ದೆಹಲಿ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬುಧವಾರ (ಜನವರಿ 29, 2025) ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೆ ಬಂದರೆ ಜಾತಿ ಜನಗಣತಿ ನಡೆಸುವುದಾಗಿ ಮತ್ತು ಪೂರ್ವಾಂಚಲಿಗಳಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಭರವಸೆ ನೀಡಿದೆ.
ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಧನ ಸಹಾಯ, 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಮತ್ತು 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡುವುದು, 25 ಲಕ್ಷ ರೂಪಾಯವರೆಗಿನ ಉಚಿತ ಆರೋಗ್ಯ ವಿಮೆ, ಉಚಿತ ಪಡಿತರ ಕಿಟ್‌ಗಳ ವಿತರಣೆ, ಒಂದು ವರ್ಷದ ಅವಧಿಗೆ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಮಾಸಿಕ 8,500 ರೂಪಾಯಿ ಧನ ಸಹಾಯ, 5 ರೂಪಾಯಿಗೆ ಊಟ ನೀಡುವ 100 ಇಂದಿರಾ ಕ್ಯಾಂಟೀನ್‌ಗಳ ಪ್ರಾರಂಭ ಕಾಂಗ್ರೆಸ್ ಪ್ರಣಾಳಿಕೆಯ ಇತರ ಪ್ರಮುಖ ಭರವಸೆಗಳಾಗಿವೆ.
दिल्ली विधानसभा चुनाव के लिए कांग्रेस का घोषणा पत्र जारी किया गया।
होगी हर जरूरत पूरी
कांग्रेस है जरूरी ✋📍 दिल्ली
#कांग्रेस_घोषणापत्र_दिल्ली pic.twitter.com/Zo5AGWodz6— Delhi Congress (@INCDelhi) January 29, 2025
22 ಕೇಂದ್ರೀಕೃತ ಕ್ಷೇತ್ರಗಳಾಗಿ ವಿಂಗಡಿಸಲಾದ ಪ್ರಣಾಳಿಕೆಯನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದರ್ ಯಾದವ್ ಬಿಡುಗಡೆ ಮಾಡಿದರು. ಎಐಸಿಸಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಈ ವೇಳೆ ಇದ್ದರು.
ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿದ ಜೈರಾಮ್ ರಮೇಶ್, ದೆಹಲಿಯ ವಾಯು ಮಾಲಿನ್ಯದ ವಿಷಯ ಪ್ರಸ್ತಾಪಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಎಎಪಿ ನೇತೃತ್ವದ ದೆಹಲಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಎರಡೂ ಸರ್ಕಾರಗಳು ಈ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿವೆ ಎಂದು ಹೇಳಿದರು.
ದೆಹಲಿಯಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದೆ. ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ವಕ್ಫ್ ಕರಡು ಮಸೂದೆ ಅಂಗೀಕರಿಸಿದ ಜಂಟಿ ಸಂಸದೀಯ ಸಮಿತಿ : ಸದಸ್ಯರು ಭಿನ್ನಾಭಿಪ್ರಾಯ ತಿಳಿಸಲು ಅವಕಾಶ


