Homeಮುಖಪುಟ5 ನೇ ದಿನವೂ ಮುಂದುವರೆದ ಐಟಿ ದಾಳಿ; 200 ಕೋಟಿ ರೂ. ನಗದು ವಶಕ್ಕೆ!

5 ನೇ ದಿನವೂ ಮುಂದುವರೆದ ಐಟಿ ದಾಳಿ; 200 ಕೋಟಿ ರೂ. ನಗದು ವಶಕ್ಕೆ!

- Advertisement -
- Advertisement -

ಆದಾಯ ತೆರಿಗೆ ಇಲಾಖೆ ಉತ್ತರ ಪ್ರದೇಶದ ಸುಗಂಧ ದ್ರವ್ಯದ ಉದ್ಯಮಿ ಪಿಯೂಷ್ ಜೈನ್ ಅವರ ಮೇಲೆ ನಡೆಸಿದ ದಾಳಿಯಲ್ಲಿ ಇದುವರೆಗೆ 200 ಕೋಟಿ ರೂ.ಗೂ ಹೆಚ್ಚು ನಗದು ಮತ್ತು ದೊಡ್ಡ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌‌ಡಿಟಿವಿ ಸೋಮವಾರ ವರದಿ ಮಾಡಿದೆ. ಆದಾಯ ತೆರಿಗೆ ಇಲಾಖೆಯು ಕಳೆದ ವಾರ ಅವರ ಮನೆಗಳ ಮೇಲೆ ದಾಳಿ ಪ್ರಾರಂಭಿಸಿದ್ದು, ಇನ್ನೂ ನಡೆಯುತ್ತಿದೆ.

ಜಿಎಸ್‌ಟಿ ಗುಪ್ತಚರ ಘಟಕದ ಮೂಲಗಳು 107 ಕೋಟಿ ನಗದು ಮತ್ತು ಕೋಟ್ಯಂತರ ಮೌಲ್ಯದ ಆಸ್ತಿಗಳ ದಾಖಲೆಗಳನ್ನು ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಖನೌಜ್‌ನಲ್ಲಿರುವ ಮೂರು ಮನೆಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ.

ಇದನ್ನೂ ಓದಿ:ಉಪಚುನಾವಣೆ ಸೋಲಿನಿಂದಾಗಿ ಕೇಂದ್ರವು ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತಗೊಳಿಸಿದೆ: ಪಿ ಚಿದಂಬರಂ

ಖನೌಜ್‌‌ನ ಚುಪ್ಪಟ್ಟಿ ಮೂಲದ ಪಿಯೂಷ್‌‌ ಜೈನ್ ತಮ್ಮ ವ್ಯವಹಾರಕ್ಕಾಗಿ ತಮ್ಮ ಪೂರ್ವಜರ ಚಿನ್ನವನ್ನು ಮಾರಾಟ ಮಾಡಿ ಹಣವನ್ನು ಸಂಗ್ರಹಿಸಿದ್ದಾಗಿ ಜಿಎಸ್‌ಟಿ ಅಧಿಕಾರಿಗಳಿಗೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಅವರು ಚಿನ್ನವನ್ನು ಯಾರಿಗೆ ಮಾರಾಟ ಮಾಡಿದ್ದಾರೆ ಎಂದು ಅಧಿಕಾರಿಗಳಿಗೆ ತಿಳಿಸಿಲ್ಲ ಎಂದು ತಿಳಿದು ಬಂದಿದ್ದು, ಅವರ ಪುತ್ರರನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಪಿಯೂಷ್ ಜೈನ್ ಅವರನ್ನು ಭಾನುವಾರ ತೆರಿಗೆ ವಂಚನೆಗಾಗಿ ಜಿಎಸ್‌ಟಿ ಅಧಿಕಾರಿಗಳು ಬಂಧಿಸಿದ್ದರು. ದಾಳಿಯ 1 ನೇ ದಿನದಂದು (ಗುರುವಾರ) ಅವರು ಪರಾರಿಯಾಗಿದ್ದು, ನಂತರ ಕರೆ ನೀಡಿದ ನಂತರ ಮರಳಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಗೆ ವರದಿ ಮಾಡಿದೆ.

ಇದನ್ನೂ ಓದಿ:ಯುಪಿ, ಉತ್ತರಾಖಂಡ ಚುನಾವಣೆಗೆ 150 ಕ್ಕೂ ಹೆಚ್ಚು ಹಿರಿಯ ಬಿಜೆಪಿ ನಾಯಕರ ನಿಯೋಜನೆ

ಈ ಮಧ್ಯೆ ಕಾನ್ಪುರ ಮತ್ತು ಕನ್ನೌಜ್‌ನಲ್ಲಿರುವ ಅವರ ಮನೆಗಳು ಹಾಗೂ ಖನೌಜ್‌ನಲ್ಲಿರುವ ಕಾರ್ಖಾನೆಯಿಂದ ಸುಮಾರು 187 ಕೋಟಿ ರೂ. ಗಳನ್ನು ಎಣಿಕೆ ಮಾಡಿದ್ದಾರೆ. ಇದರಲ್ಲಿ ಖನೌಜ್‌ನಲ್ಲಿರುವ ಅವರ ಸುಗಂಧ ದ್ರವ್ಯ ಕಾರ್ಖಾನೆಯಿಂದ ವಶಪಡಿಸಿಕೊಳ್ಳಲಾಗಿರುವ 10 ಕೋಟಿ ರೂ.ಗಳು ಸೇರಿದೆ.

“ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(ಸಿಬಿಐಸಿ)ಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪ್ರಕರಣವಾಗಿದೆ” ಎಂದು ಸಿಬಿಐಸಿ ಅಧ್ಯಕ್ಷ ವಿವೇಕ್ ಜೋಹ್ರಿ ಶುಕ್ರವಾರ ಎಎನ್‌ಐಗೆ ತಿಳಿಸಿದ್ದಾರೆ. ಅಂದು ವಸೂಲಿಯಾದ ಮೊತ್ತವು ಕೇವಲ 150 ಕೋಟಿ ರೂ. ಆಗಿತ್ತು.

ಇದನ್ನೂ ಓದಿ:ಯುಪಿ ಉದ್ಯಮಿಯ ಮನೆಗೆ ಐಟಿ ದಾಳಿ: ಇದುವರೆಗೂ ₹ 150 ಕೋಟಿ ಎಣಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...