ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ರ್‍ಯಾಲಿಯೊಂದರಲ್ಲಿ ಕಾಂಗ್ರೆಸ್ ನಾಯಕ ಸುರೇಂದರ್ ಕುಮಾರ್ ಪಕ್ಷದ ನಾಯಕರಿಗೆ ಜೈಕಾರ ಹಾಕುವ ವೇಳೆ ಪ್ರಿಯಾಂಕಾ ಗಾಂಧಿಗೆ ಬದಲಾಗಿ ಪ್ರಿಯಾಂಕಾ ಚೋಪ್ರಾಗೆ ಜಿಂದಾಬಾದ್ ಎಂದು ಹೇಳುವ ಮೂಲಕ ಮುಜುಗರಕ್ಕೊಳಗಾಗಿದ್ದಾರೆ.
“ಸೋನಿಯಾ ಗಾಂಧಿ ಜಿಂದಾಬಾದ್, ಕಾಂಗ್ರೆಸ್ ಪಕ್ಷ ಜಿಂದಾಬಾದ್, ರಾಹುಲ್ ಗಾಂಧಿ ಜಿಂದಾಬಾದ್, ಪ್ರಿಯಾಂಕಾ ಚೋಪ್ರಾ ಜಿಂದಾಬಾದ್” ಎಂದು ಕಾಂಗ್ರೆಸ್ ಮುಖಂಡರು ಕೂಗುತ್ತಿರುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಹಾಗಿದ್ದು ಸಾಕಷ್ಟು ಹಾಸ್ಯಕ್ಕೆ ಕಾರಣವಾಗಿದೆ.
ವಿಡಿಯೋ ನೋಡಿ
#WATCH Delhi: Slogan of "Sonia Gandhi zindabad! Congress party zindabad! Rahul Gandhi zindabad! Priyanka Chopra zindabad!" (instead of Priyanka Gandhi Vadra) mistakenly raised by Congress' Surender Kr at a public rally. Delhi Congress chief Subhash Chopra was also present.(01.12) pic.twitter.com/ddFDuZDTwH
— ANI (@ANI) December 1, 2019
ರ್‍ಯಾಲಿಯಲ್ಲಿ ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ವಾದ್ರಾ ಹೆಸರಿನ ಬದಲಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಹೆಸರನ್ನು ಬಳಸಿದ್ದಾರೆ. ತಕ್ಷಣ, ಆತನ ಪಕ್ಕದಲ್ಲಿ ನಿಂತಿದ್ದ ಕಾಂಗ್ರೆಸ್ಸಿನ ದೆಹಲಿ ಘಟಕದ ಮುಖ್ಯಸ್ಥ ಸುಭಾಷ್ ಚೋಪ್ರಾ, ದೋಷದ ಬಗ್ಗೆ ಆಶ್ಚರ್ಯದಿಂದ ಅವರ ಕಡೆ ನೋಡಿ ನಕ್ಕಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಹಳಷ್ಟು ಜನ ಇದರ ಕುರಿತು ಟ್ರೋಲ್ ಮಾಡಿದ್ದಾರೆ.
“ದೇವರಿಗೆ ಧನ್ಯವಾದಗಳು !! ರಾಹುಲ್ ಜಿ ಆ ರ್‍ಯಾಲಿಗೆ ಹಾಜರಾಗಲಿಲ್ಲ. ಇದ್ದಿದ್ದರೆ ಖಂಡಿತವಾಗಿಯೂ ಅವರು ರಾಹುಲ್ ಬಜಾಜ್ ಜಿಂದಾಬಾದ್ ಎಂದು ಕೂಗುತ್ತಿದ್ದರು” ಎಂದು ಟ್ವಿಟರ್ ಬಳಕೆದಾರರೊಬ್ಬರು ಲೇವಡಿ ಮಾಡಿದ್ದಾರೆ.
“ಪ್ರಿಯಾಂಕಾ ಚೋಪ್ರಾ ಕಾಂಗ್ರೆಸ್‌ಗೆ ಯಾವಾಗ ಸೇರಿದ್ದಾರೆ?” ಎಂದು ಇನ್ನೊಬ್ಬ ಟ್ವಿಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.


