ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯೊಬ್ಬರ ಹಿಜಾಬ್ ಅನ್ನು ಹಿಡಿದ ಎಳೆದ ವಿಚಾರಕ್ಕೆ ಸಂಬಂಧ ಪಟ್ಟಂತೆ ಅವರ ವಿರುದ್ಧ ಬೆಂಗಳೂರು ಮೂಲದ ವಕೀಲರೊಬ್ಬರು ಮಂಗಳವಾರ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಎಂ.ಎ ಸಲೀಮ್ ಅವರಿಗೆ ಶೂನ್ಯ ಎಫ್‌ಐಆರ್ ದಾಖಲಿಸುವಂತೆ ದೂರು ದಾಖಲಿಸಿದ್ದಾರೆ.
ವಕೀಲ ಓವೈಜ್ ಹುಸೇನ್ ಎಸ್ ಅವರು ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಸೇರಿದಂತೆ ಇತರರಿಗೆ ದೂರು ಸಲ್ಲಿಸಿದ್ದಾರೆ.
ನಿತಿಶ್ ಕುಮಾರ್ ವಿರುದ್ಧ “ಲೈಂಗಿಕ ದೌರ್ಜನ್ಯ, ಒಪ್ಪಿಗೆಯಿಲ್ಲದ ದೈಹಿಕ ಹಸ್ತಕ್ಷೇಪ, ಮಹಿಳೆಯ ಘನತೆಯನ್ನು ಉಲ್ಲಂಘಿಸುವುದು, ಸಾರ್ವಜನಿಕ ಅವಮಾನ ಮತ್ತು ಧಾರ್ಮಿಕ ಘನತೆಯ ಉಲ್ಲಂಘನೆ” ಆರೋಪ ಹೊರಿಸಲಾಗಿದೆ ಎಂದು ಹುಸೇನ್ ಹೇಳಿದರು. ದೂರನ್ನು ಅಂಗೀಕರಿಸಲಾಗಿದೆ. ಬಿಹಾರದಲ್ಲಿ ಸೋಮವಾರ ನಡೆದ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಿತೀಶ್ ಕುಮಾರ್ ಮಹಿಳಾ ವೈದ್ಯರಿಗೆ ಪ್ರಮಾಣಪತ್ರ ನೀಡುವಾಗ ಅವರ ಹಿಜಾಬ್ ತೆಗೆಯುವಂತೆ ಸನ್ನೆ ಮಾಡುತ್ತಿರುವುದು ಕಂಡುಬಂದಿದೆ. ಮಹಿಳೆ ಪ್ರತಿಕ್ರಿಯಿಸುವ ಮೊದಲು, ಕುಮಾರ್ ಹಿಜಾಬ್ ಅನ್ನು ಹಿಡಿದು ಕೆಳಗೆ ಎಳೆಯುತ್ತಿರುವುದು ಕಂಡುಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವೆಡೆ ಪ್ರಕರಣ ದಾಖಲಾಗಿವೆ.


