ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಬಾಲಿವುಡ್ ಡ್ರಗ್ ಮಾಫಿಯಾ ಪ್ರಕರಣ ಕುರಿತು ಮಾದಕವಸ್ತು ವಿರೋಧಿ ನಿಯಂತ್ರಣ ವಿಭಾಗ(ಎನ್‌ಸಿಬಿ) ತನಿಖೆ ನಡೆಸುತ್ತಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, ಕಂಗನಾ ರಾಣಾವತ್ ಮರಳಿ ಮುಂಬೈಗೆ ಬಂದಿದ್ದಾರೆಂದು ಎನ್‌ಸಿಬಿಗೆ ನೆನಪಿಸಿದ್ದು, ನಟಿ ಈ ಹಿಂದೆ ತನಗೆ ಚಲನಚಿತ್ರೋದ್ಯಮದಲ್ಲಿನ ಡ್ರಗ್ಸ್ ಬಗೆಗಿನ ಮಾಹಿತಿ ಇದೆ ಎಂದು ಹೇಳುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಸಚಿನ್ ಸಾವಂತ್, ಕಂಗನಾ ಅವರನ್ನು ವಿಚಾರಣೆಗೆ ಯಾವಾಗ ಕರೆಸಿಕೊಳ್ಳುತ್ತೀರಿ ಎಂದು ಎನ್‌ಸಿಬಿಯನ್ನು ಪ್ರಶ್ನಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಸೆಪ್ಟೆಂಬರ್ 9 ರಂದು ಎನ್‌ಸಿಬಿ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಿತ್ತು. ಅಲ್ಲದೆ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಸೇರಿದಂತೆ ಹಲವಾರು ಜನರನ್ನು ಎನ್‌ಸಿಬಿ ಇದುವರೆಗೂ ವಿಚಾರಣೆಗೆ ಕರೆಸಿಕೊಂಡಿದೆ. ಸಚಿನ್ ಸಾವಂತ್ ಟ್ವೀಟ್ ಮಾಡಿರುವ ವಿಡಿಯೋ ಈ ಹಿಂದೆಯೆ ವೈರಲ್ ಆಗಿತ್ತು. ಅದರಲ್ಲಿ ನಟಿ ಕಂಗನಾ ರಾಣಾವತ್ ತಾನು “ಮಾದಕ ವ್ಯಸನಿ” ಆಗಿದ್ದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಣಿಕರ್ಣಿಕಾ ವಿವಾದ: ಕಂಗನಾ ಕಾರಣಕ್ಕೆ ನಾನು ಜಗತ್ತಿಗೆ ಅಪರಿಚಿತನಾಗಿರಬಹುದು- ನಿರ್ದೇಶಕ
ಸಚಿನ್ ಸಾವಂತ್ ತನ್ನ ಟ್ವೀಟ್‌ನಲ್ಲಿ, “ಆತ್ಮೀಯ ಎನ್‌ಸಿಬಿ, ಕಂಗನಾ ರಾಣಾವತ್ ಬಂದಿದ್ದಾರೆ. ಈ ವಿಡಿಯೋಗಾಗಿ ಅವರನ್ನು ನೀವು ಯಾವಾಗ ವಿಚಾರಣೆ ನಡೆಸುತ್ತೀರಿ?. ಬಾಲಿವುಡ್‌ನಲ್ಲಿರುವ ಡ್ರಗ್ ಮಾಫಿಯಾದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದಾಗ ಮೋದಿ ಸರ್ಕಾರ ಅವರಿಗೆ ವೈ ಕೆಟಗಿರಿಯ ಭದ್ರತೆ ನೀಡಿತು. ಅದನ್ನು ಕಂಗನಾ ಇನ್ನೂ ಅನುಭವಿಸುತ್ತಿದ್ದಾರೆ. ಆದರೆ ಅವರು ಅಪರಾಧದ ಮಾಹಿತಿಯನ್ನು ಈಗಲೂ ಮರೆ ಮಾಚುತ್ತಿದ್ದಾರೆ” ಎಂದು ಹೇಳಿದ್ದಾರೆ.
BJP called her Jhansi ki Rani and alleged that MVA govt is not letting her give this info to police. Would Ram Kadam now request her to give that information to NCB? Would BJP apologize for defaming Maharashtra?
— Sachin Sawant सचिन सावंत (@sachin_inc) December 30, 2020
“ಬಿಜೆಪಿ ಕಂಗಾನಾರನ್ನು ಝಾನ್ಸಿಯ ರಾಣಿ ಎಂದು ಕರೆದು, ಮಹಾರಾಷ್ಟ್ರ ಸರ್ಕಾರ ಅವರು ಪೊಲೀಸರಿಗೆ ಮಾಹಿತಿ ನೀಡಲು ಬಿಡುತ್ತಿಲ್ಲ ಎಂದು ಆರೋಪಿಸಿತ್ತು. ಈಗ ಅವರು ಆ ಮಾಹಿತಿಯನ್ನು ಎನ್‌ಸಿಬೆಗೆ ಮಾಹಿತಿ ನೀಡಲು ವಿನಂತಿಸುತ್ತಾರೆಯೆ? ಮಹಾರಾಷ್ಟ್ರವನ್ನು ದೂಷಿಸಿದ್ದಕ್ಕಾಗಿ ಬಿಜೆಪಿ ಕ್ಷಮೆಯಾಚಿಸುತ್ತದೆಯೆ?” ಎಂದು ಸಚಿನ್ ಸಾವಂತ್ ಪ್ರಶ್ನಿಸಿದ್ದಾರೆ.
ಕಂಗನಾ ರಾಣಾವತ್, ತಾನು ಮುಂಬೈಗೆ ಮರಳಿ ಮುಂಬಾ ದೇವಿ ಹಾಗೂ ಸಿದ್ದಿ ವಿನಾಯಕ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದನ್ನು ಫೋಟೋ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಇವು ಮೀಸಲಾತಿಯ ಅಡ್ಡಪರಿಣಾಮಗಳು: ಮೀಸಲಾತಿ ವಿರುದ್ಧ ಮಾತನಾಡಿದ ಕಂಗನಾ ರಾಣಾವತ್!
The amount of hostility I faced for standing up for my beloved city Mumbai baffled me, today I went to Mumba devi and Shri Siddhivinayak ji and got their blessings, I feel protected, loved and welcomed. Jai Hind Jai Maharashtra ? pic.twitter.com/sxT583P5w2
— Kangana Ranaut (@KanganaTeam) December 29, 2020
ಇದನ್ನೂ ಓದಿ: ರೈತರ ಬಗ್ಗೆ ಅವಹೇಳನಕಾರಿ ಟ್ವೀಟ್: ನಟಿ ಕಂಗನಾಗೆ ಮತ್ತೊಂದು ಲೀಗಲ್ ನೋಟಿಸ್


