ಕೊರೊನಾ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್ ಔಷಧಿಯನ್ನು ಮಹಾರಾಷ್ಟ್ರಕ್ಕೆ ನೀಡದಂತೆ ಕೇಂದ್ರ ಸರ್ಕಾರವು ಹಲವು ಕಂಪೆನಿಗಳಿಗೆ ತಾಕೀತು ಮಾಡಿದೆ ಎಂದು ಮಹಾರಷ್ಟ್ರ ಸಚಿವ ನವಾಬ್ ಮಲಿಕ್ ಶನಿವಾರ ಗಂಭೀರ ಆರೋಪ ಮಾಡಿದ್ದಾರೆ. ಒಂದು ವೇಳೆ ರೆಮ್‌ಡಿಸಿವಿರ್ ನೀಡಿದರೆ ಕಂಪೆನಿಯ ಲೈಸನ್ಸ್ ರದ್ದುಗೊಳಿಸುವುದಾಗಿ ಅವೆರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಪ್ರಾರಂಭವಾದಾಗಿನಿಂದ ಮಹಾರಾಷ್ಟ್ರದಲ್ಲೇ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗುತ್ತಿದೆ. ಅಲ್ಲದೆ ಸೋಂಕಿನ ಎರಡನೇ ಅಲೆ ಪ್ರಾರಂಭವಾದಗಿನಿಂದ ದೇಶದಲ್ಲಿ ವರದಿಯಾಗುತ್ತಿರುವ ಅರ್ಧದಷ್ಟು ಪ್ರಕರಣಗಳು ಮಹಾರಾಷ್ಟ್ರ ಒಂದರಲ್ಲೇ ವರದಿಯಾಗುತ್ತದೆ.
ಇದನ್ನೂ ಓದಿ: ಕೊರೊನಾ ನೆಗೆಟಿವ್ ವರದಿಯಿಲ್ಲದೆ ಬಂಗಾಳಕ್ಕೆ ಹೊರಗಿನವರು ಬರದಂತೆ ತಡೆಯಿರಿ- ಮಮತಾ ಬ್ಯಾನರ್ಜಿ
ಶನಿವಾರ ಟ್ವೀಟ್ ಮಾಡಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, “ಮಹಾರಾಷ್ಟ್ರ ಸರ್ಕಾರವು 16 ರಫ್ತು ಕಂಪನಿಗಳನ್ನು ರೆಮ್‌ಡಿಸಿವಿರ್‌ಗಾಗಿ ಕೇಳಿತ್ತು. ಆದರೆ ರಾಜ್ಯಕ್ಕೆ ಔಷಧಿಯನ್ನು ಸರಬರಾಜು ಮಾಡದಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ನಮಗೆ ಅವರು ತಿಳಿಸಿದ್ದಾರೆ. ಒಂದು ವೇಳೆ ಔಷದಿ ನೀಡಿದರೆ ಕಂಪೆನಿಗಳ ಲೈಸನ್ಸ್ ರದ್ದುಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
It is sad & shocking that when Government of Maharashtra asked the 16 export companies for #Remdesivir, we were told that Central Government has asked them not to supply the medicine to #Maharashtra.
These companies were warned, if they did, their license will be cancelled(1/2)— Nawab Malik نواب ملک नवाब मलिक (@nawabmalikncp) April 17, 2021
“ಇದು ಅಪಾಯಕಾರಿ ನಿದರ್ಶನವಾಗಿದ್ದು, ಈ ಸಂದರ್ಭಗಳಲ್ಲಿ ಮಹಾರಾಷ್ಟ್ರ ಸರ್ಕಾರವು ಈ ರಫ್ತುದಾರರಿಂದ ರೆಮ್‌ಡೆಸಿವಿರ್‌ನ ದಾಸ್ತಾನು ವಶಪಡಿಸಿಕೊಳ್ಳುವುದು ಮತ್ತು ಅಗತ್ಯವಿರುವವರಿಗೆ ಪೂರೈಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ” ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಇತ್ತೀಚೆಗೆ ಲಾಕ್‌ಡೌನ್ ಕೂಡಾ ಘೋಷಿಸಲಾಗಿದೆ. ಜೊತೆಗೆ ರಾಜ್ಯದಲ್ಲಿ ಔಷಧಿ ಕೊರತೆಯಿದೆ ಎಂದು ಕೇಂದ್ರದ ಬಳಿ ಹೇಳಿಕೊಂಡಿತ್ತು.
ಇದನ್ನೂ ಓದಿ: ಕುಂಭಮೇಳ ಸಾಂಕೇತಿಕವಾಗಿಸಬೇಕು, ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ತರುತ್ತದೆ: ಪ್ರಧಾನಿ ಮೋದಿ
ವಿಡಿಯೋ ನೋಡಿ: ನರೇಂದ್ರ ಮೋದಿ ಅವರ ಪತ್ರಿಕಾಗೋಷ್ಠಿಗೆ ಮುಂಚೆ ಏನು ಯೋಚಿಸುತ್ತಿದ್ದರು – ಕಾಲ್ಪನಿಕ ತುಣುಕು



