ಮೇ 03ರವರೆಗೆ ಲಾಕ್‌ಡೌನ್ ಮುಂದುವರಿಕೆಯಾಗಲಿದ್ದು, ಈ ವಾರ ಕಠಿಣ ನಿಬಂಧನೆಗಳಿದ್ದು ಏಪ್ರಿಲ್ 20ರ ನಂತರ ನಿಬಂಧನೆಗಳು ಸಡಿಲವಾಗಲಿವೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದೇ ಸಮಯದಲ್ಲಿ ಅವರು ಕೊರೋನಾ ವೈರಸ್ ವಿಸ್ತರಣೆಯನ್ನು ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಮಾಡುವಲ್ಲಿ ದೇಶದ ಜನರು ತೋರಿಸಿದ ಶಿಸ್ತನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
“ರಾಜ್ಯ ಸರ್ಕಾರಗಳು ಮತ್ತು ವಿವಿಧ ಪಾಲುದಾರರೊಂದಿಗಿನ ನನ್ನ ಚರ್ಚೆಗಳಲ್ಲಿ, ಒಂದು ವಿಷಯವು ಸರ್ವಾನುಮತದಿಂದ ಕೂಡಿತ್ತು, ಅದೆಂದರೆ ನಾವು ಲಾಕ್ ಡೌನ್ ಅನ್ನು ವಿಸ್ತರಿಸಬೇಕು. ಆದ್ದರಿಂದ, ಲಾಕ್ ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲಾಗುವುದು ಎಂದು ನಾನು ಇಂದು ಘೋಷಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ಜನರು ಜಾಗರೂಕರಾಗಿರಬೇಕು ಮತ್ತು ರೋಗ ಹರಡುವುದನ್ನು ತಡೆಯಬೇಕು ಎಂದು ಮನವಿ ಮಾಡಿದ ಅವರು, “ಮುಂದಿನ ವಾರದಲ್ಲಿ ಏಪ್ರಿಲ್ 20 ರವರೆಗೆ ನಾವು ಹೆಚ್ಚು ಕಠಿಣ ಕ್ರಮಗಳನ್ನು ವಿಧಿಸುತ್ತೇವೆ. ಸಾಂಕ್ರಾಮಿಕ ರೋಗವನ್ನು ವಿವಿಧ ರಾಜ್ಯಗಳು ಹೇಗೆ ಎದುರಿಸುತ್ತಿವೆ ಎಂಬುದನ್ನು ನಾವು ಮೌಲ್ಯಮಾಪನ ಮಾಡುತ್ತೇವೆ. ಕೊರೊನಾ ಹಾಟ್‌ಸ್ಪಾಟ್‌ಗಳನ್ನು ಹೆಚ್ಚಾಗದಂತೆ ತಡೆಗಟ್ಟುವ ರಾಜ್ಯಗಳು, ಕೆಲವು ಪ್ರಮುಖ ಚಟುವಟಿಕೆಗಳನ್ನು ಕೆಲವು ಷರತ್ತುಗಳೊಂದಿಗೆ ಪುನರಾರಂಭಿಸಲು ಅವರಿಗೆ ಅವಕಾಶ ನೀಡಬಹುದು, ಎಂದು ಮೋದಿ ಹೇಳಿದರು.
“ಹೋರಾಟವು ಶಕ್ತಿಯುತವಾಗಿ ಮುಂದುವರಿಯುತ್ತಿದೆ. ನೀವು ಎದುರಿಸಿದ ಕಷ್ಟಗಳನ್ನು ನಾನು ತಿಳಿದಿದ್ದೇನೆ, ನೀವು ನಿಮ್ಮ ಕರ್ತವ್ಯಗಳನ್ನು ಪೂರೈಸುತ್ತಿದ್ದೀರಿ. ಭಾರತದ ಜನರ ತ್ಯಾಗಕ್ಕಾಗಿ ನಾನು ಗೌರವಯುತವಾಗಿ ನಮಸ್ಕರಿಸುತ್ತೇನೆ ” ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು
“ಜನರು ತೊಂದರೆಗಳನ್ನು ಎದುರಿಸುತ್ತಿರುವಾಗ ಅವರು ದೇಶವನ್ನು ಉಳಿಸಿದ್ದಾರೆ” ಎಂದು ಅವರು ಹೇಳಿದರು.
ಇಂದಿನ ಡಾ.ಬಿ.ಆರ್ ಅಂಬೇಡ್ಕರ್‌ರವರ ಜನ್ಮ ಸ್ಮರಿಸಿದ ಮೋದಿ, “ನಮ್ಮ ಸಂವಿಧಾನವು ಜನರು ಬಗ್ಗೆ ಮಾತನಾಡುತ್ತದೆ. ಭಾರತದ ಜನತೆಯಾದ ನಾವು ಈ ಲಾಕ್‌ಡೌನ್ ಅವಧಿಯಲ್ಲಿ ಚೈತನ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.


