Homeರಾಜಕೀಯಬೆಳಗಾವಿಯ ಕಾಂಗ್ರೆಸ್ ರಿಯಲ್ ಫೈಟ್ ಇನ್ಮುಂದೆ ಶುರು!

ಬೆಳಗಾವಿಯ ಕಾಂಗ್ರೆಸ್ ರಿಯಲ್ ಫೈಟ್ ಇನ್ಮುಂದೆ ಶುರು!

- Advertisement -
- Advertisement -

ಆಗಸ್ಟ್ 27ರ ರಾತ್ರಿಯಿಂದ ಸೆಪ್ಟೆಂಬರ್ 7ರವರೆಗೆ ಇಡೀ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದು ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ. ಸಹಕಾರಿ ಕ್ಷೇತ್ರದ ಈ ಚುನಾವಣೆಗೆ ಇಷ್ಟೊಂದು ಮಹತ್ವ ಬರಲು ಪ್ರತಿಷ್ಠಿತರ ನಡುವೆ ನಡೆದ ಜಿದ್ದಾಜಿದ್ದಿನ ಹೋರಾಟ ಕಾರಣವಾಗಿತ್ತು. ಬೆಳಗಾವಿಯ ಸಾಹುಕಾರರು ಎಂದೇ ಖ್ಯಾತಿ ಗಳಿಸಿದ ಜಾರಕಿಹೊಳಿ ಸಹೋದರರಿಗೆ ಸವಾಲ್ ಎಸೆದಿದ್ದು ಮಾತ್ರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಇದೀಗ ಚುನಾವಣೆ ಮುಗಿದಿದ್ದು ಈ ಕದನ ಕೂಡ ಮುಗಿದಿದೆ ಎಂದುಕೊಂಡರೆ ತಪ್ಪಾಗುತ್ತದೆ. ರಿಯಲ್ ಆಗಿ ಫೈಟ್ ಆರಂಭವಾಗಿರುವುದೇ ಈಗ.
ಹೆಬ್ಬಾಳ್ಕರ್ ಬೆಳೆಸಿದ್ದು ಜಾರಕಿಹೊಳಿ ಸಹೋದರರು…!
ಕಳೆದ 20 ವರ್ಷಗಳಿಂದ ಜಾರಕಿಹೊಳಿ ಸಹೋದರರ ನೆರಳಲ್ಲಿಯೇ ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಮಾಡಿಕೊಂಡು ಬೆಳೆದಿದ್ದಾರೆ. ಹೆಬ್ಬಾಳ್ಕರ್ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ, ನಂತರ 2013ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ, 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಮಾನ. ಎಲ್ಲದರ ಹಿಂದೆ ಜಾರಕಿಹೊಳಿ ಸಹೋದರರ ಶ್ರೀರಕ್ಷೆ ಇದ್ದೇ ಇತ್ತು. ಕಳೆದ ಲೋಕಸಭೆ ಚುಣಾವಣೆ ಸಂದರ್ಭದಲ್ಲಿ ಮೋದಿ ಅಲೆಯ ನಡುವೆಯೂ ಗೋಕಾಕ್, ಅರಭಾವಿ ಕ್ಷೇತ್ರದಿಂದ ಜಾರಕಿಹೊಳಿ ಸಹೋದರರು ಅತಿಹೆಚ್ಚು ಮತಗಳನ್ನು ಹೆಬ್ಬಾಳ್ಕರ್‍ಗೆ ಹಾಕಿಸುವ ಮೂಲಕ ಬೆನ್ನೆಲುಬಾಗಿ ನಿಂತಿದ್ದರು. ಅಷ್ಟೇ ಅಲ್ಲ, ಚುನಾವಣೆ ಸಂದರ್ಭಗಳನ್ನೂ ಸೇರಿ ಅನೇಕ ಸಂದರ್ಭದಲ್ಲಿ ಆರ್ಥಿಕವಾಗಿಯೂ ಹೆಬ್ಬಾಳ್ಕರ್‍ಗೆ ಸಹಾಯ ಮಾಡಿದ್ದಾರೆ. ಇತ್ತೀಚಿನ 2018ರ ವಿಧಾನಸಭೆ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಹೆಬ್ಭಾಳ್ಕರ್ ಗೆಲ್ಲಿಸಲಿಕ್ಕಾಗಿ ಸಚಿವ ರಮೇಶ ಜಾರಕಿಹೊಳಿ, ಉದ್ಯಮಿ ಲಖನ್ ಜಾರಕಿಹೊಳಿ ಪ್ರಚಾರ ನಡೆಸಿದ್ದಕ್ಕೆ ಕ್ಷೇತ್ರದ ಜನತೆ ಸಾಕ್ಷಿಯಾಗಿದ್ದಾರೆ.
ರಮೇಶ ಜಾರಕಿಹೊಳಿ ಹಾಗೂ ಹೆಬ್ಭಾಳ್ಕರ್ ನಡುವೆ ಯಾಕೆ ವೈಮನಸ್ಸು…?
ದಶಕಗಳಿಂದ ಸಚಿವ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಉತ್ತಮ ಬಾಂಧವ್ಯವಿತ್ತು. ‘ಹೆಬ್ಬಾಳ್ಕರ್ ತಂದೆಯ ಅನಾರೋಗ್ಯ, ಸಹೋದರ ಹಾಗೂ ಮಗನ ವಿದ್ಯಾಭ್ಯಾಸಕ್ಕೂ ಸಹಾಯ ಮಾಡಿದ್ದೇನೆ. ಆದರೆ ಇದನ್ನೆಲ್ಲಾ ಈಗ ಹೆಬ್ಬಾಳ್ಕರ್ ಮರೆತುಬಿಟ್ಟಿದ್ದಾರೆ’ ಎಂದು ರಮೇಶ ಜಾರಕಿಹೊಳಿ ಆರೋಪಿಸುತ್ತಿದ್ದಾರೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾಗಿದ್ದ ವೇಳೆಯಲ್ಲಿ, ರಮೇಶ ಜಾರಕಿಹೊಳಿ ವರಿಷ್ಠರ ಸಂಪರ್ಕ ಸಾಧಿಸಿದ್ದು ಇದೇ ಹೆಬ್ಬಾಳ್ಕರ್ ಮೂಲಕವೇ. ಸತೀಶ ಬದಲಾಗಿ ತಮಗೆ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಕೂಡ ಹೆಬ್ಬಾಳ್ಕರ್ ಕೈಜೋಡಿಸಿದ್ದರು. ನಂತರ ಜಿಲ್ಲೆಯ ಎಲ್ಲಾ ಕೆಲಸಗಳಲ್ಲಿಯೂ ರಮೇಶ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ಒಟ್ಟಗೂಡಿಯೇ ಮಾಡುತ್ತಿದ್ದರು. ಆದರೆs 2018ರ ವಿಧಾನಸಭೆ ಚುನಾವಣೆ ಬಳಿಕ ರಚನೆಯಾದ ಸಮ್ಮಿಶ್ರ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಇಬ್ಬರು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಲು ಆರಂಭಿಸಿದ್ರು. ಈ ವೇಳೆಯಲ್ಲಿ ತನ್ನ ಪರವಾಗಿ ಹೈಕಮಾಂಡ್ ಬಳಿ ಬರುವಂತೆ ಹೆಬ್ಬಾಳ್ಕರ್‍ಗೆ ರಮೇಶ್ ಸೂಚನೆ ನೀಡಿದ್ದರು. ಆದರೆ ಅಷ್ಟರಲ್ಲಾಗಲೇ ಸನ್ನಿವೇಶ ಬದಲಾಗಿತ್ತು. ಇದಕ್ಕೆ ಕ್ಯಾರೆ ಎನ್ನದ ಹೆಬ್ಬಾಳ್ಕರ್ ಲಿಂಗಾಯತ ಮಹಿಳಾ ಕೋಟಾದಲ್ಲಿ ತಾನೇ ಮಂತ್ರಿಗಿರಿಯ ಆಕಾಂಕ್ಷಿ ಎನ್ನುವ ಮೂಲಕ ರಮೇಶ ಜಾರಕಿಹೊಳಿಗೆ ಟಾಂಗ್ ನೀಡಿದ್ದರು. ನಂತರ ಸಿದ್ದರಾಮಯ್ಯ ಪ್ರಭಾವದ ಕಾರಣ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿತ್ತು. ಇದಾದ ನಂತರ ರಮೇಶ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸಿದೆ. ವರ್ಗಾವಣೆ ವಿಚಾರಗಳಲ್ಲಿ ಇದು ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಆದರೆ ಈ ಮುಸುಕಿನ ಜಗಳ ಬೀದಿಗೆ ಬರಲು ಕಾಣವಾಗಿದ್ದು ಮಾತ್ರ ಪಿಎಲ್‍ಡಿ ಬ್ಯಾಂಕ್ ಚುನಾವಣೆ.
ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದಿದ್ದು ಯಾರು..?
ಜಾರಕಿಹೊಳಿ ಸಹೋದರರು ಮತ್ತು ಹೆಬ್ಬಾಳ್ಕರ್ ನಡುವೆ ಪೈಪೋಟಿಗೆ ಕಾರಣವಾಗಿದ್ದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಸಲಿಗೆ ಗೆದ್ದಿದ್ದು ಯಾರು? ತೀವ್ರ ಪ್ರತಿಷ್ಠೆ, ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಗೆದ್ದು ಸೋತಂತಾಗಿದ್ದರೆ, ಜಾರಕಿಹೊಳಿ ಸಹೋದರರು ಸೋತ್ತು ಗೆದ್ದಂತಾಗಿದ್ದಾರೆ. ಹೀಗಾಗಲು ಪ್ರಮುಖ ಕಾರಣ ಶಾಸಕ ಸತೀಶ್ ಜಾರಕಿಹೊಳಿ ನಡೆಸಿದ ಮಾಸ್ಟರ್ ಪ್ಲ್ಯಾನ್. ಮೊದಲು ಸತೀಶ್ ಜಾರಕಿಹೊಳಿ ಬಲಗೈ ಭಂಟನಂತೆ ಇದ್ದ ಬಾಪುಗೌಡ ಪಾಟೀಲ್ ನಂತರ ಸತೀಶಗೆ ಕೈಕೊಟ್ಟು ಹೆಬ್ಬಾಳ್ಕರ್ ಗುಂಪು ಸೇರಿದ್ದರು. ಹೆಬ್ಬಾಳ್ಕರ್ ಗುಂಪಿನಿಂದ ಅಧ್ಯಕ್ಷರಾಗಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಬಾಪುಗೌಡನ ಮಾತಿನಂತೆಯೆ ಹೆಬ್ಬಾಳ್ಕರ್ ಈ ಚುನಾವಣೆಯನ್ನು ಇಷ್ಟೊಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಆದರೇ ಹೆಬ್ಬಾಳ್ಕರ್ ಹಾಗೂ ಜಾರಕಿಹೊಳಿ ಸಂಧಾನದ ವೇಳೆಯಲ್ಲಿ ಸತೀಶ ಜಾರಕಿಹೊಳಿ ಇಟ್ಟ ಮೊದಲ ಬೇಡಿಕೆ ಬಾಪುಗೌಡರನ್ನು ಯಾವುದೇ ಕಾರಣಕ್ಕೂ ಅಧ್ಯಕ್ಷರನ್ನಾಗಿ ಮಾಡಬಾರದು ಅಂತ. ಇದಕ್ಕೆ ಅನಿವಾರ್ಯವಾಗಿ ಹೆಬ್ಬಾಳ್ಕರ್ ಒಪ್ಪಿಗೆ ಸೂಚಿಸಬೇಕಾಗಿ ನಂತರ ಮರಾಠ ಸಮುದಾಯದ 83 ವರ್ಷದ ವಯೋವೃದ್ಧ ಮಹಾದೇವ ಪಾಟೀಲ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ, ಜಾರಕಿಹೊಳಿ ಸಹೋದರರು ಸೋಲಿನಲ್ಲೂ ನಗೆ ಬೀರಿದ್ದರು. ಆದರೇ ಹೆಬ್ಬಾಳ್ಕರ್ ಗೆದ್ದು ಸಹ ಲಿಂಗಾಯತ ಸಮುದಾಯ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಕೊಡಿಸುವಲ್ಲಿ ವಿಫಲರಾಗಿದ್ದರು.
ಸೈಲೆಂಟ್ ಸತೀಶ್ ಮುಂದಿನ ನಡೆ ನಿಗೂಢ….!
ಇನ್ನೂ ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆಯನ್ನು ರಾಜ್ಯದ 6 ಕೋಟಿ ಕನ್ನಡಿಗರು ಮಾಧ್ಯಮಗಳ ಮೂಲಕ ವೀಕ್ಷಣೆ ಮಾಡಿದರು. ಒಂದು ಯಕಶ್ಚಿತ್ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಿಂದಾಗಿ ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೇ ಕುತ್ತು ಬರಲಿದೆ ಎಂದೇ ಬಿಂಬಿಸಲಾಗಿತ್ತು. ಆದರೇ ಮೈತ್ರಿ ಸರ್ಕಾರದ ನಾಯಕರಿಗೆ ಹೇಗಾದರೂ ತಕ್ಷಣಕ್ಕೆ ಬೆಂಕಿ ಶಮನ ಆಗೋದುಬೇಕಿತ್ತು. ಹಾಗಾಗೀ ವಿವಾದ ಇತ್ಯರ್ಥ ಪಡಿಸಲಾಗಿದೆ. ಆದರೆ ಎಲ್ಲವೂ ಬೂದಿಮುಚ್ಚಿದ ಕೆಂಡದಂತಿದೆ. ಮುಂದೆ ಲೋಕಸಭೆ ಚುನಾವಣೆಯ ವೇಳೆಯಲ್ಲಿ ಸಂಘರ್ಷ ಏರ್ಪಡಲಿದೆ ಎಂದು ಸ್ವತಃ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇನ್ನೂ ಶಾಸಕ ಸತೀಶ್ ಜಾರಕಿಹೊಳಿ ರಾಜಕಾರಣದಲ್ಲಿ ಎಂದಿಗೂ ಸೋಲು ಒಪ್ಪಿಕೊಳ್ಳದ ವ್ಯಕ್ತಿ. ಯಾವುದನ್ನು ಬಹಿರಂಗವಾಗಿ ಹೇಳಲ್ಲ. ಆದರೇ ಒಳಗೊಳಗೆ ಅನೇಕ ಮಾಸ್ಟರ್ ಪ್ಲ್ಯಾನ್ ಮಾಡುವುದು ಕರಗತವಾಗಿದೆ. ಸತೀಶ್ ಜಾರಕಿಹೊಳಿ ಮುಂದಿನ ನಡೆ ಏನು? ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಣಿಸುವ ನಿಟ್ಟಿನಲ್ಲಿ ಯಾವ ಪ್ಲ್ಯಾನ್ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕು. ಇನ್ನೂ ಸತೀಶ ಜಾರಕಿಹೊಳಿ ಹಾಗೂ ಬಿಜೆಪಿ ಪ್ರಭಾವಿ ಶಾಸಕ ಉಮೇಶ ಕತ್ತಿ ಒಂದೇ ತಾಲೂಕಿನ ಎರಡು ಕ್ಷೇತ್ರಗಳಲ್ಲಿ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೇ ಒಮ್ಮೆಯೂ ಇಬ್ಬರ ನಡುವೆ ಪೈಪೋಟಿ ನಡೆದಿಲ್ಲ. ಎಂಥದೇ ಮಹತ್ವದ ವಿಚಾರವಿದ್ದರೂ ಇಬ್ಬರು ಒಟ್ಟಿಗೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳುತ್ತಾರೆ. ಆದರೇ ತಮ್ಮದೇ ಪಕ್ಷದ ಹೆಬ್ಬಾಳ್ಕರ್ ಜೊತೆ ಜಾರಕಿಹೊಳಿ ಸಹೋದರರಿಗೆ ಇಷ್ಟೋಂದು ವೈರತ್ವ ಯಾಕಾಗಿ? ಜಿಲ್ಲಾ ಕಾಂಗ್ರೆಸ್‍ನ ರಾಜಕೀಯ ಭವಿಷ್ಯದ ಮೇಲೆ ಇದು ಯಾವರೀತಿಯ ಪರಿಣಾಮ ಬೀರಲಿದೆ ಎಂಬುದೇ ಅಸಲಿ ಪ್ರಶ್ನೆ.

ಕೌಜಲಗಿ ಮುಗಿಸಲು ಹೆಬ್ಬಾಳ್ಕರ್ ದಾಳ?
ಅದು ದಶಕಗಳ ಹಿಂದಿನ ಮಾತು ಬೆಳಗಾವಿಯಲ್ಲಿ ಮಾಜಿ ಸಚಿವ ದಿ ವಿ.ಎಸ್ ಂಕೌಜಲಗಿ ದೊಡ್ಡ ಪ್ರಭಾವಿಯಾಗಿದ್ದರು. ಅವರನ್ನು ರಾಜಕೀಯವಾಗಿ ಮುಗಿಸಲು ಸ್ಕೆಚ್ ಹಾಕಿದ್ದು ಸತೀಶ ಜಾರಕಿಹೊಳಿ… ಆಗಲೇ ರಾಜಕೀಯದಲ್ಲಿ ಪ್ರಥಮ ಬಾರಿಗೆ ಸ್ಟ್ರಿಂಗ್ ಆಪರೇಷನ್ ನಡೆದಿತ್ತು. ಇದಕ್ಕೆ ಸತೀಶ ಜಾರಕಿಹೊಳಿ ಬಳಸಿಕೊಂಡಿದ್ದು ಇದೇ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನ ಅನ್ನೋ ಆರೋಪವಿದೆ.
ಈ ಸಿಡಿಯನ್ನು ಹೈಕಮಾಂಡ್ ಅಂಗಳಕ್ಕೆ ತಲುಪಿಸಿ, ನಂತರ ಕೌಜಲಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಲಾಗಿತ್ತು. ಆಗಲೇ ಜಾರಕಿಹೊಳಿ ಸಹೋದರರು ಹೆಬ್ಬಾಳ್ಕರ್ ಬಳಸಿಕೊಂಡು ದೊಡ್ಡ ತಂತ್ರ ಮಾಡಿ ಯಶಸ್ಸು ಗಳಿಸಿದ್ದರು. ಅರಬಾವಿ ಕ್ಷೇತ್ರದಿಂದ ಸತತವಾಗಿ ಗೆದ್ದಿದ್ದ ಕೌಜಲಗಿ ವಿರುದ್ಧವಾಗಿ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸಿ ಸೋಲಿಸಿ ಕೌಜಲಗಿ ಅವರನ್ನು ರಾಜಕೀಯವಾಗಿ ಮುಗಿಸಿ ಹಾಕಿದ್ದರು ಎಂಬುದನ್ನು ಇಂದಿಗೂ ಜನ ಮರೆತಿಲ್ಲ.

 

– ಗುರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...