ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಶಂಕಿತ ಕರೋನವೈರಸ್ ರೋಗಿಯಾಗಿ ಕರೆತಂದ 35 ವರ್ಷದ ವ್ಯಕ್ತಿಯೊಬ್ಬ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಕರೋನವೈರಸ್ ಶಂಕಿತನಾದ ಕಾರಣ ಅವರನ್ನು ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾದ ಕೂಡಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಬಗ್ಗೆ ನೋಡಲ್ ಅಧಿಕಾರಿ ನಮಗೆ ಮಾಹಿತಿ ನೀಡಿದರು. ಅವರನ್ನು ಇಂದು ರಾತ್ರಿ 9 ಗಂಟೆಗೆ ದಾಖಲಿಸಲಾಗಿದೆ. ಅವರು ಇಂದು ಸೂಪರ್ ಸ್ಪೆಷಾಲಿಟಿ ಬ್ಲಾಕ್ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಈ ವ್ಯಕ್ತಿ ಪಂಜಾಬ್ ಮೂಲದವನು ಮತ್ತು ಅವನು ಕಳೆದ ಒಂದು ವರ್ಷದಿಂದ ಸಿಡ್ನಿಯಲ್ಲಿ ವಾಸಿಸುತ್ತಿದ್ದನೆಂದು ತಿಳಿದುಬಂದಿದೆ. ಅವರು ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೊರೊನಾ ಮುನ್ನೆಚ್ಚರಿಕೆ : ಸಾವಿರಾರು ಜನ ಸೇರುವ ಗಾರ್ಮೆಂಟ್ಸ್, ಕಂಪನಿಗಳಿಗೆ ರಜೆ ಇಲ್ಲ ಏಕೆ?


