಲಯವು ಸಾಮಾನ್ಯವಾಗಿ ಪ್ರತಿ ತಿಂಗಳು ಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಪುಸ್ತಕಗಳನ್ನು ಖರೀದಿಸುತ್ತದೆ. ಜೈಲಿನ ಗ್ರಂಥಾಲಯದಲ್ಲಿ ಸರಾಸರಿ ಪ್ರತಿ 50 ಕೈದಿಗಳಿಗೆ ಒಂದು ಪತ್ರಿಕೆ ಮತ್ತು ಒಂದು ನಿಯತಕಾಲಿಕೆ ಲಭ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದಾಗ್ಯೂ, ಈ ನಿರ್ಧಾರವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ದೇಶದ ಜನರು ಆರೆಸ್ಸೆಸ್ ಸಂಬಂಧಿತ ಪ್ರಕಟಣೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್‌ನಿಂದ ಪ್ರಚಾರ ಮಾಡಲ್ಪಟ್ಟ ವಿಭಜಕ ಆಲೋಚನೆಗಳು ಮತ್ತು ದ್ವೇಷಪೂರಿತ ಕಾರ್ಯಸೂಚಿಯನ್ನು ಓದಲು ಬಯಸುವುದಿಲ್ಲ ಎಂದು ಹೇಳಿದೆ.
“ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಸಂಘಟನೆಯಾಗದ್ದು, ಛತ್ತೀಸ್‌ಗಢದಲ್ಲಿ ಆಡಳಿತಾರೂಢ ಬಿಜೆಪಿ ಪ್ರತಿ ಜೈಲಿನಲ್ಲಿ ಎರಡು ವಾರಪತ್ರಿಕೆಗಳನ್ನು ಜೋಡಿಸುವ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತದೆ” ಎಂದು ಕಾಂಗ್ರೆಸ್‌ನ ಸುಶೀಲ್ ಆನಂದ್ ಶುಕ್ಲಾ ಹೇಳಿದ್ದಾರೆ.
1948 ರಲ್ಲಿ ಪ್ರಾರಂಭವಾದ ಪಾಂಚಜನ್ಯ ಮತ್ತು 1947 ರಲ್ಲಿ ಸ್ಥಾಪಿಸಲಾದ ಆರ್ಗನೈಸರ್ ಅನ್ನು ರಮಣ್ ಸಿಂಗ್ ಅವರ ಹಿಂದಿನ 15 ವರ್ಷಗಳ ಬಿಜೆಪಿ ಆಡಳಿತದಲ್ಲಿ ಛತ್ತೀಸ್‌ಗಢ ಜೈಲು ಗ್ರಂಥಾಲಯಗಳಿಗೆ ಪರಿಗಣಿಸಲಾಗಿರಲಿಲ್ಲ.


