Homeಮುಖಪುಟಗುಂಪು ಹಲ್ಲೆಯನ್ನು ಸಮರ್ಥಿಸಿದ ಯುವತಿಗೆ ಕುರಾನ್ ಹಂಚುವಂತೆ ಆದೇಶಿಸಿದ ಕೋರ್ಟ್

ಗುಂಪು ಹಲ್ಲೆಯನ್ನು ಸಮರ್ಥಿಸಿದ ಯುವತಿಗೆ ಕುರಾನ್ ಹಂಚುವಂತೆ ಆದೇಶಿಸಿದ ಕೋರ್ಟ್

- Advertisement -
- Advertisement -

ಗುಂಪುಹಲ್ಲೆಯಿಂದ ಮೃತರಾಗಿದ್ದ ತಬ್ರೇಜ್ ಹತ್ಯೆಯನ್ನು ಫೇಸ್ ಬುಕ್ಕಿನಲ್ಲಿ ಸಮರ್ಥಿಸಿ ಬಂಧನಕ್ಕೊಳಗಾಗಿದ್ದ ರಾಂಚಿಯ ರಿಚಾ ಭಾರತಿಗೆ ಅಲ್ಲಿನ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ. ಅದರೆ ಜಾಮೀನು ನೀಡಲು ವಿಧಿಸಿರುವ ಷರತ್ತು ಮಾತ್ರ ವಿಶೇಷವಾಗಿದೆ.

ಮುಸ್ಲೀಮರ ಭಾವನೆಗಳಿಗೆ ದಕ್ಕೆ ತಂದುದಕ್ಕಾಗಿ ನ್ಯಾಯಾಧೀಶ ಮನೀಶ್ ಸಿಂಗ್ ಅವರು ಆಕೆಗೆ ಹದಿನೈದು ದಿನಗಳ ಒಳಗಾಗಿ ಪವಿತ್ರ ಕುರಾನಿನ ಐದು ಪ್ರತಿಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ದಾನ ಮಾಡುವಂತೆ ಷರತ್ತು ವಿಧಿಸಿದೆ.

ಈ ಕುರಿತ ಮಾತನಾಡಿರುವ ಆರೋಪಿ ಪರ ವಕೀಲರಾದ ರಾಮ್ ಪರ್ವೇಶ್ವರ್ ಸಿಂಗ್ ರವರು “ಒಂದು ಪ್ರತಿಯನ್ನು ದೂರುದಾರ ಸದಾರ್ ಅಂಜುಮಾನ್ ಇಸ್ಲಾಮಿಕ್ ಸಂಘಕ್ಕೆ ನೀಡಿ ರಶೀದ ಪಡೆಯಬೇಕು ಜೊತೆಗೆ ಇನ್ನು ನಾಲ್ಕು ಪ್ರತಿಗಳನ್ನು ಲೈಬ್ರರಿ, ಕಾಲೇಜು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ದಾನ ನೀಡಿ ಆ ರಶೀದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿದೆ” ಎಂದಿದ್ದಾರೆ.

ಗುಂಪು ಹತ್ಯೆಯನ್ನು ರಿಚಾ ಭಾರತಿ ಸಮರ್ಥಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದುದ್ದರ ವಿರುದ್ಧ ಪೀಥೋರಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಪೊಲೀಸರು ರಿಚಾರನ್ನು ಬಂಧಿಸಿದ್ದರು. ಇದರಿಂದ ಕುಪಿತಗೊಂಡ ಬಲಪಂಥೀಯ ಸಂಘಟನೆಗಳು, ಸ್ಥಳೀಯ ನಿವಾಸಿಗಳು ಪೊಲೀಸರ ಮೇಲೆ ತೀವ್ರ ರೀತಿಯ ಒತ್ತಡ ತಂದಿದ್ದರು. ಕಳೆದ ಶನಿವಾರ ಪಿಥೋರಿಯಾ ಪೊಲೀಸ್ ಠಾಣೆ ಎದುರು ದೊಡ್ಡ ಪ್ರತಿಭಟನೆ ಸಹ ನಡೆದಿತ್ತು.

ಈಗ ನ್ಯಾಯಾಲಯ ಆಕೆಗೆ ತನ್ನ ತಪ್ಪಿನ ಅರಿವಾಗುವಂತೆ ಮಾಡಲು ಈ ನಿಬಂಧನೆಯನ್ನು ವಿಧಿಸಿದೆ. ಜಾತ್ಯಾತೀತತೆಯ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯೇ ಆಗಿದೆ. ಈ ಹಿಂದೆ 2013ರಲ್ಲಿ ದೆಹಲಿಯ ಹೈಕೋರ್ಟ್ ಶಿಕ್ಷಕಿಯೊಬ್ಬರಿಗೆ ಸುಳ್ಳು ಹೇಳಿದ ಕಾರಣಕ್ಕಾಗಿ ಪ್ರಾಯಶ್ಚಿತವಾಗಿ ಮಹಾತ್ಮ ಗಾಂಧಿಯವರ ಸಮಾಧಿ ಇರುವ ರಾಜ್ ಘಾಟ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸುವಂತೆ ಆದೇಶಿಸಿತ್ತು. ಮತ್ತು ನಿನ್ನೆ ಬಾಲಾಪರಾಧಿಯೊಬ್ಬರು ನಂತರ ಮೆಡಿಕಲ್ ಸ್ಟೂಟೆಂಡ್ ಆದ ನಂತರ ಗಿಡ ನೆಡಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಈಗ ಈ ರಿಚಾ ಭಾರತಿ ರಾಂಚಿ ಕೋರ್ಟಿನ ಆದೇಶವನ್ನು ಯಾವ ರೀತಿ ಪರಿಗಣಿಸುತ್ತಾರೆ ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...