ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ (61) ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಇಂದು ಮಧ್ಯಾಹ್ನ ದೃಢಪಟ್ಟಿದೆ. ಅವರನ್ನು ರಾಜ್ಯ ರಾಜಧಾನಿ ಭೋಪಾಲ್‌ನ ಚಿರಾಯು ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
“ನನ್ನ ಪ್ರಿಯ ದೇಶವಾಸಿಗಳೇ, ನಾನು ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದೇನೆ. ಪರೀಕ್ಷೆಯ ನಂತರದ ವರದಿಯು ಸೋಂಕು ದೃಢಪಟ್ಟಿದೆ ಎಂದು ಹೆಳಿದೆ. ನಾನು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ ಮತ್ತು ವೈದ್ಯರ ಸಲಹೆಯ ಪ್ರಕಾರ ನಾನು ಪ್ರತ್ಯೇಕವಾಗಿರುತ್ತೇನೆ” ಎಂದು ಮುಖ್ಯಮಂತ್ರಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
मुझे डॉक्टर्स ने अस्पताल में भर्ती होने की सलाह दी है, मैं #COVID19 डेडिकेटेड चिरायु अस्पताल में भर्ती होने जा रहा हूँ। कोरोना के मरीज को ज़िद नहीं करना चाहिए कि हम होम क्वारन्टीन ही रहेंगे या अस्पताल नहीं जायेंगे। हमें डॉक्टर्स के निर्देश का पालन करना चाहिये।
— Shivraj Singh Chouhan (@ChouhanShivraj) July 25, 2020
ಕೊರೊನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.
मेरे प्रिय प्रदेशवासियों, मुझे #COVID19 के लक्षण आ रहे थे, टेस्ट के बाद मेरी रिपोर्ट पॉज़िटिव आई है। मेरी सभी साथियों से अपील है कि जो भी मेरे संपर्क में आए हैं, वह अपना कोरोना टेस्ट करवा लें। मेरे निकट संपर्क वाले लोग क्वारन्टीन में चले जाएँ।
— Shivraj Singh Chouhan (@ChouhanShivraj) July 25, 2020
ಅರವಿಂದ್ ಸಿಂಗ್ ಭದೋರಿಯಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದ ಎರಡು ದಿನಗಳ ನಂತರ ಚೌಹಾನ್ ಅವರು ಸೋಂಕಿಗೆ ಒಳಗಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಚಿವರಾದ ಭದೋರಿಯಾ ಕೂಡ ಇದ್ದರು.
ಇದರ ನಡುವೆ, ‘ಭಯಭೀತರಾಗುವ ಅಗತ್ಯವಿಲ್ಲ. ನನ್ನ ಹೊರತಾಗಿಯೂ ರಾಜ್ಯದಲ್ಲಿ ವೈರಸ್ ವಿರುದ್ಧ ಕೈಗೊಂಡಿರುವ ಪ್ರಯತ್ನಗಳನ್ನು ಮುಂದುವರೆಸುತ್ತಾರೆ’ ಎಂದು ಮುಖ್ಯಮಂತ್ರಿ ಬೆಂಬಲಿಗರಿಗೆ ಭರವಸೆ ನೀಡಿದರು.
ಜುಲೈ 21 ರಂದು ಉತ್ತರ ಪ್ರದೇಶದ ಲಖನೌದಲ್ಲಿನ ಆಸ್ಪತ್ರೆಯಲ್ಲಿ ನಿಧನರಾದ ಮಧ್ಯಪ್ರದೇಶದ ಗವರ್ನರ್ ಲಾಲ್ಜಿ ಟಂಡನ್ ಅವರ ಅಂತ್ಯಕ್ರಿಯೆಯಲ್ಲಿ ಚೌಹಾನ್ ಮತ್ತು ಭಡೋರಿಯಾ ಭಾಗವಹಿಸಿದ್ದರು.
ಇದನ್ನೂ ಓದಿ: ರಾಜ್ಯದ ಅತ್ಯಂತ ಹಿರಿಯ (105) ಕೊರೊನಾ ರೋಗಿ ನಿಧನ


