ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ವಿರುದ್ಧ ಎಫ್‌ಐಆರ್ ಸಲ್ಲಿಸಿರುವ ಆಂಧ್ರಪ್ರದೇಶದ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ಸಂಜೆ ಹೈದರಾಬಾದ್‌ನ ನಿವಾಸದಲ್ಲಿ ನಾಯ್ಡು ಅವರಿಗೆ ನೋಟಿಸ್ ನೀಡಿದೆ.
ನಾಯ್ಡು ಅವರನ್ನು ‘ಆರೋಪಿ ನಂಬರ್ 1’ ಎಂದು ಉಲ್ಲೇಖಿಸಿರುವ ನೋಟಿಸ್, ವಿಜಯವಾಡದ ಸತ್ಯನಾರಾಯಣಪುರಂನ ಸಿಐಡಿ ಪ್ರಾದೇಶಿಕ ಕಚೇರಿಯಲ್ಲಿ ಮಾರ್ಚ್ 23 ರಂದು ತನಿಖಾ ಅಧಿಕಾರಿ ಮುಂದೆ ಖುದ್ದಾಗಿ ಹಾಜರಾಗುವಂತೆ ಸಿಐಡಿ ಕೇಳಿದೆ.
“ಹಾಜರಾಗಲು ಅಥವಾ ನೋಟಿಸ್‌ಗಳ ನಿಯಮಗಳನ್ನು ಅನುಸರಿಸಲು ವಿಫಲವಾದರೆ, ಸಿಆರ್‌ಪಿಸಿಯ ಸೆಕ್ಷನ್ 41 (3) ಮತ್ತು (4) ರ ಅಡಿಯಲ್ಲಿ ಬಂಧಿಸಬೇಕಾಗುತ್ತದೆ” ಎಂದು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಅಮರಾವತಿ ಹಗರಣವು ಆಂಧ್ರಪ್ರದೇಶದ ವಿಭಜಿತ ರಾಜ್ಯದ ಉದ್ದೇಶಿತ ರಾಜಧಾನಿಗಾಗಿ ಸಾವಿರಾರು ಎಕರೆ ಭೂಮಿಯನ್ನು ಒಟ್ಟುಗೂಡಿಸಲಾಗಿದೆ ಎಂದು ಆರೋಪಿಸಲಾಗಿರುವ ಹಗರಣವಾಗಿದೆ.
ಇದನ್ನೂ ಓದಿ: ನೇಮಕಾತಿ ಹಗರಣ: 5 ಲೆಫ್ಟಿನೆಂಟ್ ಕರ್ನಲ್‌ಗಳ ಸಹಿತ 17 ಸೇನಾಧಿಕಾರಿಗಳ ವಿರುದ್ದ ಪ್ರಕರಣ ದಾಖಲು
ಸಿಐಡಿಯ ಉಪ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ಅಧಿಕಾರಿ ಲಕ್ಷ್ಮಿ ನಾರಾಯಣ ರಾವ್ ನೀಡಿದ ನೋಟಿಸ್‌ನಲ್ಲಿ, “ಪ್ರಕರಣದಲ್ಲಿ ನಂಬರ್ 1 ಆರೋಪಿ ಆರೋಪಿಯಾಗಿರುವ ನಿಮ್ಮನ್ನು ಪರಿಣಾಮಕಾರಿ ಮತ್ತು ಉತ್ತಮ ತನಿಖೆಗಾಗಿ, ವಿಚಾರಣೆಗೆ ಒಳಪಡಿಸುವುದು ಸೂಕ್ತವಾಗಿದೆ ಮತ್ತು ಅಗತ್ಯವೆಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಟಿಡಿಪಿ ಆಡಳಿತದ ಅವಧಿಯಲ್ಲಿ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ (ಎಂಎ ಮತ್ತು ಯುಡಿ) ಸಚಿವರಾಗಿದ್ದ ಟಿಡಿಪಿ ಮುಖಂಡ ಪೊಂಗುರು ನಾರಾಯಣ ರಾವ್ ಅವರಿಗೂ ಸಿಆರ್‌ಪಿಸಿಯ ಸೆಕ್ಷನ್ 41 (ಎ) ಅಡಿಯಲ್ಲಿ ಇದೇ ರೀತಿಯ ಸೂಚನೆ ನೀಡಲಾಗಿದೆ.
ನಾಯ್ಡು ಅವರಿಗೆ ನೀಡಿರುವ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಪಕ್ಷದ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಕೆ ಅಚ್ಚಣ್ಣೈದು, “ಅಮರಾವತಿಗೆ ಎಸ್‌ಸಿ ಮತ್ತು ಎಸ್‌ಟಿಗಳ ಒಪ್ಪಿಗೆಯೊಂದಿಗೆ ನಿಯೋಜಿತ ಭೂಮಿಯನ್ನು ತೆಗೆದುಕೊಳ್ಳಲಾಗಿದೆ. ಮಂಗಳಗಿರಿ ಶಾಸಕ ರಾಮಕೃಷ್ಣ ರೆಡ್ಡಿ ಅವರು ಆ ಸಮುದಾಯಕ್ಕೆ ಸೇರದಿದ್ದಾಗ ಎಸ್‌ಸಿ / ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಆಧಾರದ ಮೇಲೆ ಹೇಗೆ ದೂರು ಸಲ್ಲಿಸಬಹುದು? ಇದು ಕಾಯಿದೆಯ ದುರುಪಯೋಗವಲ್ಲದೆ ಮತ್ತೇನಲ್ಲ. ಟಿಡಿಪಿ ಮುಖ್ಯಸ್ಥರ ವಿರುದ್ದ ಸರ್ಕಾರವು ಧ್ವೇಷ ರಾಜಕೀಯ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಮದುವೆಗಳಲ್ಲಿಯೂ ರೈತ ಹೋರಾಟಕ್ಕೆ ಬೆಂಬಲ!: ಹರಿಯಾಣ-ಪಂಜಾಬ್‌ನಲ್ಲಿ ವಿಭಿನ್ನ ಪ್ರತಿರೋಧ


