ಗುವಾಹಟಿಯ ಪಂಚತಾರಾ ಹೋಟೆಲ್‌ನಲ್ಲಿ ಬಂಡಾಯ ಶಿವಸೇನೆ ಶಾಸಕರಿಗೆ ಆತಿಥ್ಯ ನೀಡುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ಬಂಡಾಯಕ್ಕೆ ನೆರವು ನೀಡಿದ ಆರೋಪವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ತಳ್ಳಿಹಾಕಿದ್ದು, ರಾಜ್ಯಕ್ಕೆ ಭೇಟಿ ನೀಡುವ ಯಾರನ್ನೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧವೇ ಸರ್ಕಾರದ ಭಾಗವಾಗಿರುವ ಶಿವಸೇನೆ ಶಾಸಕರು ಬಂಡಾಯ ಎದ್ದು ಗುಜರಾತ್‌ನ ಸೂರತ್‌ಗೆ ತೆರಳಿದ್ದರು. ಆದರೆ ಶಿವಸೇನೆಯ ಮಧ್ಯವರ್ತಿಗಳು ಗುಜರಾತಿಗೆ ಆಗಮಿಸುತ್ತಿದ್ದಂತೆ, ಅಲ್ಲಿಂದ ಅಸ್ಸಾಂನ ಗುವಾಹಟಿಗೆ ಬಂಡಾಯ ಶಾಸಕರನ್ನು ಸ್ಥಳಾಂತರಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬಂಡಾಯ ಶಾಸಕರು ಗುವಾಹಟಿಗೆ ಬಂದು ಇಳಿಯುವ ಮೊದಲೇ, ಮುಖ್ಯಮಂತ್ರಿ ಹಿಮಂತ ಅವರು ಪ್ರಸ್ತುತ ಶಾಸಕರು ಉಳಿದಿರುವ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ, ಬಂಡಾಯ ಶಿವಸೇನೆ ಶಾಸಕರಿಗೆ ಆತಿಥ್ಯ ನೀಡುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ಬಂಡಾಯಕ್ಕೆ ನೆರವು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಉದ್ಧವ್ ಸರ್ಕಾರದ ಬಿಕ್ಕಟ್ಟಿನಲ್ಲಿ ನಮ್ಮ ಪಾತ್ರವಿಲ್ಲ ಎಂದ ಮಹಾರಾಷ್ಟ್ರ ಬಿಜೆಪಿ
“ದೇಶದಾದ್ಯಂತ ಇರುವ ಶಾಸಕರನ್ನು ಅಸ್ಸಾಂಗೆ ಭೇಟಿ ನೀಡುವಂತೆ ನಾನು ಆಹ್ವಾನಿಸುತ್ತೇನೆ. ಜನರು ಹೋಟೆಲ್‌ಗೆ ಬರುವುದನ್ನು ತಡೆಯುವುದು ಹೇಗೆ? ದೇಶದಲ್ಲಿ ಫೆಡರಲ್ ರಚನೆ ಇರುವುದರಿಂದ ಅಸ್ಸಾಂನಲ್ಲಿ ಹೋಟೆಲ್‌ಗೆ ಬರಬೇಡಿ ಎಂದು ನಾನು ಹೇಳಲು ಸಾಧ್ಯವಿದೆಯೆ? ಯಾರಾದರೂ ಬಂದಾಗ ನನಗೆ ಸಂತೋಷವಾಗುತ್ತದೆ. ಅಸ್ಸಾಂಗೆ, ಅವರು ಎಲ್ಲಿಯವರೆಗೆ ಬೇಕಾದರೂ ಇರಬಹುದು” ಎಂದು ಹಿಮಂತ ಶರ್ಮಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
#WATCH "…He (Maharashtra CM Uddhav Thackeray) should also come to Assam for vacation," says Assam CM & BJP leader Himanata Biswa Sarma, in Delhi pic.twitter.com/vqtS5F6Jcr
— ANI (@ANI) June 24, 2022
ಉದ್ಧವ್ ಠಾಕ್ರೆ ಅವರಿಗೆ ನೀವು ಏನು ಹೇಳಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ರಜೆಗೆ ಸಮಯದಲ್ಲಿ ನೀವೂ ಅಸ್ಸಾಂಗೆ ಬರಬೇಕು” ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: ‘ಶಿಂಧೆ ನಮ್ಮ ನಾಯಕ’ ಎಂದು ಉಪ ಸಭಾಪತಿಗೆ ಪತ್ರ ಕಳುಹಿಸಿದ ಬಂಡಾಯ ಶಾಸಕರು
ಸಚಿವ ಏಕನಾಥ್ ಶಿಂಧೆ ನೇತೃತ್ವದ ಸುಮಾರು 40 ಶಿವಸೇನೆ ಶಾಸಕರು ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ನೆಲೆಸಿದ್ದಾರೆ ಎಂದು ನಂಬಲಾಗಿದೆ. ಬಂಡಾಯ ಶಾಸಕರು, ಶಿವಸೇನೆಯು ಮಹಾ ವಿಕಾಸ್ ಅಘಾಡಿ ಸರ್ಕಾರದ ಮೈತ್ರಿಯನ್ನು ತೊರೆದು, ಅದರ ಬದಲಿಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡುವಂತೆ ಕೇಳಿಕೊಂಡಿದ್ದಾರೆ.
ಪ್ರಸ್ತುತ ಎಣಿಕೆಗಳ ಪ್ರಕಾರ, ಶಿಂಧೆ ಅವರ ವಿರುದ್ಧ ಪಕ್ಷಾಂತರ ವಿರೋಧಿ ಕಾನೂನು ಜಾರಿ ಮಾಡಲು ಸಾಧ್ಯವಿಲ್ಲ. ಶಿವಸೇನೆಯ ಐವತ್ತು ಶಾಸಕರಲ್ಲಿ ಅವರಿಗೆ ಅಗತ್ಯವಾದ 37 ಶಾಸಕರ ಬೆಂಬಲ ಇದೆ ಎಂದು ನಂಬಲಾಗಿದೆ.



ಮೊದಲು ಪ್ರವಾಹದಲ್ಲಿ ಸಿಲುಕಿರೋರಿಗೆ ಏನಾದ್ರು ವ್ಯವಸ್ಥೆ ಮಾಡಪ್ಪ ಪುಣ್ಯಾತ್ಮ ಆಮೇಲೆ ವ್ಯಂಗ್ಯ ಮಾಡುವಂತೆ