ರಾಜ್ಯದಲ್ಲಿ ಶಾಲೆ ತೊರೆಯುತ್ತಿರುವ ಮಕ್ಕಳ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯು ಹೇಳಿದೆ. ಕರ್ನಾಟಕದಲ್ಲಿ ಶಾಲೆ ತೊರೆಯುತ್ತಿರುವ ಮಕ್ಕಳ ಪ್ರಮಾಣ 22.2% ದಷ್ಟಿದ್ದರೆ, ರಾಷ್ಟ್ರೀಯ ಸರಾಸರಿಯು 14.1% ಇದೆ ಎಂದು ಅದು ಉಲ್ಲೇಖಿಸಿದೆ.
2023–24 ರ ಅಂಕಿಅಂಶಗಳ ಪ್ರಕಾರ, ಮಧ್ಯಪ್ರದೇಶ, ಜಾರ್ಖಂಡ್, ತ್ರಿಪುರ, ಪಂಜಾಬ್, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ಜೊತೆಗೆ ಕರ್ನಾಟಕವು 9 ಮತ್ತು 10 ನೇ ತರಗತಿಗಳಲ್ಲಿ ಅತಿ ಹೆಚ್ಚು ಶಾಲೆ ತೊರೆಯುತ್ತಿರುವ ಮಕ್ಕಳ ಪ್ರಮಾಣವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.
ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸ್ಥಾನವು ತೀರಾ ಕಳಪೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ. ಕೇರಳದಲ್ಲಿ ಶಾಲೆ ತೊರೆಯುತ್ತಿರುವ ಮಕ್ಕಳ ಪ್ರಮಾಣ ಕೇವಲ 3.41% ಇದ್ದರೆ, ತಮಿಳುನಾಡಿನಲ್ಲಿ 7.68% ಇದೆ. ತೆಲಂಗಾಣದಲ್ಲಿ 11.43% ಇದ್ದರೆ, ಆಂಧ್ರಪ್ರದೇಶದಲ್ಲಿ 12.48%, ಬಿಹಾರದಲ್ಲಿ 25.63% ಮತ್ತು ಅಸ್ಸಾಂನಲ್ಲಿ 25.07% ಇದೆ ಎಂದು ವರದಿ ಹೇಳಿದೆ.
ಮಕ್ಕಳು ಶಾಲೆ ತೊರೆಯುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಮತ್ತು ಅವರ ಮರು ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಶಾಲೆಗಳ ಪಕ್ಕದ ಪ್ರದೇಶಗಳಲ್ಲಿ ಮನೆ-ಮನೆಗೆ ಸಮೀಕ್ಷೆಗಳನ್ನು ನಡೆಸುವಂತೆ ಹೆಚ್ಚಿನ ಹೊರೆ ಹೊಂದಿರುವ ರಾಜ್ಯಗಳನ್ನು ಸಚಿವಾಲಯ ಒತ್ತಾಯಿಸಿದೆ.
2025–26ರ ಸಮಗ್ರ ಶಿಕ್ಷಾ ಕಾರ್ಯಕ್ರಮದ ಭಾಗವಾಗಿ ಸಚಿವಾಲಯದ ಅಡಿಯಲ್ಲಿ ನಡೆದ ಯೋಜನಾ ಅನುಮೋದನೆ ಮಂಡಳಿ (PAB) ಸಭೆಗಳಿಂದ ಈ ಸಂಶೋಧನೆಗಳು ಹೊರಬಿದ್ದಿವೆ. ಈ ವರ್ಷ ಏಪ್ರಿಲ್ ಮತ್ತು ಮೇ ನಡುವೆ ವಿವಿಧ ರಾಜ್ಯಗಳೊಂದಿಗೆ ಈ ಸಭೆಗಳು ನಡೆದವು.
2030 ರ ವೇಳೆಗೆ 100 ಪ್ರತಿಶತ ಒಟ್ಟು ದಾಖಲಾತಿ ಅನುಪಾತ (GER) ಸಾಧಿಸುವ ಗುರಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP)- 2020 ಹೊಂದಿದೆ. ಆದರೆ, ಇದಕ್ಕೆ ಶಾಲೆ ತೊರೆಯುವ ದರಗಳು ದೊಡ್ಡ ಅಡಚಣೆಯಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪುನರುಚ್ಚರಿಸಿದರು ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ. ರಾಷ್ಟ್ರೀಯ ಸರಾಸರಿಗಿಂತ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಭೂ ಒತ್ತುವರಿ ಪ್ರಕರಣ | ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ ಎಸ್‌ಐಟಿ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ
ಭೂ ಒತ್ತುವರಿ ಪ್ರಕರಣ | ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧದ ಎಸ್‌ಐಟಿ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ

