ನೂತನ ಕೇಂದ್ರಾಡಳಿತ ಪ್ರದೇಶ ಲಡಕ್ ನ ಪೂರ್ವಭಾಗದ ನಾಲ್ಕು ಹೊಸ ಪ್ರದೇಶಗಳ ಮೇಲೆ ಚೀನಾ ಪಡೆಗಳು ಕೇಂದ್ರೀಕರಿಸಿವೆ ಎಂದು ವರದಿಗಳು ತಿಳಿಸಿವೆ.
ಉಭಯ ದೇಶಗಳ ಗಡಿಯನಲ್ಲಿನ ಪಾಂಗಾಂಗ್ ತ್ಸ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಪಡೆಗಳು ನಿಯೋಜನೆಗೊಂಡಿವೆ. ಭಾರತ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದರಿಂದ ಸೇನೆ ಪಡೆಗಳ ನಿಯೋಜನೆ ಹೆಚ್ಚಿಸಲಾಗಿದೆ.
ಇದೇ ವೇಳೆ ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಪೂರ್ವ ವಲಯದಲ್ಲಿ ಶೇಕಡ 80 ರಷ್ಟು ಚೀನಿಯರು ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದಾರೆ. 2015-2019ರ ಅವಧಿಯಲ್ಲಿ ಗಡಿನಿಯಂತ್ರಣ ರೇಖೆ ಉಲ್ಲಂಘಿಸಿರುವ ಪ್ರಕರಣಗಳು ಹೆಚ್ಚಾಗಿವೆ ಎಂದು ವರದಿಗಳು ಹೇಳಿವೆ.
ಲಡಕ್ ನ ಪೂರ್ವ ವಲಯದಲ್ಲಿ ಅತಿಹೆಚ್ಚು ಅಂದರೆ 14.5 ರಷ್ಟು ಅತಿಕ್ರಮಣಗಳು ನಡೆದಿವೆ. ಡಿಚು ಮತ್ತು ಮದನ್ ಲಿಡ್ಜ್ ಪ್ರದೇಶದಲ್ಲಿ ಅತಿಕ್ರಮಣ ಕಡಿಮೆ ಪ್ರಮಾಣದಲ್ಲಿದೆ.
ಕೇಂದ್ರಾಡಳಿತ ಪ್ರದೇಶವಾದ ಲಡಕ್ ನಿಂದ ಅರುಣಾಚಲ ಪ್ರದೇಶದವರೆಗೆ ಭಾರತ ಮತ್ತು ಚೀನಾ 3,488 ಕಿಲೋ ಮೀಟರ್ ಗಡಿಯನ್ನು ಹಂಚಿಕೊಂಡಿವೆ.
ಓದಿ: ಚೀನಾ ಇಟಲಿಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ: ನೇಪಾಳ ಪ್ರಧಾನಿ


