ಸಂವಿಧಾನವೇ ಸುಪ್ರೀಂ, ಸಂಸತ್ತಲ್ಲ: ಸಿಜೆಐ ಬಿ.ಆರ್ ಗವಾಯಿ

ಭಾರತದಲ್ಲಿ ಸಂವಿಧಾನ ಸರ್ವೋಚ್ಚವಾಗಿದೆ. ಪ್ರಜಾಪ್ರಭುತ್ವದ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಬುಧವಾರ (ಜೂ.25) ಹೇಳಿದ್ದಾರೆ. “ಕೆಲವರು ಸಂಸತ್ತು ಸರ್ವೋಚ್ಚ ಎನ್ನುತ್ತಿದ್ದಾರೆ. ಆದರೆ, ಸಂವಿಧಾನವೇ ಸರ್ವೋಚ್ಚ ಎಂಬುವುದು ನನ್ನ ಅಭಿಪ್ರಾಯ ಎಂದಿದ್ದಾರೆ. ಕಳೆದ ತಿಂಗಳು 52ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ನ್ಯಾಯಮೂರ್ತಿ ಗವಾಯಿ, ತಮ್ಮ ಹುಟ್ಟೂರು ಪೂರ್ವ ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಜಾಪ್ರಭುತ್ವದ ಅಂಗಳಾದ ಕಾರ್ಯಾಂಗ, … Continue reading ಸಂವಿಧಾನವೇ ಸುಪ್ರೀಂ, ಸಂಸತ್ತಲ್ಲ: ಸಿಜೆಐ ಬಿ.ಆರ್ ಗವಾಯಿ