“ಗಾಯಕ ಎಸ್.ಪಿ.ಬಾಲಸುಬ್ರಮ್ಮಣ್ಯಂ ಅವರಿಗೆ ಕೊರೊನಾ ವೈರಸ್ ನೆಗೆಟಿವ್ ವರದಿ ಬಂದಿದೆ. ಆದರೆ ಅವರು ಇನ್ನೂ ವೆಂಟಿಲೇಟರ್ ಸಹಾಯದಲ್ಲಿರುವುದಾಗಿ” ಎಸ್ ಪಿ ಬಿ ಪುತ್ರ ಎಸ್.ಪಿ.ಚರಣ್ ಮಾಹಿತಿ ನೀಡಿದ್ದಾರೆ.
“ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವನ್ನ ಚಿಕ್ಕದಾಗಿ ಆಚರಣೆ ಮಾಡಲಾಗಿದೆ. ತಂದೆ ಶ್ವಾಸಕೋಶದಲ್ಲಿ ಉಂಟಾಗಿದ್ದ ಸೋಂಕು ನಿವಾರಣೆಯಾಗುತ್ತಿದೆ” ಎಂದು ತಾವು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಹೇಳಿದ್ದಾರೆ.
“ಈಗ ಫಿಸಿಯೋಥೆರಪಿ ಮಾಡಲಾಗುತ್ತಿದೆ. ತಮ್ಮ ಐಪ್ಯಾಡ್ ನಲ್ಲಿ ಕ್ರಿಕೆಟ್, ಟೆನಿಸ್ ನೋಡ್ತಿದಾರೆ. ಐಪಿಎಲ್ ಪಂದ್ಯ ಶುರುವಾಗುವುದನ್ನು ಕಾಯುತ್ತಿದ್ದಾರೆ. ಅಭಿಮಾನಿಗಳ ಪ್ರಾರ್ಥನೆಗೆ ಎಂದೆಂದೂ ನಾವು ಋಣಿ” ಎಂದು ಎಸ್.ಪಿ.ಚರಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ: ಬ್ರೆಜಿಲ್ ಹಿಂದಿಕ್ಕಿ ಎರಡನೆ ಸ್ಥಾನಕ್ಕೆ ಏರಿದ ಭಾರತ


